Advertisment

ರೇಣುಕಾಸ್ವಾಮಿ ಮರ್ಡರ್​​ ಕೇಸ್​; ನಟ ದರ್ಶನ್ ವಿರುದ್ಧ ರೌಡಿಶೀಟರ್ ಓಪನ್ ಆಗೋ ಸಾಧ್ಯತೆ!

author-image
Bheemappa
Updated On
ರೇಣುಕಾಸ್ವಾಮಿ ಮರ್ಡರ್​​ ಕೇಸ್​; ನಟ ದರ್ಶನ್ ವಿರುದ್ಧ ರೌಡಿಶೀಟರ್ ಓಪನ್ ಆಗೋ ಸಾಧ್ಯತೆ!
Advertisment
  • ಈ ಹಿಂದೆ ದರ್ಶನ್ ಹೋಟೆಲ್​ನಲ್ಲಿ ಕಿರಿಕ್ ಮಾಡಿಕೊಂಡಿದ್ದರು
  • ರೇಣುಕಾಸ್ವಾಮಿ ಕೇಸ್​ನಲ್ಲಿ ದರ್ಶನ್​ ಮೇಲೆ ಹಾಕಿದ ಸೆಕ್ಷನ್..?
  • ವ್ಯಕ್ತಿಯನ್ನು ಕೊಲೆ ಮಾಡಿರುವ ಕೇಸ್​ನಲ್ಲಿ ಎ2 ಆರೋಪಿ ನಟ

ಚಿತ್ರದುರ್ಗ: ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ಆರೋಪದಲ್ಲಿ ನಟ ದರ್ಶನ್ ಆ್ಯಂಡ್ ಗ್ಯಾಂಗ್ ಅನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸ್ಥಳ ಮಹಜರು ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರೆದಿದೆ. ಇಂದು ಕೂಡ ಚಿತ್ರದುರ್ಗಕ್ಕೆ ಆರೋಪಿಗಳನ್ನು ಕರೆದುಕೊಂಡು ಹೋಗಿ ಪೊಲೀಸರು ಸ್ಥಳ ಮಹಜರು ಮಾಡಲಿದ್ದಾರೆ. ಸದ್ಯ ಇದರ ಬೆನ್ನಲ್ಲೇ ನಟ ದರ್ಶನ್ ವಿರುದ್ಧ ರೌಡಿಶೀಟರ್ ಓಪನ್ ಆಗುತ್ತಾ ಎನ್ನುವ ಪ್ರಶ್ನೆ ಮೂಡಿದೆ.

Advertisment

ಇದನ್ನೂ ಓದಿ: ​IPLನಲ್ಲಿ ಆರ್ಭಟಿಸಿದ್ದ ವಿರಾಟ್​ ವಿಶ್ವಕಪ್​ನಲ್ಲಿ ಸೈಲೆಂಟ್.. ಕೊಹ್ಲಿರನ್ನ ಬೆಂಚ್ ಕಾಯಿಸ್ತಾರಾ ಕ್ಯಾಪ್ಟನ್ ರೋಹಿತ್?

publive-image

ದರ್ಶನ್ ಅವರು ಕನ್ನಡ ಚಲಚಿತ್ರದ ನಟನಾದರು ಯಾವಾಗಲೂ ಯಾವುದಾದರೂ ಕಿರಿಕ್ ಸುದ್ದಿಯಲ್ಲಿರುತ್ತಾರೆ. ಪತ್ನಿ ಮೇಲೆ ಹಲ್ಲೆ, ಹೋಟೆಲ್​ನಲ್ಲಿ ಕಿರಿಕ್ ಮಾಡಿಕೊಂಡಿರುವುದು ಸೇರಿದಂತೆ ಈ ಹಿಂದೆ ಅವರು ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಹಿನ್ನೆಲೆ ಇದೆ. ಸದ್ಯ ಚಿತ್ರದುರ್ಗದ ರೇಣುಕಾಸ್ವಾಮಿ ಕೇಸ್​ಲ್ಲಿ ಸೆಕ್ಷನ್ 302 ಅಡಿ ದರ್ಶನ್ ವಿರುದ್ಧ ದೂರು ದಾಖಲು ಮಾಡಲಾಗಿದೆ. ಇದರಿಂದ ಹಲವು ಪ್ರಕರಣಗಳಲ್ಲಿ ಭಾಗಿಯಾದ ಹಿನ್ನೆಲೆ ಹೊಂದಿದ್ದರಿಂದ‌ ದರ್ಶನ್ ವಿರುದ್ಧ ರೌಡಿಶೀಟರ್ ಓಪನ್‌ ಸಾಧ್ಯತೆ ಇದೆ. ಈ ಬಗ್ಗೆ ಪೊಲೀಸರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment