newsfirstkannada.com

ದರ್ಶನ್​ಗೆ ಹೇಳಬೇಡ ಅಂದಿದ್ರಂತೆ ಪವಿತ್ರಗೌಡ.. ಅನಾಹುತ ಆಗಿದ್ದು ಎಲ್ಲಿ ಗೊತ್ತಾ..?

Share :

Published June 12, 2024 at 10:06am

Update June 12, 2024 at 11:18am

    ಫೇಕ್ ಐಡಿ ಮೂಲಕ ರೇಣುಕಸ್ವಾಮಿ ಮೂಲ ಕೆದಕಿದ್ದ ನಟ ದರ್ಶನ್

    ಫೇಕ್ ಐಡಿಯನ್ನ ಟ್ರೇಸ್ ಮಾಡಿದ ರೀತಿ ಬಗ್ಗೆಯೂ ಅನುಮಾನ

    ಫೇಕ್ ಐಡಿಯಿಂದ ರೇಣುಕಾಸ್ವಾಮಿ, ಚಿತ್ರದುರ್ಗದವನು ಅಂತ ಮಾಹಿತಿ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣದಲ್ಲಿ ನಟ ದರ್ಶನ್, ನಟಿ ಪವಿತ್ರಗೌಡ ಸೇರಿ ಒಟ್ಟು 13 ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸ್ ಅಧಿಕಾರಿಗಳು ಒಂದೊಂದೇ ವಿಚಾರವನ್ನು ಬಯಲಿಗೆ ಎಳೆಯುತ್ತಿದ್ದಾರೆ.

ಕೆಲವು ಮಾಹಿತಿಗಳ ಪ್ರಕಾರ.. ಕೊಲೆಯಾದ ರೇಣುಕಾಸ್ವಾಮಿ ಪವಿತ್ರಗೌಡಗೆ ಪದೇ ಪದೆ ಮೆಸೇಜ್ ಮಾಡ್ತಿದ್ದನಂತೆ. ಅಕೌಂಟ್ ಬ್ಲಾಕ್ ಮಾಡಿದ್ರೂ ಬೇರೆ ಅಕೌಂಟ್​ ಕ್ರಿಯೇಟ್ ಮಾಡಿ ಮೆಸೇಜ್ ಮಾಡುತ್ತಿದ್ದ. ಅಂತೆಯೇ ಫೆಬ್ರವರಿ 27ರಿಂದ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದನಂತೆ. ರೇಣುಕಾಸ್ವಾಮಿಯ ಅಶ್ಲೀಲ ಮೆಸೇಜ್​ಗಳಿಂದ ಪವಿತ್ರಾ ಬೇಸತ್ತಿದ್ದಳು. ಇತ್ತೀಚೆಗೆ ಮರ್ಮಾಂಗದ ಫೋಟೋ ಕಳುಹಿಸಿ ನನ್ನ ಜೊತೆ ಬಾ ಎಂದು ಮೆಸೇಜ್ ಮಾಡಿದ್ದನಂತೆ ಎನ್ನಲಾಗಿದೆ.

ಇದನ್ನೂ ಓದಿ: ಪವಿತ್ರಗೌಡಗೆ ಕಳುಹಿಸಿದ್ನಂತೆ ‘ಆ’ ಫೋಟೋ.. ದರ್ಶನ್​ಗೆ ಗೊತ್ತಾದ ಮೇಲೆ ನಡೆಯಿತು ಅನಾಹುತ..!

ತನ್ನ ಅಕೌಂಟ್​ಗೆ ಈ ರೀತಿ ಮೆಸೇಜ್ ಬರ್ತಿದೆ ಎಂದು ಮನೆ ಕೆಲಸ ಮಾಡುತ್ತಿದ್ದ ಪವನ್​ಗೆ ಪವಿತ್ರಾ ಗೌಡ ಹೇಳಿದ್ದಳಂತೆ. ಅಲ್ಲದೆ, ಈ ವಿಚಾರವನ್ನು ದರ್ಶನ್​ಗೆ ಹೇಳಬೇಡ ಅಂತಲೂ ಸೂಚನೆ ನೀಡಿದ್ದಳಂತೆ. ದರ್ಶನ್​ಗೆ ಹೇಳಿದ್ರೆ ಏನಾದ್ರೂ ಮಾಡಿಬಿಡಬಹುದು ಅನ್ನೋ ಆತಂಕ ಇತ್ತಂತೆ. ಪವಿತ್ರಾ ಗೌಡ ಹೇಳಬೇಡ ಎಂದಿದ್ದರೂ ದರ್ಶನ್ ಗಮನಕ್ಕೆ ಪವನ್ ತಂದಿದ್ದನಂತೆ. ನಾವು ನೋಡಿಕೊಳ್ತೀವಿ ಏನೇನೂ ಗಾಬರಿ ಆಗೋದು ಬೇಡ ಎಂದು ಪವನ್ ಹೇಳಿದ್ದನಂತೆ ಎನ್ನಲಾಗಿದೆ.

ಅಶ್ಲೀಲ ಮೆಸೇಜ್ ಬಗ್ಗೆ ಗೊತ್ತಾದ ಮೇಲೆ ದರ್ಶನ್ ಪ್ಲಾನ್ ಮಾಡಿದ್ದಾರೆ. ಮೆಸೇಜ್ ಕಳಿಸುತ್ತಿರುವ ವ್ಯಕ್ತಿ ಯಾರು ಅಂತ ಹುಡುಕಲು ಪ್ಲಾನ್ ಮಾಡಿ ಫೇಕ್ ಐಡಿ ಕ್ರಿಯೇಟ್ ಮಾಡಿ ರೇಣುಕಾಸ್ವಾಮಿಯ ಮೂಲ ಹುಡುಕಿದ್ದಾರೆ. ರೇಣುಕಾಸ್ವಾಮಿ, ಚಿತ್ರದುರ್ಗದವನು ಎಂದು ಗೊತ್ತಾಗುತ್ತಿದ್ದಂತೆಯೇ ಚಿತ್ರದುರ್ಗ ದರ್ಶನ್ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ರಾಘವೇಂದ್ರಗೆ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ:ಚಾಲೆಂಜಿಂಗ್ ಸ್ಟಾರ್ ದರ್ಶನ್​​ ತನಿಖೆ ಹೆಂಗಿರುತ್ತೆ..? ಆ ಆರು ದಿನಗಳಲ್ಲಿ ರೋಚಕ ಟ್ವಿಸ್ಟ್​..!

ರಾಘವೇಂದ್ರ ಅಲಿಯಾಸ್ ರಘುಗೆ ದರ್ಶನ್ ಕರೆ  ಮಾಡಿ ಮಾಹಿತಿ ಕೊಟ್ಟಿದ್ದಾರಂತೆ. ಅಂತೆಯೇ ಕಳೆದ ಮಂಗಳವಾರ ರಘು, ರೇಣುಕಾಸ್ವಾಮಿಯನ್ನ ಭೇಟಿ ಮಾಡಿದ್ದನಂತೆ. ಈ ವೇಳೆ ರೇಣುಕಾಸ್ವಾಮಿಯ ಮೊಬೈಲ್ ಪರಿಶೀಲನೆ ನಡೆಸಿದ್ದ. ಮೊಬೈಲ್ ಪರಿಶೀಲನೆ ವೇಳೆ ಅಶ್ಲೀಲ ಫೋಟೋ, ವಿಡಿಯೋ ಪತ್ತೆಯಾಗಿದೆ. ಈ ಬಗ್ಗೆ ದರ್ಶನ್​ಗೆ ರಾಘವೇಂದ್ರ ಅಲಿಯಾಸ್ ರಘು ಮಾಹಿತಿ ನೀಡಿದ್ದಾನೆ. ಅಂತೆಯೇ ರೇಣುಕಾಸ್ವಾಮಿಯನ್ನ ಬೆಂಗಳೂರಿಗೆ ಕರೆತರುವಂತೆ ದರ್ಶನ್ ಸೂಚನೆ ನೀಡಿದ್ದರು ಎನ್ನಲಾಗಿದೆ.

ಮೊದಲಿಗೆ ದರ್ಶನ್ ಹೆಸರು ಪ್ರಸ್ತಾಪವಾಗಿತ್ತು, ಆದರೀಗ ಪೊಲೀಸರೆದುರು ಆರೋಪಿಗಳ ಹೇಳಿಕೆಯಲ್ಲಿ ಸ್ವಲ್ಪ ಟ್ವಿಸ್ಟ್​ಗಳೂ ಇವೆ. ಹೀಗಾಗಿ ನಿಜಕ್ಕೂ ಇದೇ ರೀತಿಯಲ್ಲಿ ಘಟನೆಗಳು ನಡೆದಿವೆಯಾ ಅನ್ನೋ ಬಗ್ಗೆ ಪೊಲೀಸರಿಗೂ ಅನುಮಾನ ಶುರುವಾಗಿದೆಯಂತೆ. ಘಟನೆಗಳು ಹೀಗೇ ನಡೆದಿವೆಯಾ ಅಥವಾ ದರ್ಶನ್ ಮತ್ತು ಪವಿತ್ರಾ ಗೌಡರನ್ನ ಬಚಾವ್ ಮಾಡೋಕೆ ಆರೋಪಿಗಳು ಈ ರೀತಿಯಲ್ಲಿ ಹೇಳ್ತಿದ್ದಾರಾ ಅನ್ನೋ ಅನುಮಾನವಿದ್ದು, ಪೊಲೀಸರು ಈ ನಿಟ್ಟಿನಲ್ಲೂ ತನಿಖೆಯನ್ನ ಮುಂದುವರಿಸುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಲಾಕಪ್​​ನಲ್ಲಿ ಚಾಲೆಂಜಿಂಗ್ ಸ್ಟಾರ್.. ನಿನ್ನೆ ರಾತ್ರಿ ಕಳಂಕಿತ ಡಿ ಗ್ಯಾಂಗ್​​ಗೆ ಪೊಲೀಸರ ಆತಿಥ್ಯ ಹೇಗಿತ್ತು..?​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್​ಗೆ ಹೇಳಬೇಡ ಅಂದಿದ್ರಂತೆ ಪವಿತ್ರಗೌಡ.. ಅನಾಹುತ ಆಗಿದ್ದು ಎಲ್ಲಿ ಗೊತ್ತಾ..?

https://newsfirstlive.com/wp-content/uploads/2024/06/DARSHAN-14.jpg

Load More