Advertisment

ರೇಣುಕಾಸ್ವಾಮಿ ಕ್ರೂರ ಕೊಲೆ‌ ಕೇಸ್‌ಗೆ ಮೇಜರ್ ಟ್ವಿಸ್ಟ್.. ತನಿಖಾಧಿಕಾರಿ ದಿಢೀರ್ ಬದಲಾವಣೆ; ಯಾಕೆ?

author-image
Bheemappa
Updated On
ಕೊಲೆಗೆ ಮುನ್ನ ದರ್ಶನ್​ ಗ್ಯಾಂಗ್​ ಕೊಟ್ಟ ಹಿಂಸೆ ಬಗ್ಗೆ ಸತ್ಯ ಬಿಚ್ಚಿಟ್ಟ ರೇಣುಕಾಸ್ವಾಮಿ ತಂದೆ.. ಏನಂದ್ರು?
Advertisment
  • ಹೊಸ ತನಿಖಾಧಿಕಾರಿ ನೇತೃತ್ವದಲ್ಲಿ ಹೇಗೆ ನಡೆಯಲಿದೆ ಕೊಲೆಯ ತನಿಖೆ?
  • ತನಿಖೆ ಚುರುಕಿನಿಂದ ನಡೆಯುವಾಗಲೇ ತನಿಖಾಧಿಕಾರಿಯಾಗಿ ಚೇಂಜ್
  • ಎಲೆಕ್ಷನ್​ಗಾಗಿ ಕಾಮಾಕ್ಷಿಪಾಳ್ಯಕ್ಕೆ ವರ್ಗಾವಣೆ ಆಗಿದ್ರಾ ಗಿರೀಶ್ ನಾಯ್ಕ್?

ಬೆಂಗಳೂರು: ಪವಿತ್ರಾ ಗೌಡಗೆ ಅಶ್ಲೀಲ ಮೇಸೆಜ್‌, ಫೋಟೋ ಕಳಿಸಿದ ಎಂದು ರೇಣುಕಾಸ್ವಾಮಿಯನ್ನು ಕೊಲೆ ಮಾಡಲಾಗಿದೆ. ಈ ಪ್ರಕರಣ ಸಂಬಂಧ ನಟ ದರ್ಶನ್, ಪವಿತ್ರಾ ಗೌಡ ಸೇರಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳ ಮಹಜರು, ವಿಚಾರಣೆ ಸೇರಿದಂತೆ ಎಲ್ಲ ತನಿಖೆ ಸುಗಮವಾಗಿ ನಡೆಯುತ್ತಿರುವಾಗಲೇ ರೇಣುಕಾಸ್ವಾಮಿ ಕೇಸ್​ನ ತನಿಖಾಧಿಕಾರಿನ್ನು ಬದಲಾವಣೆ ಮಾಡಲಾಗಿದೆ.

Advertisment

ಇದನ್ನೂ ಓದಿ:ದರ್ಶನ್​, ಪವಿತ್ರಾ ಜೈಲು ಸೇರಿದ ಬೆನ್ನಲ್ಲೇ ಮತ್ತೆ ಬಿಗ್ ಟ್ವಿಸ್ಟ್​ ಕೊಟ್ಟ ಪತ್ನಿ ವಿಜಯಲಕ್ಷ್ಮಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ಆರೋಪದಲ್ಲಿ ನಟ ದರ್ಶನ್ ಆ್ಯಂಡ್ ಗ್ಯಾಂಗ್ ಅನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಎ1 ಆರೋಪಿಯಾಗಿ ಪವಿತ್ರಾ ಗೌಡರನ್ನ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಆದರೆ ಇದರ ಬೆನ್ನಲ್ಲೇ ತನಿಖಾಧಿಕಾರಿಯನ್ನು ಬದಲಾವಣೆ ಮಾಡಲಾಗಿದೆ. ಕೇಸ್ ಪ್ರಾರಂಭದಿಂದ ಕಾಮಾಕ್ಷಿಪಾಳ್ಯದ ಇನ್​​ಸ್ಪೆಕ್ಟರ್​ ಗಿರೀಶ್ ನಾಯ್ಕ್ ಅವರು ತನಿಖಾಧಿಕಾರಿ ಆಗಿದ್ದರು.

ಇದನ್ನೂ ಓದಿ: ಪತ್ನಿ ಮೇಲೆ ಕೋಪ ಮಾಡಿಕೊಂಡ್ರಾ ಧೋನಿ.. ಫಾರಿನ್ ಟ್ರಿಪ್​ಗೆ ಹೋದ್ರೂ ತಪ್ಪುತ್ತಿಲ್ಲ ಆಭಿಮಾನಿಗಳ ಅಭಿಮಾನ

Advertisment

publive-image

ಆದರೆ ಗಿರೀಶ್ ನಾಯ್ಕ್ ಅವರ ಬದಲಿಗೆ ಇಂದಿನಿಂದ ಎಸಿಪಿ ಚಂದನ್ ತನಿಖಾಧಿಕಾರಿಯಾಗಿ ನೇಮಕವಾಗಿದ್ದಾರೆ. ಇನ್ಮುಂದೆ ಎಸಿಪಿ ಚಂದನ್​ ಅವರ ಸೂಚನೆಯಲ್ಲೇ ರೇಣುಕಾಸ್ವಾಮಿ ಕೊಲೆ ಕೇಸ್ ಮುಂದೆ ಸಾಗಲಿದೆ. ಗಿರೀಶ್​ ಅವರ ಬದಲಿಗೆ ಚಂದನ್​ ನೇಮಕದ ಮುಖ್ಯ ಕಾರಣವೆಂದರೆ, ಚುನಾವಣೆ ಹಿನ್ನೆಲೆಯಲ್ಲಿ ಇನ್​​ಸ್ಪೆಕ್ಟರ್​ ಗಿರೀಶ್ ನಾಯ್ಕ್​​​ರನ್ನ ಕಾಮಾಕ್ಷಿಪಾಳ್ಯ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಈಗ ಚುನಾವಣೆ ಎಲ್ಲ ಮುಗಿದಿದ್ದರಿಂದ 2 ದಿನಗಳ‌ ಹಿಂದೆಯೇ ಪುನಃ ತಮ್ಮ ಠಾಣೆಗೆ ಮರಳಬೇಕು ಎಂದು ಆದೇಶ ಬಂದಿತ್ತು. ಇದರಿಂದಾಗಿ ತನಿಖಾಧಿಕಾರಿಯನ್ನು ಚೇಂಜ್ ಮಾಡಲಾಗಿದೆ. ಮುಂದಿನ ತನಿಖೆಯ ದೃಷ್ಟಿಯಿಂದ ತನಿಖಾಧಿಕಾರಿಯನ್ನ ಬದಲಾವಣೆ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment