newsfirstkannada.com

ರೇಣುಕಾಸ್ವಾಮಿ ಕೊಲೆ ಕೇಸ್​​.. ಇಂದು ಚಿತ್ರದುರ್ಗದಲ್ಲಿ ನ್ಯಾಯಕ್ಕೆ ಒತ್ತಾಯಿಸಿ ಬೃಹತ್​ ಹೋರಾಟ!

Share :

Published June 12, 2024 at 6:14am

    ಇಂದಿನ ಬೃಹತ್ ಪ್ರತಿಭಟನೆಯಲ್ಲಿ ಸಾವಿರಾರು ಜನರು ಸೇರುವ ಸಾಧ್ಯತೆ

    ನಗರದ ನೀಲಕಂಠೇಶ್ವರ ದೇಗುಲದಿಂದ ಡಿಸಿ ಕಚೇರಿವರೆಗೆ ಪ್ರತಿಭಟನೆ

    ಪ್ರತಿಭಟನೆಯಲ್ಲಿ ಹಲವು ಸಮುದಾಯದ ಸಾಕಷ್ಟು ಮುಖಂಡರು ಭಾಗಿ

ಚಿತ್ರದುರ್ಗ: ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ನಟ ದರ್ಶನ್ ಹಾಗೂ ಸಹಚರರು ಅರೆಸ್ಟ್ ಆಗಿದ್ದಾರೆ. ಇನ್ನು, ರೇಣುಕಾಸ್ವಾಮಿ ಅಮಾನುಷ ಹತ್ಯೆಯನ್ನು ಖಂಡಿಸಿ ಇಂದು ಚಿತ್ರದುರ್ಗದ ವೀರಶೈವ ಸಮಾಜ, ವೀರಶೈವ ಲಿಂಗಾಯತ ಮಹಾಸಭಾ, ಜಂಗಮ ಸಮುದಾಯದ ಮುಖಂಡರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಜೊತೆಗೆ ಇನ್ನೂ ಕೆಲವು ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಲಿವೆ.

ಇದನ್ನೂ ಓದಿ: ‘ದರ್ಶನ್​​ಗೂ ಕೊಲೆಗೂ ಸಂಬಂಧ ಇಲ್ಲ ಎಂದ ವಕೀಲರು; ಕೋರ್ಟ್​ನಲ್ಲಿ ಮಂಡಿಸಿದ್ದೇನು..?

ಇನ್ನು, ಚಿತ್ರದುರ್ಗದ ನೀಲಕಂಠೇಶ್ವರ ದೇಗುಲದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ಱಲಿ ನಡೆಯಲಿದ್ದು, ಬಳಿಕ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತಿದೆ. ರೇಣುಕಾಸ್ವಾಮಿ ಹತ್ಯೆಯನ್ನು ಈಗಾಗಲೇ ಜಿಲ್ಲಾ ವೀರಶೈವ ಸಮಾಜ ಖಂಡಿಸಿದ್ದು, ಇಂದು ಜಿಲ್ಲೆಯ ಪ್ರಮುಖ ವೀರಶೈವ ನೇತಾರರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.

ಚಿತ್ರದುರ್ಗದ ನಿವಾಸಿಯಾಗಿದ್ದ ರೇಣುಕಾ ಸ್ವಾಮಿ ವೀರಶೈವ ಸಮುದಾಯದವರಾಗಿದ್ದು, ಅವರ ಸ್ನೇಹಿತರು, ಬಂಧುಗಳು ಹೇಳುವಂತೆ ಸೌಮ್ಯ ಸ್ವಭಾವದ ನಿರುಪದ್ರವಿ ವ್ಯಕ್ತಿಯಾಗಿದ್ದ. ಬಡ ಮಧ್ಯಮ ಕುಟುಂಬಕ್ಕೆ ಸೇರಿದ ರೇಣುಕಾ ಸ್ವಾಮಿ ಕಳೆದ ವರ್ಷವಷ್ಟೆ ವಿವಾಹವಾಗಿದ್ದ. ರೇಣುಕಾ ಸ್ವಾಮಿಯ ಪತ್ನಿ ಈಗ ಐದು ತಿಂಗಳ ಗರ್ಭಿಣಿ. ಮನೆಯಲ್ಲಿ ನಿವೃತ್ತ ತಂದೆ, ತಾಯಿ ವಯಸ್ಸಾದ ಇಬ್ಬರು ಅಜ್ಜಿಯರಿದ್ದಾರೆ. ಸದ್ಯ ಮಗನನ್ನು ಕಳೆದುಕೊಂಡ ದುಃಖದಲ್ಲಿ ಪೋಷಕರ ಆಕ್ರಂದನ ಮುಗಿಲು ಮಿಟ್ಟಿದೆ.

ಇದನ್ನೂ ಓದಿ: BREAKING: ಕೊಲೆ ಕೇಸಲ್ಲಿ ದರ್ಶನ್​ ಮತ್ತು ಗ್ಯಾಂಗ್​ಗೆ ಬಿಗ್​​ ಶಾಕ್​​.. ಕೋರ್ಟ್​​ ಮಹತ್ವದ ಆದೇಶ

ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿಚಾರಣೆ ನಡೆಸಿದ 24ನೇ ಆರ್ಥಿಕ ಅಪರಾಧಗಳ ಕೋರ್ಟ್​ನ ಜಡ್ಜ್ ವಿಶ್ವನಾಥ್ ಸಿ. ಗೌಡರ್ ಅವರು ನಟಿ ಪವಿತ್ರಾ ಗೌಡ, ನಟ ದರ್ಶನ್ & ಟೀಂ ಅನ್ನು 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಮಹತ್ವದ ಆದೇಶ ಹೊರಡಿಸಿದ್ದಾರೆ. ರೇಣುಕಾಸ್ವಾಮಿ ಕಿಡ್ನಾಪ್ & ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ 13 ಜನ ಬಂಧಿತ ಆರೋಪಿಗಳು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೇಣುಕಾಸ್ವಾಮಿ ಕೊಲೆ ಕೇಸ್​​.. ಇಂದು ಚಿತ್ರದುರ್ಗದಲ್ಲಿ ನ್ಯಾಯಕ್ಕೆ ಒತ್ತಾಯಿಸಿ ಬೃಹತ್​ ಹೋರಾಟ!

https://newsfirstlive.com/wp-content/uploads/2024/06/renukaswami.jpg

Load More