/newsfirstlive-kannada/media/post_attachments/wp-content/uploads/2024/06/Darshan-Pavithra-Gowda-Arrest.jpg)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರ ತನಿಖೆ ಚುರುಕಾಗಿದೆ. ನಟ ದರ್ಶನ್ ಅವರನ್ನು ಬಂಧಿಸಿದ ಬಳಿಕ ಮತ್ತಷ್ಟು ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿರುವ ಪೊಲೀಸರು ಮತ್ತಷ್ಟು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಮರ್ಮಾಂಗಕ್ಕೆ ಹೊಡೆತ, ಮೂಗು ಓಪನ್, ಪಕ್ಕೆಲುಬು ಕಟ್; ಅತ್ಯಂತ ಕ್ರೂರವಾಗಿ ರೇಣುಕಾಸ್ವಾಮಿ ಕೊಲೆ!
ರೇಣುಕಾಸ್ವಾಮಿ ಕಿಡ್ನ್ಯಾಪ್ ಹಾಗೂ ಕೊಲೆ ಮಾಡಿದ ಈ ಕೇಸ್‌ನಲ್ಲಿ ನಟ ದರ್ಶನ್ ಸೇರಿ ಒಟ್ಟು 13 ಮಂದಿಯನ್ನ ಬಂಧನ ಮಾಡಲಾಗಿದೆ. ದರ್ಶನ್ ಅವರ ಜೊತೆಗೆ ಅರೆಸ್ಟ್ ಮಾಡಲಾಗಿರುವ 13 ಮಂದಿಯ ಮೇಲೂ ರೇಣುಕಾಚಾರ್ಯ ಅವರ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪ ಕೇಳಿ ಬಂದಿದೆ.
ಕೊಲೆ ಪ್ರಕರಣದಲ್ಲಿ ಬಂಧಿತರು
- ದರ್ಶನ್ ತೂಗುದೀಪ - ಚಾಲೆಂಜಿಂಗ್ ಸ್ಟಾರ್
- ಪವಿತ್ರಾ ಗೌಡ - ದರ್ಶನ್ ಸ್ನೇಹಿತೆ
- ವಿನಯ್ ವಿ - ಜಯಣ್ಣ ಫಾರ್ಮ್​ ಹೌಸ್​
- ನಾಗರಾಜು ಆರ್​ - ರಾಮಕೃಷ್ಣ ನಗರ ಮೈಸೂರು
- ಲಕ್ಷ್ಮಣ್​ ಎಂ - ಆರ್​ಪಿಸಿ ಲೇಔಟ್​, ಬೆಂಗಳೂರು
- ಪ್ರದೋಶ್​ ಎಸ್ - ಗಿರಿನಗರ
- ಪವನ್ ಕೆ - ಚನ್ನಪಟ್ಟಣ (ಆರ್​ ಆರ್​ ನಗರದಲ್ಲಿ ವಾಸ)
- ದೀಪಕ್ ಕುಮಾರ್​ ಎಂ - ಆರ್​ ಆರ್​ ನಗರ
- ನಂದೀಶ್​ - ಮಂಡ್ಯ (ಆರ್​ಆರ್​ ನಗರ ವಾಸ)
- ಕಾರ್ತಿಕ್​ - ಗಿರಿ ನಗರ
- ನಿಖಿಲ್ ನಾಯಕ್​ - ಬನ್ನೇರುಘಟ್ಟ ಮೇನ್​, ಕೆಂಬತ್ತಳ್ಳಿ ಗೊಟ್ಟಿಗೇರಿ
- ರಾಘವೇಂದ್ರ @ ರಾಘು - ಕೋಳಿಹಟ್ಟಿ ದೊಡ್ಡ ಪೇಟೆ, ಚಿತ್ರದುರ್ಗ
- ಕೇಶವ ಮೂರ್ತಿ - ಗಿರಿನಗರ
/newsfirstlive-kannada/media/post_attachments/wp-content/uploads/2024/06/Darshan-Arrest-2.jpg)
ರೇಣುಕಾಸ್ವಾಮಿ ಅವರನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಲಾಗಿದೆ ಅನ್ನೋ ಆರೋಪದಲ್ಲಿ ಪೊಲೀಸರು ಸಾಕ್ಷ್ಯಗಳನ್ನು ಕಲೆ ಹಾಕುತ್ತಿದ್ದಾರೆ. ಆರೋಪಿಗಳನ್ನು ಬಂಧಿಸಿದ ಪೊಲೀಸರು ಠಾಣೆಗೆ ವೈದ್ಯರನ್ನು ಕರೆಯಿಸಿಕೊಂಡು ಮೆಡಿಕಲ್ ಟೆಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ದರ್ಶನ್ ಆಪ್ತನ ಶೆಡ್‌ನಲ್ಲಿ ಕೊಲೆ ಮಾಡಿದ ಸುಳಿವು.. ಆಟೋದಲ್ಲಿ ಶವ ಶಿಫ್ಟ್? ಅಸಲಿಗೆ ಆಗಿದ್ದೇನು?
ಸದ್ಯ ದರ್ಶನ್, ಪವಿತ್ರಗೌಡ ಸೇರಿದಂತೆ ಒಟ್ಟು ನಾಲ್ವರಿಗೆ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಮೆಡಿಕಲ್ ಚೆಕಪ್ ಮಾಡಲಾಗಿದೆ. ಉಳಿದ 9 ಮಂದಿಗೆ ಬೆಳಗ್ಗೆಯೇ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಮೆಡಿಕಲ್ ಚೆಕಪ್ ಮಾಡಿಸಿ ಪೊಲೀಸರು ಕರೆತಂದಿದ್ದಾರೆ. ಬಂಧಿತ ಆರೋಪಿಗಳ ಮೆಡಿಕಲ್ ಟೆಸ್ಟ್ ಮುಗಿದ ಬಳಿಕ ಇಂದು ಸಂಜೆ 4:30ಕ್ಕೆ ACMM ಕೋರ್ಟ್‌ಗೆ ಹಾಜರುಪಡಿಸಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us