Advertisment

ರೇಣುಕಾಸ್ವಾಮಿ ಮೈ ಮೇಲಿದ್ದ ಗೋಲ್ಡ್ ಏನಾಯ್ತು? ದರ್ಶನ್​​ ಮತ್ತು ಟೀಂ ಅದನ್ನೂ ಬಿಟ್ಟಿಲ್ವಾ?

author-image
AS Harshith
Updated On
ಪದೇ ಪದೇ ಸಿಗರೇಟ್‌ ಕೇಳಿದ್ದಕ್ಕೆ ದರ್ಶನ್‌ಗೆ ವಾರ್ನಿಂಗ್‌; ಕೊನೆಗೂ ಅಶ್ಲೀಲ ಮೆಸೇಜ್ ಸೀಕ್ರೆಟ್‌ ರಿವೀಲ್‌!
Advertisment
  • ರೇಣುಕಾಸ್ವಾಮಿಯ ಗೋಲ್ಡ್​ ಚೈನ್​, ಉಂಗುರ, ಬೆಳ್ಳಿಯ ಕರಡಗಿ ಎಲ್ಲೋಯ್ತು?
  • ಪೊಲೀಸರಿಂದ ತಪಾಸಣೆ.. ಆರೋಪಿಗಳ ಮೇಲೆ ಅನುಮಾನ
  • ಮಹಜರ್​ಗೆ ಚಿತ್ರದುರ್ಗಕ್ಕೆ ಆಗಮಿಸಿದ ಬೆಂಗಳೂರು ಪೊಲೀಸರು

ಚಿತ್ರದುರ್ಗ: ದರ್ಶನ್​ ಮತ್ತು ಟೀಂ ಕೈಯಾರೆ ಕೊಲೆಯಾದ ರೇಣುಕಾಸ್ವಾಮಿ ಮೈ ಮೇಲಿದ್ದ ಗೋಲ್ಡ್ ಏನಾಯಿತು ಎಂಬ ಪ್ರಶ್ನೆ ಪೊಲೀಸರನ್ನು ಕಾಡಿದೆ. ಸದ್ಯ ಈ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.

Advertisment

ರೇಣುಕಾಸ್ವಾಮಿ ಮೇಲಿದ್ದ ಗೋಲ್ಡ್​ ವಿಚಾರವಾಗಿ ನಿನ್ನೆ ತಡರಾತ್ರಿ ಆರೋಪಿ ರಘು ಮನೆ ತಪಾಸಣೆ ನಡೆಸಲಾಗಿದೆ. ಆದರೆ ರಘು ಮನೆಯಲ್ಲಿ ರೇಣುಕಾಸ್ವಾಮಿಗೆ ಸಂಬಂಧಿಸಿದ ಗೋಲ್ಡ್ ಚೈನ್, ಉಂಗುರ, ಬೆಳ್ಳಿಯ ಕರಡಗಿ ಯಾವುದು ಪತ್ತೆಯಾಗಿಲ್ಲ. ಹೀಗಾಗಿ ಆರೋಪಿಗಳು ಆಭರಣಗಳನ್ನು ಗಿರವಿ ಇಟ್ಟಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ದರ್ಶನ್ ಮತ್ತು ವಿನಯ್ ಫ್ರೆಂಡ್​ಶಿಪ್ ಶುರುವಾಗಿದ್ದೇ ಇಲ್ಲಿಂದ! ಇಬ್ಬರನ್ನು ಪರಿಚಯಿಸಿದ್ದು ಆ ನಟ!

ಇಂದು ಪೊಲೀಸರು ಗಿರವಿ ಅಂಗಡಿ ತಪಾಸಣೆ ನಡೆಸುವ ಸಾಧ್ಯತೆ ಇದೆ. ಆರೋಪಿಗಳ ಸಮ್ಮುಖದಲ್ಲಿ ಪೊಲೀಸರು ತಪಾಸಣೆ ನಡೆಸಲಿದ್ದಾರೆ. ಈ ಹಿನ್ನೆಲೆ ಸ್ಥಳ ಮಹಜರ್ ಗೆ ಬೆಂಗಳೂರು ಪೊಲೀಸರು ಚಿತ್ರದುರ್ಗಕ್ಕೆ ಆಗಮಿಸಿದ್ದಾರೆ.

Advertisment

ಇದನ್ನೂ ಓದಿ: ಸಾಕ್ಷ್ಯ ನಾಶಕ್ಕೆ ಮುಂದಾಗಿದ್ದ ದರ್ಶನ್​ ಆ್ಯಂಡ್​ ಗ್ಯಾಂಗ್​.. ಇಂದು ಮತ್ತೊಮ್ಮೆ ಪೊಲೀಸರಿಂದ ವಿಚಾರಣೆ

ನಿನ್ನೆ ರಾತ್ರಿ ಚಿತ್ರದುರ್ಗಕ್ಕೆ ಆಗಮಿಸಿ ಖಾಸಗಿ ಹೋಟಲ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಕಿಡ್ನಾಪ್ ಕೇಸ್ ಗೆ ಸಂಬಂಧಪಟ್ಟ ವಾಹನಗಳನ್ನು ಇಂದು ಸೀಸ್ ಮಾಡುವ ಸಾಧ್ಯತೆ ಇದೆ. ಬೈಕ್, ಕಾರ್ ಹಾಗೂ ಆಟೋವನ್ನು ಪೊಲೀಸರು ಸೀಸ್ ಮಾಡಲಿದ್ದಾರೆ. ಜೊತೆಗೆ ಕಿಡ್ನಾಪರ್ಸ್ ಗೆ ಸಿಕ್ಕ 5 ಲಕ್ಷ ಹಣ ಸೀಜ್ ಮಾಡಲು ಪೊಲೀಸರು ಬಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment