newsfirstkannada.com

ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೂ ಚಿಕ್ಕಣ್ಣನಿಗೂ ಸಂಬಂಧವೇನು.. ಕೊಲೆ ಕೇಸ್​ಗೆ ಸಿಕ್ಕ ಹೊಸ ಟ್ವಿಸ್ಟ್?

Share :

Published June 17, 2024 at 7:29pm

  ದರ್ಶನ್​ ಕೇಸ್​ನಿಂದ ಹಾಸ್ಯ ನಟ ಚಿಕ್ಕಣ್ಣನಿಗೂ ಎದುರಾಯಿತಾ ಸಂಕಷ್ಟ?

  ವಿನಯ್ ಸ್ಟೋನಿ ಬ್ರೂಕ್​ನಲ್ಲಿ ಮೊದಲು ನಡೆದಿತ್ತು ಕಲರ್​ಫುಲ್ ಪಾರ್ಟಿ

  ಜೆಟ್​ಲ್ಯಾಗ್ ಪಾರ್ಟಿಯಲ್ಲೂ ಇದ್ದ ನಟ ಚಿಕ್ಕಣ್ಣ, ವಿಚಾರಣೆಗೆ ಹಾಜರು

ರೇಣುಕಾಸ್ವಾಮಿ ಮರ್ಡರ್ ಮಿಸ್ಟ್ರೀ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ತಿದೆ. ಒಂದೊಂದು ದಿನವೂ ಒಂದೊಂದು ಹೊಸ ವಿಚಾರ ರಿವೀಲ್ ಆಗ್ತಿದ್ದು ಇದೀಗ ಈ ಪ್ರಕರಣದ ಮಸಿ ಮತ್ತೊಬ್ಬ ನಟನಿಗೂ ತಟ್ಟಿದೆ. ಹಾಸ್ಯ ನಟ ಚಿಕ್ಕಣ್ಣನಿಗೂ ಸಂಕಷ್ಟ ಎದುರಾಗಿದೆ. ಅಷ್ಟಕ್ಕೂ ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೂ ಹಾಸ್ಯನಟ ಚಿಕ್ಕಣ್ಣನಿಗೂ ಸಂಬಂಧವೇನು? ಕೊಲೆ ಕೇಸ್​​ನಲ್ಲಿ ಸಿಕ್ಕ ಹೊಸ ಟ್ವಿಸ್ಟ್ ಏನು?.

ಎಲ್ಲ ಚೆನ್ನಾಗಿದಿದ್ರೆ ದರ್ಶನ್​ ವೀಕೆಂಡ್​ನಲ್ಲಿ ಪಾರ್ಟಿ ಮೂಡ್​ನಲ್ಲಿರ್ತಿದ್ರು. ಆದ್ರೆ ಎಚ್ಚರದಿಂದ ಇರಬೇಕಾದ ವಿಷಯದಲ್ಲಿ ದೊಡ್ಡ ಯಡವಟ್ಟು ಮಾಡ್ಕೊಂಡು ದರ್ಶನ್ ಈಗ ಜೈಲು ಸೇರಿದ್ದಾರೆ. ಆದ್ರೆ ಒಬ್ಬ ಮಾಡಿದ ಎಡವಟ್ಟಿಗೆ 10 ಕ್ಕೂ ಹೆಚ್ಚು ಕುಟುಂಬಗಳು ಸಂಕಷ್ಟ ಅನುಭವಿಸುತ್ತಿವೆ. ಆದ್ರೀಗ ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಸದ್ಯ ಸಿಕ್ಕಿರೋ ಮಾಹಿತಿಯ ಪ್ರಕಾರ, ತನಿಖೆ ನಡೆಸ್ತಿರೋ ಪೊಲೀಸರು, ಹಾಸ್ಯ ನಟ ಚಿಕ್ಕಣ್ಣಗೆ ನೋಟಿಸ್ ನೀಡಿದ್ದಾರೆ ಅಂತಾ ಹೇಳಲಾಗ್ತಿದೆ. ವಿಚಾರಣೆಗೆ ಹಾಜರಾಗುವಂತೆ ಚಿಕ್ಕಣ್ಣಗೆ ನೋಟಿಸ್ ನೀಡಲಾಗಿದೆ. ಅಷ್ಟಕ್ಕೂ ಚಿಕ್ಕಣನಿಗೂ ಈ ಕೇಸ್​ಗೂ ಸಂಬಂಧವೇನು?. ಅದಕ್ಕೂ ಮೊದಲು ಕೊಲೆಗು ಮುಂಚೆ ದರ್ಶನ್ ಆ್ಯಂಡ್ ಗ್ಯಾಂಗ್ ಮಾಡಿದ್ದ ಪಾರ್ಟಿ ಮಾಡಿತ್ತಾ?.

ಇದನ್ನೂ ಓದಿ: ಭೀಕರ ರೈಲು ದುರಂತದಲ್ಲಿ ಉಸಿರು ಚೆಲ್ಲಿದ 5 ಪ್ರಯಾಣಿಕರು.. 25 ಮಂದಿ ಗಂಭೀರ; ಸಾವಿನ ಸಂಖ್ಯೆ ಹೆಚ್ಚಾಗೋ ಸಾಧ್ಯತೆ

ರೇಣುಕಾಸ್ವಾಮಿ ಕೊಲೆಗೂ ಮುನ್ನ ಭರ್ಜರಿ ಪಾರ್ಟಿ!

ರೇಣುಕಸ್ವಾಮಿ ಕೊಲೆ ಕೇಸ್​ಗೆ ಹೊಸ ತಿರುವು ಸಿಕ್ಕಿದ್ದು.. ಹತ್ಯೆ ಮಾಡೋಕು ಮುನ್ನ ದರ್ಶನ್ ಗ್ಯಾಂಗ್ ಭರ್ಜರಿ ಪಾರ್ಟಿ ಮಾಡಿತ್ತು ಅನ್ನೋ ವಿಚಾರ ಬಯಲಾಗಿದೆ. ದರ್ಶನ್​ ಪಾರ್ಟಿ ಪ್ರಿಕ್ ಅಂತ ಹೊಸದಾಗಿ ಹೇಳಬೇಕೆನಿಲ್ಲ.. ವೀಕೆಂಡ್​ನಲ್ಲಿ ದರ್ಶನ್​ ಪಾರ್ಟಿ ಮೂಡ್​ನಲ್ಲಿರ್ತಾರೆ.. ಅದ್ರಂತೆ ಕೊಲೆ ನಡೆಯುವ ಮುನ್ನ ಅಂದ್ರೆ ಶನಿವಾರ ಮಧ್ಯಾಹ್ನ ದರ್ಶನ್ ಆ್ಯಂಡ ಪಟಾಲಂ ಫುಲ್ ಜಾಲಿ ಮೂಡ್​ನಲ್ಲಿದ್ರಂತೆ. ಇನ್ನೋರ್ವ ಕೊಲೆ ಆರೋಪಿ ವಿನಯ್​ ಮಾಲೀಕತ್ವದ ಸ್ಟೋನಿ ಬ್ರೂಕ್​ನಲ್ಲಿ ಫುಲ್ ಪಾರ್ಟಿ ಮಾಡಿದ್ರು ಅನ್ನೋದು ತನಿಖೆಯಲ್ಲಿ ಬಯಲಾಗಿರುವ ವಿಚಾರ

ದರ್ಶನ್ ಬರ್ತ್​ಡೇ ಸಿನಿಮಾ ಕಾರ್ಯಕ್ರಮ ಇದ್ರೂ ಅದು ಇದೇ ಸ್ಟೋನಿ ಬ್ರೂಕ್​​ನಲ್ಲೇ ನಡೀತಾ ಇತ್ತು ಅಂತ. ಕೊಲೆಗೂ ಮುನ್ನ ಇದೇ ಸ್ಟೋನಿ ಬ್ರೂಕ್​​ನಲ್ಲಿ ಭರ್ಜರಿ ಪಾರ್ಟಿ ನಡೆದಿತ್ತು ಎನ್ನಲಾಗಿದೆ. ಆದ್ರೀಗ ಹೊಸ ವಿಚಾರ ಏನಂದ್ರೆ ಈ ಪಾರ್ಟಿಯಲ್ಲಿ ಸ್ಯಾಂಡಲ್​ವುಡ್​ನ ಹಾಸ್ಯ ನಟ ಚಿಕ್ಕಣ್ಣ ಭಾಗಿಯಾಗಿದ್ದ ಅನ್ನೋ ಸ್ಫೋಟಕ ಮಾಹಿತಿ ಹೊರ ಬಿದ್ದಿದ್ದು. ಈಗ ಆ ಚಿಕ್ಕಣ್ಣನಿಗೂ ಸಂಕಷ್ಟ ಎದುರಾಗಿದೆ.

ಹಾಸ್ಯನಟ ಚಿಕ್ಕಣ್ಣನಿಗೆ ಕಾಮಾಕ್ಷಿಪಾಳ್ಯ ಪೊಲೀಸರ ನೋಟಿಸ್

ದರ್ಶನ್ ಸಹವಾಸ ಮಾಡಿದವರೇ ಯಾರೇ ಇರಲಿ ಅವರಿಗೆ ಪೊಲೀಸ್ ಠಾಣೆ ಮೆಟ್ಟಿಲು ಹತ್ತೋದು ತಪ್ಪೋದಿಲ್ಲ ಅನ್ಸುತ್ತೆ. ಯಾಕಂದ್ರೆ ದರ್ಶನ್ ಜೊತೆ ಸಿನಿಮಾ ಮಾಡಿದವರಾಗ್ಲಿ ಅಥವಾ ದರ್ಶನ್​​ಗೆ ಬಂಡವಾಳ ಹಾಕಿದ ನಿರ್ಮಾಪಕರಾಗ್ಲಿ ಅವರು ಠಾಣೆ ಮೆಟ್ಟಿಲು ಹತ್ತೋದು ತಪ್ಪೋದಿಲ್ಲ. ಯಾಕಂದ್ರೆ ಕಳೆದ ಕೆಲ ವರ್ಷಗಳಿಂದ ದರ್ಶನ್ ಕಾಂಟ್ರವರ್ಸಿಗಳಿಂದ ನಿರ್ಮಾಪಕರು, ನಟರು, ಪೊಲೀಸ್ ಠಾಣೆ ಮೆಟ್ಟಿಲು ಹತ್ತಿರೋದು ಉದಾಹರಣೆಗಳಿವೆ. ಇದೀಗ ಹಾಸ್ಯ ನಟ ಚಿಕ್ಕಣನಿಗೂ ಕಾನೂನಿನ ಸಂಕಷ್ಟ ಎದುರಾಗಿದೆ. ಅದಕ್ಕೆ ಕಾರಣ ದರ್ಶನ್ ಜೊತೆಗೆ ಪಾರ್ಟಿ ಮಾಡಿದ್ದು. ಇದೇ ಪಾರ್ಟಿಯಿಂದ ಚಿಕ್ಕಣನಿಗೂ ಕೊಲೆ ಕೇಸ್​ನ ಉರುಳು ತಗ್ಲಾಕೊಂಡಿದೆ.

ಇದನ್ನೂ ಓದಿ: ಕಿಂಗ್ ಕೊಹ್ಲಿ ಫ್ಯಾನ್ಸ್​ಗೆ ಗುಡ್​ನ್ಯೂಸ್.. ಸೂಪರ್​​ 8ನಲ್ಲಿ ವಿರಾಟರೂಪ ಹೇಗಿರುತ್ತೆ ಗೊತ್ತಾ?

ಕೊಲೆಗೂ ಮುನ್ನ ಶನಿವಾರ ಮಧ್ಯಾಹ್ನದಿಂದಲೇ ದರ್ಶನ್ ಆ್ಯಂಡ್ ಪಟಾಲಂ ಪಾರ್ಟಿ ಮೂಡ್​ನಲ್ಲಿತ್ತು.. ಆದ್ರೆ ಈ ಪಾರ್ಟಿಯಲ್ಲಿ ಚಿಕ್ಕಣ್ಣ ಕೂಡ ಭಾಗಿಯಾಗಿದ್ರು ಅನ್ನೋ ಸ್ಫೋಟಕ ವಿಚಾರ ಈಗ ಬಯಲಾಗಿದೆ. ಸ್ಟೋನಿ ಬ್ರೋಕ್​ನಲ್ಲಿ ನಡೆದಿದ್ದ ಈ ಪಾರ್ಟಿಯಲ್ಲಿ ಚಿಕ್ಕಣ್ಣ ಕೂಡ ಇದ್ರೂ ಅನ್ನೋದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ. ಈ ಪಾರ್ಟಿಯಲ್ಲಿ ಹಾಸ್ಯನಟ ಸೇರಿ ನಿರ್ಮಾಪಕರು ಕೂಡ ಭಾಗಿಯಾಗಿದ್ರು ಎನ್ನಲಾಗಿದೆ. ಕೃತ್ಯಕ್ಕೂ ಮುನ್ನ ನಡೆದಿದ್ದ ಪಾರ್ಟಿಲ್ಲಿ ಚಿಕ್ಕಣ ಇದ್ರಂತೆ. ಸುಮಾರು 3 ಗಂಟೆಗಳ ಕಾಲ ಚಿಕ್ಕಣ ದರ್ಶನ್ ಜೊತೆಗೆ ಕಾಲ ಕಳೆದಿದ್ರಂತೆ. ಇದಾದ ಮೇಲೆ ದರ್ಶನ್ ಪೋನ್ ಬಂತು ಅಂತ ಅಲ್ಲಿಂದ ಎದ್ದು ಹೋಗಿದ್ರಂತೆ. ಬಳಿಕ ಮನೆಗೆ ತೆರಳಿದ್ದ ದರ್ಶನ್ ಮನೆಯಿಂದ ಪಟ್ಟಣಗೆರೆ ಶೆಡ್​ಗೆ ಬಂದಿದ್ರು ಅನ್ನೋದು ತನಿಖೆಯಲ್ಲಿ ರಿವೀಲ್ ಆಗಿದೆ. ಹೀಗಾಗಿ ಈ ವಿಚಾರದ ಬಗ್ಗೆ ಮಾಹಿತಿ ಪಡೆಯೊದಕ್ಕಾಗಿ ಹಾಸ್ಯ ನಟ ಚಿಕ್ಕಣನಿಗೂ ನೋಟಿಸ್ ನೀಡಲಾಗಿದೆ.

ಚಿಕ್ಕಣ್ಣನಿಗೆ ನೋಟಿಸ್ ನೀಡಿರೋ ಪೊಲೀಸರು ವಿಚಾರಣೆಗೆ ಹಾಜರಾಗೋದಕ್ಕೆ ಸೂಚಿಸಿದ್ದಾರೆ. ಮಂಗಳವಾರ ಬಂದು ತಮ್ಮ ಹೇಳಿಕೆ ನೀಡುವಂತೆ ನೋಟಿಸ್​​ ನೀಡಿದ್ದಾರೆ. ಪಶ್ಚಿಮ ವಿಭಾಗದ ಪೊಲೀಸರು ನೋಟಿಸ್ ಕೊಟ್ಟಿದ್ದು ಎಪಿ ನಗರ ಠಾಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಯಾಕಂದ್ರೆ ಈ ಪಾರ್ಟಿಯಲ್ಲಿ ಕೊಲೆ ಬಗ್ಗೆ ಚರ್ಚೆಯಾಗಿತ್ತಾ ಅಥವಾ ರೇಣುಕಸ್ವಾಮಿ ವಿಚಾರ ಏನಾದ್ರೂ ಅಲ್ಲಿ ಮಾತನಾಡಿದ್ರಾ ಅನ್ನೋ ಬಗ್ಗೆ ಚಿಕ್ಕಣನಿಗೆ ಪ್ರಶ್ನೆ ಕೇಳಲಿದ್ದಾರೆ. ವಿಚಾರಣೆಯಲ್ಲಿ ಚಿಕ್ಕಣ್ಣನನ್ನ ಪ್ರಕರಣದ ವಿಟ್ನೆಸ್ ಆಗಿ ಮಾಡಿಕೊಳ್ಳಲಿದ್ದು, ಕೊಲೆ ವಿಚಾರದ ಇಂಚಿಂಚೂ ಮಾಹಿತಿಯನ್ನ ಕಲೆ ಹಾಕೋದಕ್ಕೆ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ಇದೇ ವೇಳೆ ಪೊಲೀಸರು ಸ್ಟೋನಿ ಬ್ರೂಕ್​ನಲ್ಲಿ ಮಹಜರು ನಡೆಸಿದ್ರೂ. ಈ ವೇಳೆ ಚಿಕ್ಕಣರನ್ನ ಕೂಡ ಮಹಜರ್​ಗೆ ಕರ್ಕೊಂಡು ಬರಲಾಗಿತ್ತು,

ಸ್ಟೋನಿ ಬ್ರೋಕ್ ಮಹಜರ್​ನಲ್ಲಿ ಚಿಕ್ಕಣ್ಣ!

ಅದ್ಯಾವಾಗ ಕೊಲೆ ದಿನ ನಡೆದ ಪಾರ್ಟಿಯಲ್ಲಿ ಚಿಕ್ಕಣ್ಣ ಇದ್ರೂ ಅನ್ನೋದು ಗೊತ್ತಾಯ್ತೋ.. ಸೋಮವಾರ ಸ್ಥಳ ಮಹಜರ್ ಮಾಡುವಾಗ ಚಿಕ್ಕಣ್ಣರನ್ನ ಕೂಡ ಕರೆಸಲಾಗಿತ್ತು. ಆರ್ ಆರ್ ನಗರದ ಸ್ಟೋನಿ ಬ್ರೂಕ್​ಗೆ ಚಿಕ್ಕಣ್ಣರನ್ನ ಕರ್ಕೊಂಡು ಬಂದಿದ್ದ ಪೊಲೀಸರು ಹೋಟೆಲ್​​ನಲ್ಲಿ ಇಂಚಿಂಚೂ ಮಾಹಿತಿ ಕಲೆ ಹಾಕಿದ್ದಾರೆ.

ಜೆಟ್​ಲ್ಯಾಗ್ ಪಾರ್ಟಿಯಲ್ಲೂ ಇದ್ದ ಚಿಕ್ಕಣ್ಣ! ವಿಚಾರಣೆಗೆ ಹಾಜರ್!

ಈ ಹಿಂದೆಯೂ ದರ್ಶನ್​ ಕಿರಿಕ್​ ನಲ್ಲಿ ಚಿಕ್ಕಣ್ಣ ಹೆಸರು ತಳುಕು ಹಾಕಿಕೊಂಡಿತ್ತು. ದರ್ಶನ್ ಕೆರಿಯರ್​ಗೆ ಹೊಸ ಬೂಸ್ಟ್ ಕೊಟ್ಟಿದ್ದ ಕಾಟೇರ ಸಿನಿಮಾದ ಸಕ್ಸಸ್ ಪಾರ್ಟಿ ಅವತ್ತು ಕಾಂಟ್ರವರ್ಸಿಗೆ ಕಾರಣವಾಗಿತ್ತು. ಜನವರಿ 3 ರಂದು ತಡರಾತ್ರಿವರೆಗೂ ಪಾರ್ಟಿಯಲ್ಲಿ ಸ್ಟಾರ್​ಗಳು ಭಾಗಿಯಾಗಿದ್ರು. ಅವಧಿ ಮೀರಿ ಪಾರ್ಟಿ ಮಾಡಿದ ಹಿನ್ನೆಲೆ ಸುಬ್ರಮಣ್ಯನಗರ ಪೊಲೀಸರು ಎಫ್​ಐಆರ್ ಕೂಡ ದಾಖಲಿಸಿದ್ರು. ಹೀಗಾಗಿ ಚಿಕ್ಕಣ ಸೇರಿ 8 ಕ್ಕೂ ಹೆಚ್ಚು ನಟರಿಗೆ ನೋಟಿಸ್ ನೀಡಲಾಗಿತ್ತು.

ಇದನ್ನೂ ಓದಿ: ಮಾನವೀಯತೆ ಮೆರೆದ ಡಾ.CN ಮಂಜುನಾಥ್.. ನೂತನ ಸಂಸದರ ಕಾರ್ಯಕ್ಕೆ ಭಾರೀ ಮೆಚ್ಚುಗೆ

ಅವತ್ತು ಮಧ್ಯರಾತ್ರಿ 3 ಗಂಟೆಯವರೆಗೂ ದರ್ಶನ್​ ಮತ್ತು ಸ್ಟಾರ್ ನಟರು ಪಾರ್ಟಿ ಮಾಡಿದ್ರು ಅಂತ ಹೇಳಲಾಗಿತ್ತು. ಈ ಪಾರ್ಟಿಯಿಂದ ಪಬ್ ಹೊರಗಡೆ ದೊಡ್ಡ ಕ್ರೌಡ್ ಸೃಷ್ಟಿಯಾಗಿತ್ತು ಅಂತ ಹೇಳಲಾಗಿತ್ತು. ತಕ್ಷಣ ಅಲರ್ಟ್​ ಆದ ಪೊಲೀಸರು ಸೇರಿದ್ದ ಜನರನ್ ಕ್ಲೀಯರ್​ ಮಾಡಿಸಿ ರೆಸ್ಟೋಬಾರ್​ ಒಳಗೆ ಎಂಟ್ರಿ ಕೊಟ್ಟಿದ್ರು. ನೋಡಿದ್ರೆ ಸ್ಯಾಂಡಲ್​ವುಡ್​ನ ಬಿಗ್​ಸ್ಟಾರ್​ಗಳೆಲ್ಲ ಅವತ್ತು ಬಾರ್​​ನಲ್ಲಿರೋದು ಗೊತ್ತಾಗಿರುತ್ತೆ. ಇದೇ ಕಾರಣಕ್ಕೆ ಪಾರ್ಟಿಯಲ್ಲಿ ಭಾಗಿಯಾಗಿದ್ದ ನಟ​ ದರ್ಶನ್​ ಸಹಿತ ಸ್ಯಾಂಡಲ್​ವುಡ್​ನ ಘಟಾನುಘಟಿ ನಟರಿಗೆ ನೋಟಿಸ್​​ ನೀಡಲಾಗಿತ್ತು. ಅದ್ರಂತೆ ಸ್ಟಾರ್​ಗಳು ಪೊಲೀಸ್ ಠಾಣೆಗೆ ಬಂದು ಹೇಳಿಕೆಯನ್ನ ಸಹ ಕೊಟ್ಟಿದ್ರು. ಆಗ್ಲೂ ಕೂಡ ಚಿಕ್ಕಣ್ಣ ದರ್ಶನ್ ಸಹವಾಸದಿಂದ ಪೊಲೀಸ್ ಠಾಣೆ ಮೆಟ್ಟಿಲೇರುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಪಾರ್ಟಿಯಲ್ಲಿ ಭಾಗಿಯಾಗಿದ್ದ ನಟರು, ನಿರ್ದೇಶಕರು, ನಿರ್ಮಾಪಕರು ಪೊಲೀಸ್‌ ಸ್ಟೇಷನ್‌ಗೆ ಹಾಜರಾಗಿದ್ದರು. ಅಂದು ಮಾಧ್ಯಮದವರ ಜೊತೆ ಮಾತನಾಡಿದ್ದ ರಾಕ್‌ಲೈನ್ ವೆಂಕಟೇಶ್‌, ಘಟನೆಯ ವಿವರ ನೀಡಿದ್ದರು.

ದರ್ಶನ್​ಗೆ ಫೋನ್ ಮಾಡಿದ ಮೇಲೆ ಅವರು ಬಂದರು. ಆದರೆ ಹೋಟೆಲ್​ ಸಿಬ್ಬಂದಿಯೆಲ್ಲ ಹೋಗಿದ್ದರು. ಅವರನ್ನ ಕರಿಸಿ ಬಳಿಕ ಊಟ, ತಿಂಡಿ ಕೊಡೋಕೆ ಲೇಟ್ ಆಯಿತು. ಲೇಟ್ ಆಗಿದ್ದು ಅಷ್ಟೇ ಹೊರತು ಮಿಕ್ಕಿದ್ದು ಯಾವ ಗಲಾಟೆನೂ ಕೂಡ ಆಗಿಲ್ಲ. ಅಕ್ಕಪಕ್ಕ ಯಾರಿಗೂ ತೊಂದರೆ ಆಗದಂಗೆ, ಜನರಿಗೆ ತೊಂದರೆ ಆಗುತ್ತಾ ಎನ್ನುವುದನ್ನು ದರ್ಶನ್ ಅವರು ಕೇಳಿದರು. ಯಾವುದು ಆಗಿಲ್ಲ ಅಂತ ಹೇಳಿದ್ವಿ. ನಮ್ಮನ್ನು ಯಾವ ಅಬಕಾರಿ ಅಧಿಕಾರಿಗಳು, ಪೊಲೀಸರು ಬಂದು ಲೇಟ್ ಆಗಿದೆ ಎಂದು ಹೇಳಿಲ್ಲ. ಊಟ ಮಾಡಿ ನಾವು ಹೋಗುತ್ತಿದ್ದೇವು. ಹೋಟೆಲ್​ ಗ್ರಾಹಕರಿಗೆ ಫಸ್ಟ್ ಟೈಮ್ ಠಾಣೆಗೆ ಕರೆಸಿ ಸ್ಟೇಟ್​​ಮೆಂಟ್ ತಗೋಬೇಕು ಅನ್ನೋದು ಎಷ್ಟು ಸರಿ ಅನ್ನೋದು ನಮಗೂ ಗೊತ್ತಿಲ್ಲ.

ರಾಕ್‌ಲೈನ್ ವೆಂಕಟೇಶ್‌, ನಟ, ನಿರ್ಮಾಪಕ

ಇನ್‌ಫ್ಯಾಕ್ಟ್, ಈ ವಿಚಾರದ ನಂತರ ಕೆಲವರು ದರ್ಶನ್‌ ಗ್ಯಾಂಗ್‌ನಿಂದ ಸ್ವಲ್ಪ ಅಂತರ ಕಾಯ್ದುಕೊಂಡಿರೋದು ನಿಜ ಅಂತಿದೆ ಇಂಡಸ್ಟ್ರಿಯ ಮೂಲಗಳು. ಕೆಲ ನಟರಿಗೆ ಈ ಪ್ರಕರಣದಿಂದ ತೀರ ಮುಜುಗರ ಉಂಟಾಗಿದೆ. ಇಂತಹ ಘಟನೆಗಳಿಂದ ಭವಿಷ್ಯದಲ್ಲಿ ಸಮಸ್ಯೆಯಾಗಲಿದೆ ಅನ್ನೋ ಕಾರಣಕ್ಕೆ ದರ್ಶನ್‌ನಿಂದ ಅಂತರಕಾಯ್ಡುಕೊಂಡಿದ್ದರು. ಆದ್ರೆ, ಹಾಸ್ಯ ನಟ ಚಿಕ್ಕಣ್ಣ ಮಾತ್ರ ಹಾಗೇ ಮಾಡಿರಲಿಲ್ಲ. ಅದಕ್ಕೆ ಕಾರಣವೇನು.

ಯಾವುದು ಕ್ಲೀಯರಿಫಿಕೇಶನ್ ಇಲ್ಲ ಸರ್.. 24ನೇ ತಾರೀಖು ಚಿಕ್ಕಣ್ಣನ ಸಿನಿಮಾ ಬರುತ್ತೆ ಎಲ್ಲರೂ ಸಪೋರ್ಟ್ ಮಾಡಿ

ದರ್ಶನ್‌, ನಟ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೂ ಚಿಕ್ಕಣ್ಣನಿಗೂ ಸಂಬಂಧವೇನು.. ಕೊಲೆ ಕೇಸ್​ಗೆ ಸಿಕ್ಕ ಹೊಸ ಟ್ವಿಸ್ಟ್?

https://newsfirstlive.com/wp-content/uploads/2024/06/CHIKKANNA-2.jpg

Load More