Advertisment

ಅಭಿಮಾನಕ್ಕಾಗಿ ದರ್ಶನ್​ ಹಿಂದೆ ಹೋದನಾ ರಾಚಯ್ಯ.. ಪೊಲೀಸರ ಮುಂದೆ ಕಣ್ಣೀರು ಹಾಕ್ತಿರುವುದೇಕೆ?

author-image
Bheemappa
Updated On
ಅಭಿಮಾನಕ್ಕಾಗಿ ದರ್ಶನ್​ ಹಿಂದೆ ಹೋದನಾ ರಾಚಯ್ಯ.. ಪೊಲೀಸರ ಮುಂದೆ ಕಣ್ಣೀರು ಹಾಕ್ತಿರುವುದೇಕೆ?
Advertisment
  • ರೇಣುಕಾಸ್ವಾಮಿಯ ಕೊಲೆಯಲ್ಲಿ ಮೂರು ತಂಡಗಳು ಭಾಗಿ
  • ಈ ಪ್ರಕರಣ ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದೆ
  • ಕೇಸ್​​ನಲ್ಲಿ ನಾಗರಾಜ್​ ರಾಚಯ್ಯ ಎಷ್ಟನೇ ಆರೋಪಿ ಆದ್ರು?

ಬೆಂಗಳೂರು: ದರ್ಶನ್ ವಿರುದ್ಧ ಕೇಳಿಬಂದ ಭೀಕರ ಕೊಲೆ ಆರೋಪ ಈಗ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು ಪ್ರಕರಣ ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದೆ. ಅದರಲ್ಲೂ ಕೊಲೆ ಆರೋಪದಲ್ಲಿ ನಟ ದರ್ಶನ್ ಜೈಲಿನಲ್ಲಿ ಎರಡು ರಾತ್ರಿ ಕಳೆದಿದ್ದಾರೆ. ಇನ್ನು 11ನೇ ಆರೋಪಿಯಾಗಿ ಅರೆಸ್ಟ್ ಆಗಿರುವ ನಾಗರಾಜ್ ರಾಚಯ್ಯ ಪೊಲೀಸರ ಮುಂದೆ ಅಳುತ್ತಿದ್ದಾರೆ.

Advertisment

ಇದನ್ನೂ ಓದಿ: ​IPLನಲ್ಲಿ ಆರ್ಭಟಿಸಿದ್ದ ವಿರಾಟ್​ ವಿಶ್ವಕಪ್​ನಲ್ಲಿ ಸೈಲೆಂಟ್.. ಕೊಹ್ಲಿರನ್ನ ಬೆಂಚ್ ಕಾಯಿಸ್ತಾರಾ ಕ್ಯಾಪ್ಟನ್ ರೋಹಿತ್?

ನಾಗರಾಜ್ ರಾಚಯ್ಯ ಎನ್ನುವ ಆರೋಪಿ ರೇಣುಕಾಸ್ವಾಮಿ ಕೇಸ್​ನಲ್ಲಿ 11ನೇ ಆರೋಪಿಯಾಗಿದ್ದಾನೆ. ಸ್ಥಳ ಮಹಜರು ಮಾಡಲೆಂದು ನಾಗರಾಜ್ ರಾಚಯ್ಯನನ್ನ ಪೊಲೀಸರು ಕರೆದುಕೊಂಡು ಹೋಗಿದ್ದಾಗ ಮಾಡಿದ ತಪ್ಪಿಗೆ ಕಣ್ಣೀರು ಹಾಕುತ್ತಿದ್ದಾನೆ. ಪೊಲೀಸ್ ಠಾಣೆಯಲ್ಲಿ ಎಲ್ಲ ಆರೋಪಿಗಳನ್ನು ವಿಚಾರಣೆ ಮಾಡುವಂತೆ ರಾಚಯ್ಯನನ್ನ ವಿಚಾರಿಸುವಾಗಲೂ ಅಳುತ್ತಿದ್ದರು.

ಇದನ್ನೂ ಓದಿ: ಅಪಾರ್ಟ್​​ಮೆಂಟ್​ನಲ್ಲಿ ಭೀಕರ ಅಗ್ನಿ.. ಒಂದೇ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಭಾರತೀಯರು ಸಜೀವ ದಹನ

Advertisment

publive-image

ನಟ ದರ್ಶನ್ ಅವರ ಆಪ್ತನಾಗಿರುವ ನಾಗರಾಜ್ ರಾಚಯ್ಯ, ಅವರ ಮೇಲೆ ಅಪಾರವಾದ ಅಭಿಮಾನ ಹೊಂದಿದ್ದನು. ಈ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಶೇರ್ ಮಾಡಲಾಗಿತ್ತು. ಈ ಸಂಬಂಧ ಪೊಲೀಸ್​ ಠಾಣೆಗೆ ದೂರು ನೀಡಿ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದರು. ಸದ್ಯ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಪೊಲೀಸರು, ಆರೋಪಿ ನಾಗರಾಜ್​​​ನನ್ನ ತೀವ್ರ ವಿಚಾರಣೆ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment