Advertisment

ದರ್ಶನ್‌ ಹುಚ್ಚು ಅಭಿಮಾನಿ.. ಕೊಲೆ ಕೇಸ್‌ನಲ್ಲಿ ಸಿಕ್ಕಿಬಿದ್ದ A5 ನಂದೀಶ್ ಹಿನ್ನೆಲೆ ಏನು? ಯಾರಿವರು?

author-image
Veena Gangani
Updated On
ರೇಣುಕಾಸ್ವಾಮಿ ಕೊಲೆ ಕೇಸ್‌.. ಜೈಲಲ್ಲಿ A5 ಭೇಟಿಯಾದ ಕುಟುಂಬಸ್ಥರಿಗೆ ಬಿಗ್ ಶಾಕ್‌; ಹೇಳಿದ್ದೇನು?
Advertisment
  • ರೇಣುಕಾಸ್ವಾಮಿ ಕೊಲೆ ಬಗ್ಗೆ ಪೊಲೀಸರ ಮುಂದೆ ಅಸಲಿ ಸತ್ಯ ಬಯಲು
  • ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ನಂದೀಶ್ ಕುಟುಂಬ
  • ನನ್ನ ಮಗನನ್ನು ಪ್ಲಾನ್ ಮಾಡಿ ಸಿಕ್ಕಿಸಿದ್ದಾರೆ ಅಂತ ಕುಟುಂಬಸ್ಥರ ಆರೋಪ

ಬೆಂಗಳೂರು: ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಕೊಲೆ ಕೇಸ್​ ದಿನಕ್ಕೊಂದು ಟ್ವಿಸ್ಟ್​ ಪಡೆದುಕೊಳ್ಳುತ್ತಿದೆ. ದಿನ ಕಳೆದಂತೆ ರೇಣುಕಾಸ್ವಾಮಿ ಕೊಲೆ ಬಗ್ಗೆ ಆರೋಪಿಗಳು ಅಸಲಿ ಸತ್ಯ ಬಾಯ್ಬಿಡುತ್ತಿದ್ದಾರೆ. ಇದೀಗ ಯುವಕನನ್ನು ಕ್ರೂರವಾಗಿ ಕೊಲೆ ಮಾಡಿದ ಆರೋಪದ ಮೇಲೆ ನಟ ದರ್ಶನ್ ಸೇರಿ ಹಲವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕೊಲೆ ಮಾಡಿದ ಸಂದರ್ಭದಲ್ಲಿ ಯಾರ್ಯಾರು ಇದ್ದರು ಎಂಬಿತ್ಯಾದಿ ಮಾಹಿತಿಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಕೊಲೆ ಮಾಡಿದ ಆರೋಪಿಗಳ ಹಿಂದಿನ ಅಸಲಿ ವಿಚಾರಗಳು ಒಂದೊಂದಾಗೇ ಈಗ ಬೆಳಕಿಗೆ ಬರುತ್ತಿದೆ.

Advertisment

publive-image

ಇದನ್ನೂ ಓದಿ: VIDEO: ಪವಿತ್ರಾ ಇಂಥಾ ಚಿಲ್ಲರೆ ಕೆಲ್ಸ ಮಾಡಲ್ಲ.. ರೇಣುಕಾಸ್ವಾಮಿ ಹತ್ಯೆ ಬಗ್ಗೆ ಮಾಜಿ ಪತಿ ಸಂಜಯ್​ ಪ್ರತಿಕ್ರಿಯೆ ​

ಚಿತ್ರದುರ್ಗ ಯುವಕ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ 5ನೇ ಆರೋಪಿಯಾಗಿರೋ ನಂದೀಶ್ ಮರ್ಯಾದೆಗೆ ಅಂಜಿ ಬದುಕುತ್ತಿದ್ದನಂತೆ. ಕೊಲೆ ಕೇಸ್​ನಲ್ಲಿ ಆರೋಪಿಯಾಗಿರೋ ನಂದೀಶ್ ಮಂಡ್ಯ ತಾಲೂಕಿನ ಚಾಮಲಾಪುರ ಗ್ರಾಮದ ನಿವಾಸಿ. ನಂದೀಶ್ ಕುಟುಂಬಸ್ಥರು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಸರ್ಕಾರದಿಂದ ಮಂಜೂರಾಗಿದ್ದ ಸೈಟ್​ನಲ್ಲಿ ಈ ಕುಟುಂಬ ವಾಸವಾಗಿತ್ತು. ಕಬ್ಬು ಕಟಾವು ಮಾಡುವ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಹೊಟ್ಟೆ ಪಾಡಿಗಾಗಿ 8 ವರ್ಷಗಳ ಹಿಂದೆ ಸಿಲಿಕಾನ್​ ಸಿಟಿ ಬೆಂಗಳೂರಿಗೆ ಬಂದು ಕೇಬಲ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದನಂತೆ. ಆರೋಪಿ ಸ್ಥಾನದಲ್ಲಿದ್ದ ನಂದೀಶ್ ಕುಟುಂಬಕ್ಕೆ ಆಧಾರವಾಗಿದ್ದನಂತೆ. ಅದರಲ್ಲೂ ನಟ ದರ್ಶನ್ ಹುಚ್ಚು ಅಭಿಮಾನಿಯಾಗಿದ್ದನಂತೆ. ನಟ ದರ್ಶನ್​ಗಾಗಿ ತನ್ನ ಕೆಲಸಕ್ಕೆ ಚಕ್ಕರ್ ಹಾಕುತ್ತಿದ್ದನಂತೆ.

ಆರೋಪಿ ನಂದೀಶ್ ತಂದೆ ಟೀ ಅಂಗಡಿ, ತಾಯಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಬೇರೆಯವರ ಜಮೀನಿನಲ್ಲಿ ಪೋಷಕರು ಗುತ್ತಿಗೆ ಆಧಾರದಲ್ಲಿ ಕೃಷಿ ಕೆಲಸ ಮಾಡುತ್ತಿದ್ದರಂತೆ. ಮತ್ತೊಂದು ಕಡೆ ಕೌಟುಂಬಿಕ ಸಮಸ್ಯೆಯಿಂದಾಗಿ ನಂದೀಶ್ ಅಕ್ಕ ನಂದಿನಿ ತವರು ಸೇರಿದ್ದರಂತೆ. ಇದರಿಂದ ಅಕ್ಕ ಹಾಗೂ ಅಕ್ಕನ ಮಕ್ಕಳ ಜವಾಬ್ದಾರಿ ನಂದೀಶ್ ಹೆಗಲಿಗೆ ಇತ್ತು. ಇದೀಗ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಂದೀಶ್ 5ನೇ ಆರೋಪಿಯಾಗಿದ್ದಾನೆ. ಮಗನ ಬಂಧನದಿಂದ ಇಡೀ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಆದರೆ ನನ್ನ ಮಗನನ್ನು ಪ್ಲಾನ್ ಮಾಡಿ ಕೇಸ್​ನಲ್ಲಿ ತಗ್ಲಾಕಿಸಿದ್ದಾರೆಂದು ನಂದೀಶ್​ ಕುಟುಂಬಸ್ಥರು ಗಂಭೀರವಾಗಿ ಆರೋಪಿಸುತ್ತಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment