newsfirstkannada.com

ಡಿ ಗ್ಯಾಂಗ್​ಗೆ ಭಾರೀ ಸಂಕಷ್ಟ.. ಪೊಲೀಸರ ಬಳಿಯಿದೆ ಮತ್ತೊಂದು ಬಲವಾದ ಸಾಕ್ಷಿ!

Share :

Published July 9, 2024 at 6:07am

    ಪರಪ್ಪನ ಅಗ್ರಹಾರ ಜೈಲಿನಲ್ಲಿರೋ ಆರೋಪಿ ರಘು ಐಡೆಂಟಿಫಿಕೇಶನ್ ಪತ್ತೆ

    ಗೂಗಲ್ ಮ್ಯಾಪ್‌ನಿಂದ ಆರೋಪಿಗಳನ್ನು ಟ್ಯ್ರಾಕ್ ಮಾಡಿದ ಪೊಲೀಸರು

    ಕೊಲೆ ನಡೆದ ದಿನದಂದು ಹಂತಕರ ಚಲನವಲನಗಳ ಬಗ್ಗೆ ಗೂಗಲ್‌ ಸಾಕ್ಷಿ

ಬೆಂಗಳೂರು: ಇದು ಟೆಕ್ನಾಲಜಿ ಯುಗ. ಯಾವುದೇ ಕ್ರೈಂ ನಡೆದ್ರೂ ಶರವೇಗದಲ್ಲಿ ಹಿಡಿದು ಹಾಕಬಹುದಾದ ಕಾಲ. ಅದ್ಕೆ ನೋಡಿ ರೇಣುಕಾಸ್ವಾಮಿ ಕೊಲೆ ಮಾಡಿದ ಡೆವಿಲ್ ಗ್ಯಾಂಗ್‌ಗೂ ಈ ಟೆಕ್ನಾಲಜಿ ಕಂಟಕವಾಗಿದೆ. ಗೂಗಲ್ ಮ್ಯಾಪ್‌ನಿಂದ ಆರೋಪಿಗಳು ಟ್ಯ್ರಾಕ್ ಆಗ್ತಿದ್ದಾರೆ. ಕೊಲೆ ನಡೆದ ದಿನದಂದು ಆರೋಪಿಗಳ ಚಲನವಲನಗಳ ಬಗ್ಗೆ ಗೂಗಲ್‌ ಟೈಮ್‌ಲೈನ್‌ ಸಾಕ್ಷಿಕೊಟ್ಟಿದ್ದು, ಇದು ದರ್ಶನ್ ಗ್ಯಾಂಗ್‌ಗೆ ಸಂಕಷ್ಟ ತಂದಿಟ್ಟಿದೆ.

ಇದನ್ನೂ ಓದಿ: ದರ್ಶನ್ ಮಾಸ್ ಹೀರೋ.. ಜನ ಥಿಯೇಟರ್​ಗೆ ಬಂದೇ ಬರ್ತಾರೆ -ಬೇರೆಯದ್ದೇ ಇದೆ ಶಾಸ್ತ್ರಿ ರೀ-ರಿಲೀಸ್ ಲೆಕ್ಕಾಚಾರ..!

ಈಗಿನ ಕ್ರೈಂ ಪ್ರಕರಣಗಳಿಗೆ ಟೆಕ್ನಿಕಲ್ ಎವಿಡೆನ್ಸ್‌ಗಳು ಮಹತ್ವದ ಪಾತ್ರ ವಹಿಸುತ್ತವೆ. ಇದೀಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲೂ ಆರೋಪಿಗಳ ಗೂಗಲ್​ ಟೈಮ್​ ಲೈನ್ ಟೆಕ್ನಿಕಲ್ ಎವಿಡೆನ್ಸ್ ಆಗುತ್ತಿದೆ. ಗೂಗಲ್ ಟೈಮ್‌ ಲೈನ್‌ನ​ ಜಾಡು ಹಿಡಿದು ಹೊರಟಿದ್ದ ಪೊಲೀಸರಿಗೆ ಕೆಲ ಆರೋಪಿಗಳ ಗೂಗಲ್ ಮ್ಯಾಪ್ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಮತ್ತಷ್ಟು ಆರೋಪಿಗಳ ಗೂಗಲ್ ಟೈಂಲೈನ್‌ನ ಬೆನ್ನತ್ತಿರೋ ಪೊಲೀಸರು ಟೆಕ್ನಾಲಜಿ ಆ್ಯಂಗಲ್​ನಲ್ಲೂ ತನಿಖೆ ನಡೆಸ್ತಿದ್ದಾರೆ. ಕೊಲೆ ನಡೆದ ವೇಳೆ ಯಾಱರು, ಯಾವ್ಯಾವ ಜಾಗದಲ್ಲಿದ್ರು ಅಂತ ಪತ್ತೆ ಹಚ್ಚುತ್ತಿದ್ದಾರೆ. ಎಂಟು ಜಿಬಿಯ ಎರಡು ಪೆನ್ ಡ್ರೈವ್‌ನಲ್ಲಿ ಮಾಹಿತಿ ಸಂಗ್ರಹಿಸಿದ್ದಾರೆ.

ಗೂಗಲ್ ಟೈಮ್‌ಲೈನ್ ಕಂಟಕ!

ಗೂಗಲ್ ಮ್ಯಾಪ್ ಟೈಮ್ ಲೈನ್ ಮೂಲಕ ರೇಣುಕಾಸ್ವಾಮಿ ಕೊಲೆ ಕೇಸ್‌ನ ಆರೋಪಿಗಳ ಮಾಹಿತಿಯನ್ನ ಪೊಲೀಸರು ಸಂಗ್ರಹಿಸ್ತಿದ್ದಾರೆ. ದೀಪಕ್ ಮತ್ತು ನಂದೀಶ್​ ಮೊಬೈಲ್​ನಲ್ಲಿ ಗೂಗಲ್ ಟೈಮ್ ಲೈನ್ ಇರೋದು ಪತ್ತೆಯಾಗಿದೆ. ಇದೀಗ ಈ ಇಬ್ಬರು ಆರೋಪಿಗಳ ಮಾಹಿತಿಯನ್ನ ಪೆನ್‌ಡ್ರೈವ್‌ನಲ್ಲಿ ಪೊಲೀಸರು ಸಂಗ್ರಹಿಸಿಟ್ಟುಕೊಂಡಿದ್ದಾರೆ. ಅಲ್ಲದೇ ಅಪರಾಧ ನಡೆದ ಪ್ರತಿ ಜಾಗಕ್ಕೂ ಈ ಇಬ್ಬರು ಓಡಾಟ ನಡೆಸಿರೋದು ಪತ್ತೆಯಾಗಿದೆ. ಇದೀಗ ಇವರ ಗೂಗಲ್ ಟೈಮ್‌ಲೈನ್ ಡೇಟಾವನ್ನ ಪೆನ್‌ಡ್ರೈವ್‌ನಲ್ಲಿ ಪೊಲೀಸರು ಶೇಖರಿಸಿಟ್ಟಿದ್ದು, ಈ ಇಬ್ಬರು ಕೊಲೆ ನಡೆದ ಸ್ಥಳದಲ್ಲಿದ್ರು ಎನ್ನುವುದಕ್ಕೆ ಈ ಪೆನ್‌ಡ್ರೈವ್ ಸಾಕ್ಷಿಯಾಗಲಿದೆ. ಇದಿಷ್ಟು ಟೆಕ್ನಿಕಲ್ ಎವಿಡೆನ್ಸ್‌ ಬಗೆಗಿನ ಮಾಹಿತಿಯಾಗಿದ್ರೆ, ಇದೀಗ ರೇಣುಕಾಸ್ವಾಮಿ ಹತ್ಯೆ ನಡೆದ ದಿನ ಆರೋಪಿಗಳನ್ನ ಕಣ್ಣಾರೆ ನೋಡಿದ್ದ ಪತ್ಯಕ್ಷ ಸಾಕ್ಷಿಗಳು ದರ್ಶನ್ ಗ್ಯಾಂಗ್‌ಗೆ ಕುತ್ತು ತರೋದು ಪಕ್ಕಾ ಆಗಿದೆ. ಐ ವಿಟ್ನೆಸ್‌ಗಳಿಂದ ಆರೋಪಿಗಳ ಚಹರೆ ಪತ್ತೆಯ ಮಾಡುವ ಕೆಲಸವೂ ನಡಿದಿದೆ.

ಹೇಗಿರುತ್ತೆ ಪರೇಡ್​?

ತಾಲೂಕು ದಂಡಾಧಿಕಾರಿಗಳ ಸಮ್ಮುಖದಲ್ಲಿ ಪರಪ್ಪನ ಅಗ್ರಹಾರ ಮತ್ತು ತುಮಕೂರು ಜೈಲಿನಲ್ಲಿ ಪರೇಡ್ ನಡೆಸಲಾಗಿದೆ. ಆರೋಪಿಗಳಾದ ಕಾರ್ತಿಕ್, ನಿಖಿಲ್, ರಘುನ ಜೈಲಿನಲ್ಲಿ ಇರುವ ಇತರೆ ಬಂಧಿತರ ನಡುವೆ ನಿಲ್ಲಿಸಿ ಪರೇಡ್ ಮಾಡಲಾಗಿದೆ. ಈ ವೇಳೆ ಸಾಕ್ಷಿಗಳಿಗೆ ಆರೋಪಿಗಳ ಗುರುತನ್ನ ಪತ್ತೆ ಹಚ್ಚುವಂತೆ ಸೂಚನೆ ನೀಡಲಾಗಿತ್ತು. ಈ ವೇಳೆ ಮೂವರು ಆರೋಪಿಗಳ ಗುರುತು ಪತ್ತೆ ಹಚ್ಚುವಲ್ಲಿ ಸಾಕ್ಷಿಗಳು ಯಶಸ್ವಿಯಾಗಿದ್ದಾರೆ. ತುಮಕೂರು ಜೈಲಿನಲ್ಲಿರೋ ಕಾರ್ತಿಕ್, ನಿಖಿಲ್ ಗುರುತು ಪತ್ತೆಯಾಗಿದ್ರೆ, ಇತ್ತ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಘು ಐಡೆಂಟಿಫಿಕೇಶನ್ ಪತ್ತೆಯಾಗಿದೆ. ಇದೀಗ ಈ ಐಡೆಂಟಿಫಿಕೇಶನ್ ಪರೇಡ್ ಐವಿಟ್ನೆಸ್ ಆಗಿ ಪರಿಗಣನೆಯಾಗಲಿದೆ. ಟೆಕ್ನಿಕಲ್ ಎವಿಡೆನ್ಸ್‌ ಪ್ರತ್ಯಕ್ಷ ಸಾಕ್ಷಿ ಸೇರಿದಂತೆ ನೂರಾರು ಸಾಕ್ಷ್ಯಗಳನ್ನ ಪೊಲೀಸರು ಸಂಗ್ರಹಿಸಿದ್ದು ಚಾರ್ಜ್‌ಶೀಟ್ ಸಲ್ಲಿಕೆಗೆ ಸಜ್ಜಾಗಿದ್ದಾರೆ. ಇದೆಲ್ಲಾ ಸಾಕ್ಷ್ಯಾಧಾರಗಳನ್ನ ನೋಡ್ತಿದ್ರೆ ದರ್ಶನ್‌ ಅಂಡ್ ಗ್ಯಾಂಗ್‌ಗೆ ಕಂಟಕ ಎದುರಾಗೋದು ಫಿಕ್ಸಾ ಎಂಬ ಚರ್ಚೆ ನಡೀತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡಿ ಗ್ಯಾಂಗ್​ಗೆ ಭಾರೀ ಸಂಕಷ್ಟ.. ಪೊಲೀಸರ ಬಳಿಯಿದೆ ಮತ್ತೊಂದು ಬಲವಾದ ಸಾಕ್ಷಿ!

https://newsfirstlive.com/wp-content/uploads/2024/06/DARSHAN_GANG-1.jpg

Load More