7 ಕಡೆ ಮುರಿದಿರೋ ಮೂಳೆ, 8 ಬಾರಿ ಎಲೆಕ್ಟ್ರಿಕ್ ಶಾಕ್.. ರೇಣುಕಾಸ್ವಾಮಿಗೆ ‘ಡಿ’ ಗ್ಯಾಂಗ್ ಕೊಟ್ಟ ಚಿತ್ರಹಿಂಸೆ ಹೀಗಿದೆ

author-image
AS Harshith
Updated On
‘ಇದೆಲ್ಲ ಬೇಕಿತ್ತಾ ನಂಗೆ..’ ಅಧಿಕಾರಿಗಳ ಮುಂದೆ ದರ್ಶನ್ ದುಃಖ; ಬಳ್ಳಾರಿ ಜೈಲಿಗೆ ಶಿಫ್ಟ್​ ಆಗಲು ಹೆದರಿದ ದಾಸ..!
Advertisment
  • ಮನುಷ್ಯರಲ್ಲ.. ರಾಕ್ಷಸರಂತೆ ಕೊಲೆ ಮಾಡಿರುವ ಡಿ ಗ್ಯಾಂಗ್ 
  • 7 ಕಡೆ ರೇಣುಕಾಸ್ವಾಮಿ ದೇಹದ ಮೂಳೆ ಮುರಿದಿರೋದು ಪತ್ತೆ
  • 8 ಕಡೆ ಎಲೆಕ್ಟ್ರಿಕ್ ಶಾಕ್ ನೀಡಿ ಕೊಲೆ ಮಾಡಿರುವ ದರ್ಶನ್​ ಆ್ಯಂಡ್​ ಗ್ಯಾಂಗ್

ರೇಣುಕಾಸ್ವಾಮಿಯನ್ನ ದರ್ಶನ್​ ಮತ್ತು ಗ್ಯಾಂಗ್​ ಬರ್ಬರವಾಗಿ ಕೊಂಡಿದ್ದಾರೆ. ಚಿತ್ರಹಿಂಸೆ ನೀಡಿ ಹತ್ಯೆ ಮಾಡಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ದರ್ಶನ್​ ಮತ್ತು ಟೀಂ ಮಾಡಿರುವ ಕ್ರೌರ್ಯ ಬಟಾ ಬಯಲಾಗಿದೆ.

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನ ‘ಡಿ’​ ಗ್ಯಾಂಗ್​ ಟಾರ್ಚರ್ ಮಾಡಿದೆ. ಮರಣೋತ್ತರ ಪರೀಕ್ಷೆಯ ವೇಳೆ ರೇಣುಕಾಸ್ವಾಮಿ ದೇಹದ ಮೇಲೆ 39 ರಕ್ತ ಸಿಕ್ತ ಗಾಯಗಳು ಪತ್ತೆಯಾಗಿವೆ.

publive-image

ಇದನ್ನೂ ಓದಿ: ಗನ್​ ತೋರಿಸಿ ಮಹಿಳಾ ಕಾನ್‌ಸ್ಟೆಬಲ್ ಮೇಲೆ ಅತ್ಯಾಚಾರ.. ಇಬ್ಬರು ಪೊಲೀಸರು ಅರೆಸ್ಟ್​

ಇದಲ್ಲದೆ, ರೇಣುಕಾಸ್ವಾಮಿ ದೇಹದ 8 ಕಡೆ ಎಲೆಕ್ಟ್ರಿಕ್ ಶಾಕ್ ನೀಡಲಾಗಿದೆ. ಹಲ್ಲೆಯ ತೀವ್ರತೆಗೆ ಮಾಂಸಖಂಡದ 30 ಪರ್ಸೆಂಟ್ ಸುಟ್ಟು ಹೋಗಿದೆ.  ಹೊಡೆದಿರೋ ಏಟಿಗೆ 7 ಕಡೆ ದೇಹದ ಮೂಳೆ ಮುರಿದಿರೋದು ಪತ್ತೆಯಾಗಿದೆ.

ಇದನ್ನೂ ಓದಿ: ಕಳ್ಳಭಟ್ಟಿ ಸೇವಿಸಿ 25 ಮಂದಿ ಸಾವು.. 60 ಜನರು ಅಸ್ವಸ್ಥ.. ಜಿಲ್ಲಾಧಿಕಾರಿ ಸೇರಿ 10 ಮಂದಿ ಅಮಾನತು

13 ಕಡೆ ರೇಣುಕಾಸ್ವಾಮಿ ಮೂಳೆ ಏರ್ ಕ್ರಾಕ್ ಆಗಿರುವುದು ಪತ್ತೆಯಾಗಿದೆ. ಇದಲ್ಲದೆ, ರೇಣುಕಾಸ್ವಾಮಿ ಮೇಲೆ ಕಬ್ಬಿಣ, ಮರದ ವಸ್ತುಗಳಿಂದ ಹಲ್ಲೆ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment