Advertisment

ತವರಿನಲ್ಲೇ ರೇಣುಕಾಸ್ವಾಮಿ ಅಂತ್ಯಕ್ರಿಯೆ.. ಬಿಕ್ಕಿ ಬಿಕ್ಕಿ ಅತ್ತ ಕುಟುಂಬಸ್ಥರು!

author-image
Ganesh Nachikethu
Updated On
ನನ್ನ ಮಗನ ಸಾಯಿಸಿದ ರೀತಿಯಲ್ಲೇ ದರ್ಶನ್​​ನನ್ನೂ ಸಾಯಿಸಿಬಿಡಿ -ಗಳಗಳನೇ ಕಣ್ಣೀರಿಟ್ಟ ತಾಯಿ
Advertisment
  • ಪವಿತ್ರ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ ಆರೋಪದಲ್ಲಿ ಕೊಲೆ
  • ತವರಿನಲ್ಲೇ ಕೊಲೆಯಾದ ರೇಣುಕಾ ಸ್ವಾಮಿಯವ್ರ ಅಂತ್ಯಕ್ರಿಯೆ!
  • ಅಂತ್ಯಕ್ರಿಯೆ ವೇಳೆ ಮುಗಿಲು ಮುಟ್ಟಿದ್ದ ಕುಟುಂಬಸ್ಥರ ಆಕ್ರಂದನ

ಚಿತ್ರದುರ್ಗ: ಚಾಲೆಂಜಿಂಗ್​ ಸ್ಟಾರ್​​ ನಟ ದರ್ಶನ್​​ ಸ್ನೇಹಿತೆ ಪವಿತ್ರ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ ಆರೋಪದಲ್ಲಿ ಕೊಲೆಯಾದ ರೇಣುಕಾ ಸ್ವಾಮಿಯವ್ರ ಅಂತ್ಯಕ್ರಿಯೆ ನಡೆದಿದೆ. ವೀರಶೈವ ಲಿಂಗಾಯತ ಸಮುದಾಯ ಸಂಪ್ರದಾಯದಂತೆ ಚಿತ್ರದುರ್ಗ ನಗರದ ಜೋಗಿ ಮಟ್ಟಿ ರಸ್ತೆಯಲ್ಲಿರೋ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ. ಅಂತ್ಯಕ್ರಿಯೆ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

Advertisment

ಇನ್ನು, ಮರಣೋತ್ತರ ಪರೀಕ್ಷೆ ಬಳಿಕ ಪೊಲೀಸ್ರು ರೇಣುಕಾಸ್ವಾಮಿ ಮೃತ ದೇಹವನ್ನು ಪೋಷಕರಿಗೆ ಹಸ್ತಾಂತರ ಮಾಡಿದ್ರು. ಅಂಬುಲೆನ್ಸ್ ಮೂಲಕ ಮೃತದೇಹವನ್ನು ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಕರೆ ತರಲಾಗಿತ್ತು. ಮೊದಲು ಮೃತನ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು, ನಂತರ ಅಂತ್ಯಕ್ರಿಯೆ ಮಾಡಲಾಗಿದೆ.

ಸದ್ಯ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿರೋ ಯುವಕನ ಕೊಲೆ ಕೇಸಲ್ಲಿ ನಟ ಚಾಲೆಂಜಿಂಗ್​ ಸ್ಟಾರ್​​ ದರ್ಶನ ಅವರಿಗೆ 24ನೇ ಎಸಿಎಂಎಂ ಕೋರ್ಟ್​ ಬಿಗ್​ ಶಾಕ್​ ನೀಡಿದೆ. ದರ್ಶನ್​ ಮತ್ತು ಗ್ಯಾಂಗ್​​ಗೆ ಬರೋಬ್ಬರಿ 6 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.

ಇದನ್ನೂ ಓದಿ:‘ನಟ ದರ್ಶನ್​​, ಪವಿತ್ರ ಅಮಾಯಕರು, ಪಾಪ! ಕೊಲೆ ಬಗ್ಗೆ ಏನು ಗೊತ್ತೇ ಇಲ್ಲ’- ವಕೀಲ

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment