/newsfirstlive-kannada/media/post_attachments/wp-content/uploads/2024/06/renukaswami1.jpg)
ಚಿತ್ರದುರ್ಗ: ನಟ ದರ್ಶನ್ ಅವರಿಗೆ ಪವಿತ್ರಾ ಗೌಡ ಮೆಸೇಜ್ ಬಗ್ಗೆ ಹೇಳದಿದ್ರೆ ಚೆನ್ನಾಗಿ ಇರ್ತಿತ್ತು. ಅವಳು ಏನು ಹೇಳದೆ ಸುಮ್ಮನಿದ್ದಿದ್ರೆ ನನ್ನ ಗಂಡ ಸಾಯುತ್ತಿರಲಿಲ್ಲ ಎಂದು ರೇಣುಕಾಸ್ವಾಮಿ ಪತ್ನಿ ಸಹನಾ ಕಣ್ಣೀರಿಟ್ಟಿದ್ದಾರೆ.
ನಟ ದರ್ಶನ್ಗೆ ಹೇಳಿ ಒಂದು ಸಂಸಾರ ಹಾಳು ಮಾಡಿಬಿಟ್ಟಳು ಪವಿತ್ರಾ ಗೌಡ. ಅವಳೊಬ್ಬ ಹೆಣ್ಣಾಗಿ ಪವಿತ್ರಾ ಗೌಡ ಹಿಂಗೆ ಮಾಡಿದ್ದು ಎಷ್ಟು ಸರಿ? ನನ್ನ ಗಂಡನಿಗೆ ಹೊಡೆದವರಿಗೆಲ್ಲಾ ಹೆಂಡ್ತಿ-ಮಕ್ಕಳು ಇಲ್ಲವೇನ್ರಿ? ಅವ್ರು ಮನುಷ್ಯರೇನ್ರಿ. ಅವಳು ಇದನ್ನೇ ದೊಡ್ಡದು ಮಾಡಿದೆಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ.
ವಾರ್ನಿಂಗ್ ಮಾಡಿ ಬಿಟ್ಟಿದ್ರೆ ಆಗ್ತಿತ್ತು. ಎಷ್ಟ್ ಜನ ಕಮೆಂಟ್ ಹಾಕಲ್ವಾ? ಹೆಂಡ್ತಿ ಪ್ರೆಗ್ನೆಂಟ್ ಅಂದ್ರೂ ಬಿಡಲಿಲ್ಲ ಅಂದ್ರೆ ಅವರೆಂಥಾ ದೊಡ್ಡ ನಟ? ‘ನನ್ನ ಮನೆಯವರನ್ನ ತುಂಬಾ ಭೀಕರವಾಗಿ ಕೊಲೆ ಮಾಡಿದ್ರು. ನನ್ನ ಗಂಡನಿಗೆ ಯಾರು ಶಿಕ್ಷೆ ಕೊಟ್ಟಿದ್ದಾರೋ ಅವ್ರಿಗೆ ಶಿಕ್ಷೆಯಾಗ್ಲಿ ಎಂದು ಒತ್ತಾಯಿಸಿದ್ದಾರೆ.
ನನ್ನ ಪಾಪು ಮುಂದೆ ಅಪ್ಪ ಎಲ್ಲಿ ಅಂದ್ರೆ ಏನು ಹೇಳಲಿ? ‘ನನಗಾದ ಸ್ಥಿತಿಯೇ ಪವಿತ್ರಾ ಗೌಡಗೂ ಬರಲಿ. ದೇವರು ಯಾರನ್ನು ಸುಮ್ಮನೆ ಬಿಡಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ:‘ನನ್ನ ಗಂಡ ದರ್ಶನ್ ಅಭಿಮಾನಿ ಅಲ್ಲ, ನ್ಯಾಯ ಕೊಡಿಸಿ’- ಮೃತ ಯುವಕನ ಪತ್ನಿ ಕಣ್ಣೀರು!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ