newsfirstkannada.com

ನಿವೃತ್ತ ಇಂಜಿನಿಯರ್ ಲಕ್ಷ, ಲಕ್ಷ​ ಹಣ ಗುಳುಂ ಮಾಡಿದ ಬ್ಯಾಂಕ್ ಮ್ಯಾನೇಜರ್​; ಯಾಕೆ ಅಂತ ಕೇಳಿದ್ದಕ್ಕೆ ಮರ್ಡರ್‌!

Share :

Published August 13, 2024 at 5:28pm

Update August 13, 2024 at 5:42pm

    ನಿವೃತ್ತ ಇಂಜಿನಿಯರ್ ಇಟ್ಟಿದ್ದ ಠೇವಣಿ ಹಣ ಕಬಳಿಸಿದ ಲೇಡಿ ಮ್ಯಾನೇಜರ್!

    ಹೀಗ್ಯಾಕೆ ಮಾಡಿದ್ರಿ ಅಂತ ಕೇಳಿದ್ದಕ್ಕೆ ವೃದ್ಧನಿಗೆ ಮುಹೂರ್ತವಿಟ್ಟ ಸವಿತಾ

    ಹಿಂದು ಮುಂದಿಲ್ಲದ ವೃದ್ಧನನ್ನು ಹೇಗೆ ಹತ್ಯೆ ಮಾಡಿದರು ಗೊತ್ತಾ ಕಿರಾತಕರು

ತಿರುವನಂತಪುರಂ: ಕೇರಳದ ಕೊಲ್ಲಂನಲ್ಲಿ ಲೇಡಿ ಬ್ಯಾಂಕ್ ಮ್ಯಾನೇಜರ್ ಒಬ್ಬಳು ಮಾಡಿದ ಕೃತ್ಯ ಇಡೀ ನಗರವನ್ನೇ ಬೆಚ್ಚಿ ಬೀಳಿಸಿದೆ. BSNL ನಿವೃತ್ತ ಇಂಜಿನಿಯರ್ ತನ್ನ ಜೀವಮಾನವೀಡಿ ದುಡಿದ ಹಣವನ್ನು ಸ್ಥಳೀಯ ಬ್ಯಾಂಕ್​ವೊಂದರಲ್ಲಿ ಠೇವಣಿ ಇಟ್ಟಿದ್ದರು. ಒಟ್ಟು 90 ಲಕ್ಷ ರೂಪಾಯಿ ಠೇವಣಿ ಇಟ್ಟಿದ್ದ ನಿವೃತ್ತ ಇಂಜಿನಿಯರ್​ ಸಿ ಪಪ್ಪಾಚನ್​ ಅವರ ಅಕೌಂಟ್​ನಿಂದ ಬ್ಯಾಂಕ್ ಮ್ಯಾನೇಜರ್ ಸರಿತಾ ಅನ್ನೋರು 40 ಲಕ್ಷ ರೂಪಾಯಿಯನ್ನು ಅವರ ಗಮನಕ್ಕೆ ತರದೆ ವಿತ್​ಡ್ರಾ ಮಾಡಿಕೊಂಡಿದ್ದರು.

ಕೊನೆಗೆ ವಿಷಯ ತಿಳಿದ ಪಪ್ಪಾಚನ್ ಬ್ಯಾಂಕ್ ಮ್ಯಾನೇಜರ್​ ಸರಿತಾರನ್ನು ಯಾಕೆ ಹೀಗಾಗಿದೆ ಎಂದು ಪ್ರಶ್ನಿಸಿದ್ದಾರೆ. ಇಬ್ಬರ ನಡುವೆ ಮಾತುಕತೆಯಾಗಿ, ಸದ್ಯದಲ್ಲಿಯೇ ಈ ವಿಷಯವನ್ನು ಬಗೆಹರಿಸುವುದಾಗಿ ಸರಿತಾ ಹೇಳಿದ್ದರು. ಆದ್ರೆ ಆಕೆ ವಿಷಯವನ್ನು ಬಗೆಹರಿಸಲು ಆಯ್ದುಕೊಂಡ ಮಾರ್ಗವೇ ಅತ್ಯಂತ ಕ್ರೂರತನದ್ದಾಗಿತ್ತು.

ಇದನ್ನೂ ಓದಿ: ಹಿಂದೂ ಸಂಪ್ರದಾಯದಂತೆ ಅತ್ತಿಗೆ ಜೊತೆ ಸೊಸೆ ಸಲಿಂಗ ವಿವಾಹ; ಕಾರಣ ಏನು ಗೊತ್ತಾ? VIDEO

ಬ್ಯಾಂಕ್​ ಅಕೌಂಟ್​ನಿಂದ ಹಣ ವಿತ್​ಡ್ರಾ ಮಾಡಿಕೊಂಡಿದ್ದ ಸವಿತಾ, ಅದನ್ನು ಮರಳಿ ಕೊಡುವ ಬದಲು ನಿವೃತ್ತ ಇಂಜಿನಿಯರ್​​ ಹತ್ಯೆಗೆ ಪ್ಲ್ಯಾನ್ ಹಾಕಿಕೊಂಡಿದ್ದಳು. ಬಾಡಿಗೆ ಹಂತಕರ ಮೂಲಕ ಪಪ್ಪಾಚನ್ ಹತ್ಯೆಗೆ ಪ್ಲ್ಯಾನ್ ಮಾಡಿದ ಸರಿತಾ, ಒಂದು ಕಾರನ್ನು ಬಾಡಿಗೆಗೆ ಪಡೆದು ಪಪ್ಪಾಚನ್ ಬೈಕ್​ಗೆ ಡಿಕ್ಕಿ ಹೊಡೆಸಿ ಹತ್ಯೆ ಮಾಡಿದ್ದಾಳೆ

ಖಾಕಿ ಪಡೆಗೆ ಬಂದ ಸಂಶಯ, ಬಲೆಗೆ ಬಿದ್ದ ಸರಿತಾ
ಮೇಲ್ನೋಟಕ್ಕೆ ಅಪಘಾತದಂತೆ ಕಾಣಿಸುತ್ತಿದ್ದ ಪಪ್ಪಾಚನ್ ಸಾವನ್ನು ತೀಕ್ಷ್ಣವಾಗಿ ಪೊಲೀಸರು ನೋಡಿದಾಗ ಅವರ ಹಣೆಯಲ್ಲಿ ಸಣ್ಣ ಅನುಮಾನದ ಒಂದು ಗೆರೆ ಮೂಡಿದೆ. ಅಪಘಾತವಾದ ಸ್ಥಳ ಹಾಗೂ ಸಿಸಿ ಕ್ಯಾಮರಾದಲ್ಲಿ ಅಪಘಾತವಾದ ವಿಡಿಯೋವನ್ನು ನೋಡಿದಾಗ ಅವರ ಅನುಮಾನ ಮತ್ತಷ್ಟು ಬಲವಾಗಿದೆ. ಇದು ಉದ್ದೇಶಪೂರ್ವಕವಾಗಿಯೇ ಮಾಡಿದ ಕೊಲೆ ಎಂಬ ಸಂಶಯ ದಟ್ಟವಾದಾಗ, ಪೊಲೀಸರು ತಮ್ಮ ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಕೂಡಲೇ ಕಾರ್​ನಿಂದ ಡಿಕ್ಕಿ ಹೊಡೆಸಿ ಪಪ್ಪಾಚನ್​ನನ್ನು ಹತ್ಯೆ ಮಾಡಿದ್ದ ಅನಿಮೋನ್​ನ್ನು ತಮ್ಮ ಭಾಷೆಯಲ್ಲಿ ವಿಚಾರ ಮಾಡಿದ ಪೊಲೀಸರಿಗೆ ಅಸಲಿ ಮಾಹಿತಿ ಗೊತ್ತಾಗಿದೆ. ಕೂಡಲೇ ಸರಿತಾ ಸೇರಿದಂತೆ ಅನೂಪ್, ಮಹೀನ್, ಆಸೀಪ್ ಅಲಿ ಹಾಗೂ ಅನಿಮೋನ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ರೇಪ್ ಮಾಡಿ ಮುಖಕ್ಕೆ ಗುದ್ದಿದ.. ವೈದ್ಯೆಯ ಕಣ್ಣಿಗೆ ಹೊಕ್ಕ ಚಸ್ಮಾ ಗ್ಲಾಸ್; ಕೊಲ್ಕತ್ತಾ ಕಿರಾತಕನ ಮತ್ತಷ್ಟು ಕ್ರೌರ್ಯ ಬಯಲು

ತಮ್ಮ ನಿವೃತ್ತಿಯಿಂದ ಬಂದ ಹಣವನ್ನು ಬ್ಯಾಂಕ್​ನಲ್ಲಿ ಠೇವಣಿ ಇಟ್ಟಿದ್ದರು ಪಪ್ಪಾಚನ್, ಇತ್ತೀಚೆಗೆ ತಮ್ಮ ಕುಟುಂಬದೊಂದಿಗೆ ಜಗಳ ಮಾಡಿಕೊಂಡು ಏಕಾಂಗಿಯಾಗಿ ತಮ್ಮ ಪಾಡಿಗೆ ತಾವು ವಾಸವಿದ್ದರು. ಹೀಗಾಗಿ ಪಪ್ಪಾಚನ್​ನ್ನು ಹತ್ಯೆ ಮಾಡಿದ್ರೆ, ಅವರ ಕುಟುಂಬಸ್ಥರಾಗಲಿ ಬೇರೆಯವರಾಗಲಿ ಯಾರೂ ಅನುಮಾನ ಪಡುವುದಿಲ್ಲ, ಪ್ರಶ್ನಿಸುವುದಿಲ್ಲ ಎಂದು ನಂಬಿದ್ದ ಹಂತಕರು ಪಪ್ಪಾಚನ್​ನನ್ನು ಹತ್ಯೆ ಮಾಡಿದ್ದಾರೆ.ಸದ್ಯ ಆರೋಪಿಗಳ ವಿರುದ್ಧ ಬಿಎನ್​ಎಸ್ ಸೆಕ್ಷನ್ 103 ಹತ್ಯೆ ಹಾಗೂ 61 ಕ್ರಿಮಿನಲ್​ ಸಂಚಿನ ಅಡಿಯಲ್ಲಿ ಕೇಸ್ ದಾಖಲಿಸಿಕೊಂಡಿದ್ದಾರೆ. ಕೋರ್ಟ್ ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೊಳಪಡಿಸಿದೆ.

ಇದನ್ನೂ ಓದಿ: ಮಳೆ ನೀರಿಗೆ ಮಗು ಸಾವು, ನದಿಗೆ ಬಿದ್ದ ಪರ್ವತದ ಒಂದು ಭಾಗ.. ಹತೋಟಿಗೆ ಬಾರದ ಪ್ರವಾಹ

20 ವರ್ಷಗಳ ಹಿಂದೆ ನಿವೃತ್ತರಾಗಿದ್ದ ಪಪ್ಪಾಚನ್ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಜಾಣತನದಿಂದ ಹಣವನ್ನು ಗಳಿಸಿದ್ದರು ಎಂದು ತಿಳಿದು ಬಂದಿದೆ. ಕೇವಲ ಈ ಸ್ಥಳೀಯ ಬ್ಯಾಂಕ್ ಮಾತ್ರವಲ್ಲದೆ ಪಂಜಾಬ್ ನ್ಯಾಷನಲ್ ಬ್ಯಾಂಕ್​ ಮತ್ತು ಸೌತ್ ಇಂಡಿಯನ್ ಬ್ಯಾಂಕ್​ನಲ್ಲೂ ಕೂಡ ಅವರು ಠೇವಣಿ ಹಣವನ್ನು ಇಟ್ಟಿದ್ದರು ಎಂದು ತಿಳಿದು ಬಂದಿದೆ. ಇತ್ತೀಚೆಗಷ್ಟೇ 50 ಲಕ್ಷ ರೂಪಾಯಿ ಮೌಲ್ಯದ ಐಐಎಫ್​ಎಲ್​ ಷೇರನ್ನು ಮಾರಿ ಲಾಭ ಮಾಡಿಕೊಂಡಿದ್ದರು. ಇದೇ ಹಣವನ್ನು ಸರಿತಾ ಮ್ಯಾನೇಜರ್ ಆಗಿರುವ ಬ್ಯಾಂಕ್​ನಲ್ಲಿ ಡಿಪಾಸಿಟ್ ಮಾಡಿದ್ದರು ಎಂದು ತಿಳಿದು ಬಂದಿದೆ. ಪಪ್ಪಾಚನ್ ಬಳಿ ಒಟ್ಟು 3.5 ಕೋಟಿಯಷ್ಟು ಆಸ್ತಿಯಿತ್ತು ಎಂದು ತನಿಖೆಯ ವೇಳೆ ಪೊಲೀಸರಿಗೆ ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿವೃತ್ತ ಇಂಜಿನಿಯರ್ ಲಕ್ಷ, ಲಕ್ಷ​ ಹಣ ಗುಳುಂ ಮಾಡಿದ ಬ್ಯಾಂಕ್ ಮ್ಯಾನೇಜರ್​; ಯಾಕೆ ಅಂತ ಕೇಳಿದ್ದಕ್ಕೆ ಮರ್ಡರ್‌!

https://newsfirstlive.com/wp-content/uploads/2024/08/KERALA-ENGINEER-KILLED.jpg

Load More