/newsfirstlive-kannada/media/post_attachments/wp-content/uploads/2024/08/Jailer_Darshan.jpg)
ಮೈಸೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ ಆರೋಪಿ ನಟ ದರ್ಶನ್‌ಗೆ ವಿಶೇಷ ಆತಿಥ್ಯ ನೀಡಲಾಗುತ್ತಿದೆ ಎಂಬುದರ ಕುರಿತು ಫೋಟೋ ವೈರಲ್ ಆಗಿದೆ. ಈ ಬೆನ್ನಲ್ಲೇ ಇದರ ಕುರಿತು ಮಾಜಿ ಜೈಲರ್​​​ ಸುಂದರ್​ ಅವರು ನ್ಯೂಸ್​ಫಸ್ಟ್​ ಜೊತೆ ಮಾತಾಡಿದ್ದಾರೆ.
ಚಾರ್ಜ್​ಶೀಟ್​ ಸಲ್ಲಿಸಿದ ಬಳಿಕ ನಟ ದರ್ಶನ್​​ಗೆ ಶಿಕ್ಷೆ ಆಗುತ್ತಾ? ಎಂಬ ಪ್ರಶ್ನೆಗೆ ಮಾಜಿ ಜೈಲರ್​​ ಸುಂದರ್​​ ಉತ್ತರ ಹೀಗಿತ್ತು. ಪೊಲೀಸರು ಕೇಸನ್ನು ಎಷ್ಟು ಗಂಭೀರವಾಗಿ ತನಿಖೆ ಮಾಡಿದ್ದಾರೆ ಎಂಬುದು ಬಹಳ ಮುಖ್ಯವಾಗಲಿದೆ. ಇವರು ಕೋರ್ಟ್​ಗೆ ಚಾರ್ಜ್​​ ಸಲ್ಲಿಸುವಾಗ ಸಾಕ್ಷಿ ಎಷ್ಟು ಬಲವಾಗಿರಲಿದೆ? ಎಂಬುದರ ಮೇಲೆ ಶಿಕ್ಷೆ ನಿರ್ಧಾರವಾಗಲಿದೆ ಎಂದರು.
ಸದ್ಯ ಪೊಲೀಸರು ಸಾಕಷ್ಟು ಪ್ರಾಮಾಣಿಕರು ಆಗಿದ್ದಾರೆ. ಹಾಗಾಗಿ ಚಾರ್ಜ್​​ಶೀಟ್​​ ಬಲವಾದ ಸಾಕ್ಷಿಗಳನ್ನು ಮುಂದಿಟ್ಟು ಸಲ್ಲಿಸಿದ್ರೆ ನಟ ದರ್ಶನ್​ ಮತ್ತು ಗ್ಯಾಂಗ್​ ತಪ್ಪಿಸಿಕೊಳ್ಳುವುದು ಕಷ್ಟ. ಕೋರ್ಟ್​ ಕೂಡ ಕಠಿಣ ಶಿಕ್ಷೆ ನೀಡಲಿದೆ. ಆದರೆ, ಜಾಮೀನು ಮಾತ್ರ ಸಿಕ್ಕೇ ಸಿಗುತ್ತದೆ. ಜಾಮೀನು ಸಿಗಲು ಎಷ್ಟು ದಿನ ಬೇಕಾದ್ರೂ ಆಗಬಹುದು. ಒಂದು ವರ್ಷಕ್ಕಾದ್ರೂ ಜಾಮೀನು ಸಿಗುತ್ತದೆ ಎಂದರು.
ಇದನ್ನೂ ಓದಿ: ‘ಯಾರೋ ಹೇಳಿದ್ದು ಬಾಸ್ ಸಣ್ಣ ಆಗಿದ್ದಾರೆ ಅಂತ’- ದರ್ಶನ್ ಫೋಟೋಗೆ ಅಭಿಮಾನಿಗಳು ಏನಂದ್ರು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us