/newsfirstlive-kannada/media/post_attachments/wp-content/uploads/2024/09/RINKU_SINGH.jpg)
ರಿಂಕು ಸಿಂಗ್.. ಟೀಮ್ ಇಂಡಿಯಾದ ರೈಸಿಂಗ್ ಸ್ಟಾರ್​. ಇತ್ತೀಚೆಗಷ್ಟೇ ಗಾಡ್ಸ್​ ಫ್ಯಾನ್ಸ್​ ಎಂದು ಹಾಕಿಸಿಕೊಂಡಿದ್ದ ಹೊಸ ಟ್ಯಾಟೂ ಭಾರೀ ಸದ್ದು ಮಾಡಿತ್ತು. ಆದ್ರೀಗ ಆ ಟ್ಯಾಟೂ ಹಿಂದಿನ ಕತೆ ರಿವೀಲ್ ಆಗಿದೆ. ಆ ಕತೆ ಏನು ಎಂಬುವ ಮಾಹಿತಿ ಇಲ್ಲಿದೆ.
2023, ಏಪ್ರಿಲ್ 9.. ಇದು ರಿಂಕು ಸಿಂಗ್ ಪಾಲಿಗೆ ಅದೃಷ್ಠದ ದಿನ. ಈ ದಿನ ಯಶ್ ದಯಾಳ್​ ಎದುರು ಸಿಡಿಸಿದ್ದ 5 ಸಿಕ್ಸರ್​ಗಳು, ರಿಂಕು ಸಿಂಗ್ ಜೀವನವನ್ನೇ ಬದಲಿಸಿತ್ತು. ಜಸ್ಟ್​ ಐದೇ ತಿಂಗಳಲ್ಲಿ ಟೀಮ್ ಇಂಡಿಯಾಗೂ ಎಂಟ್ರಿಯಾಗುವಂತೆ ಮಾಡಿತ್ತು. ಅಷ್ಟೇ ಅಲ್ಲ, ಟಿ20 ತಂಡದ ಖಾಯಂ ಸದಸ್ಯನಾಗಿ ಮಾಡಿದೆ. ಆದ್ರೀಗ ರಿಂಕು ಹಾಕಿಸಿಕೊಂಡ ಗಾಡ್​ ಪ್ಲಾನ್ಸ್​ ಟ್ಯಾಟೂಗೂ ಲೈಫ್ ಚೇಂಜಿಂಗ್ 5 ಸಿಕ್ಸರ್​ಗಳಿಗೂ ಸಂಬಂಧ ಇದೆ. ಆ ಸಂಬಂಧವನ್ನ ಸ್ವತಃ ರಿಂಕು ಸಿಂಗ್ ಬಿಚ್ಚಿಟ್ಟಿದ್ದಾರೆ.
/newsfirstlive-kannada/media/post_attachments/wp-content/uploads/2023/06/RINKU_SINGH-1.jpg)
ನಾನು ಗಾಡ್ಸ್ ಪ್ಲಾನ್ ಎಂದು ಹೇಳುತ್ತಿದ್ದೇನೆ. ಈ ಹೆಸರನ್ನ ಆಧರಿಸಿಯೇ ಹಚ್ಚೆ ವಿನ್ಯಾಸ ಮಾಡಿಸಲಾಗಿದೆ. ಇದು ಐಪಿಎಲ್‌ನಲ್ಲಿ ನಾನು ಹೊಡೆದ 5 ಸಿಕ್ಸರ್‌ಗಳನ್ನ ಸೂಚಿಸುತ್ತೆ. ಸೂರ್ಯನ ಈ ಟ್ಯಾಟೂನಲ್ಲಿ ಐದು ಚುಕ್ಕೆಗಳು ಇವೆ. ಪ್ರತಿ ಚುಕ್ಕೆ ಒಂದೊಂದು ಸಿಕ್ಸರ್ನ ಪ್ರತಿಬಿಂಬಿಸುತ್ತದೆ. ಎರಡು ಎಕ್ಸ್ಟ್ರಾ ಕವರ್, ಒಂದು ಸ್ಟ್ರೈಟ್, ಲಾಂಗ್ ಆನ್ ಹಾಗೂ ಡೀಪ್ ಸ್ಕೇರ್ ಲೆಗ್ ಮೇಲೆ ಸಿಕ್ಸರ್ ಬಾರಿಸಿದ್ದೆ ಐಪಿಎಲ್‌ನಲ್ಲಿ ಇದು ನನ್ನ ಜೀವನವನ್ನ ಬದಲಾಯಿಸಿತ್ತು. ಆದ್ದರಿಂದ ನಾನು ಈ ಹಚ್ಚೆ ಹಾಕಿಸಿಕೊಂಡಿದ್ದೇನೆ.
ರಿಂಕು ಸಿಂಗ್, ಕ್ರಿಕೆಟಿಗ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us