newsfirstkannada.com

ಈ ಲೆಜೆಂಡರಿ ಬ್ಯಾಟ್ಸಮನ್​​​ನಂತೆ ರಿಷಬ್ ಪಂತ್.. ಮಾರಕ ಬ್ಯಾಟಿಂಗ್.. ಇಬ್ಬರ ಬಲವೂ ಒಂದೇ.. ಯಾರವರು..?

Share :

Published June 27, 2024 at 2:34pm

    ರಿಷಭ್​ ಪಂತ್ ಭವಿಷ್ಯದ ಶ್ರೇಷ್ಠ ವಿಕೆಟ್​ ಕೀಪರ್..?

    ಭವಿಷ್ಯದ ಗಿಲ್​ಕ್ರಿಸ್ಟ್​ ಆಗೋ ದಿನಗಳು ದೂರವೇನಿಲ್ಲ..!

    ಪಂತ್​-ಗಿಲ್​​ಕ್ರಿಸ್ಟ್​​ ನಡುವೆ ಇದೆ ಹಲವು ಸಾಮ್ಯತೆ

ಆ್ಯಂಡಂ ಗಿಲ್​ ಕ್ರಿಸ್ಟ್.. ಹೆಸರು ಕೇಳಿದ್ರೆ, ಎಂಥಾ ಬೌಲರ್​ಗೂ ನಡುಕ ಹುಟ್ಟುತ್ತಿತ್ತು. ಟೆರರ್​ ಬ್ಯಾಟಿಂಗ್​, ಚುರುಕಿನ ಕೀಪಿಂಗ್​.. ಅಬ್ಬಾ ಅದ್ಭುತ ಬಿಡಿ.. ಗಿಲ್ಲಿ ನಿರ್ಗಮನದ ಬಳಿಕ ಡೇರ್​​ಡೆವಿಲ್​ ಆಟಗಾರನ ಅಲಭ್ಯತೆ ಕಾಡಿತ್ತು. ಇದೀಗ ಸಮರ್ಥವಾಗಿ ರೀಪ್ಲೆಸ್ ಮಾಡೋ ಆಟಗಾರ ಸಿಕ್ಕಿದ್ದಾನೆ. ಆ ಪರ್ಫೆಕ್ಟ್​ ಆಟಗಾರನೇ ಟೀಮ್​ ಇಂಡಿಯಾದ ​ರಿಷಭ್​ ಪಂತ್​.

ಆ್ಯಡಂ ಗಿಲ್​​​ಕ್ರಿಸ್ಟ್​.. ಮೋಸ್ಟ್ ಡೇಂಜರಸ್ ಬ್ಯಾಟರ್.. ವಿಕೆಟ್ ಹಿಂದೆ ಕ್ಷಣಾದ್ರದಲ್ಲೇ ಚಮಾತ್ಕಾರ ಮಾಡ್ತಿದ್ದ ವಿಕೆಟ್​ ಕೀಪರ್. ಈ ಡೇರ್​ಡೆವಿಲ್​ ಬ್ಯಾಟರ್​ಗೆ ಬೌಲರ್​ ಯಾರು. ಕಂಡೀಷನ್ಸ್ ಏನು ಅನ್ನೋದು ಲೆಕ್ಕಕ್ಕೇ ಇರ್ತಾ ಇರಲಿಲ್ಲ. ಹೊಡಿಬಡಿ ಆಟವಾಡ್ತಿದ್ದ ಈತನ ಬ್ಯಾಟಿಂಗ್​ಗೆ ಬೌಲರ್​ಗಳು ಬೆಚ್ಚಿ ಬೀಳ್ತಿದ್ರು. ಎದುರಾಳಿ ಪಡೆ ಕಟ್ಟಿ ಹಾಕೋದು ಹೇಗೆ ಅನ್ನೋದು ಗೊತ್ತಾಗದೇ ಪರದಾಡ್ತಿದ್ರು.
ಈ ಡೇಂಜರಸ್​​​​​ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​​ ಕ್ರಿಕೆಟ್​ ಲೋಕಕ್ಕೆ ಗುಡ್​ ಬೈ ಹೇಳಿದ ಬಳಿಕ, ಪರ್ಯಾಯ ಆಟಗಾರ ಕ್ರಿಕೆಟ್​ ಲೋಕಕ್ಕೆ ಸಿಕ್ಕಿರಲಿಲ್ಲ. ಈತನ ಹತ್ತಿರಕ್ಕೂ ಸುಳಿದಿರಲಿಲ್ಲ. ಇದೀಗ ವಿಶ್ವ ಕ್ರಿಕೆಟ್​ನಲ್ಲಿ ಗಿಲ್ಲಿ ಸ್ಥಾನ ತುಂಬಬಲ್ಲ ಮತ್ತೊಬ್ಬ ಆಟಗಾರ ಉದಯಿಸಿದ್ದಾರೆ. ಆತನೇ ಟೀಮ್ ಇಂಡಿಯಾದ ಡೆರ್​ ಡೆವಿಲ್​ ಬ್ಯಾಟರ್ ರಿಷಭ್ ಪಂತ್.

ಇದನ್ನೂ ಓದಿ:ಇಂಗ್ಲೆಂಡ್, ಅಫ್ಘಾನಿಸ್ತಾನ್ ಯಾವುದೂ ಅಲ್ಲ.. ಈ ತಂಡ ವಿಶ್ವಕಪ್ ಗೆಲ್ಲುತ್ತೆ ಎಂದ ಮಾಜಿ ಕ್ರಿಕೆಟಿಗ

ತನ್ನ ಕರಿಯರ್​ನ ‘ಸೆಕೆಂಡ್’ ಇನ್ನಿಂಗ್ಸ್​ ಆರಂಭಿಸಿರುವ ರಿಷಭ್ ಪಂತ್, ಟಿ20 ವಿಶ್ವಕಪ್​ನಲ್ಲಿ ಎದುರಾಳಿ ಪಾಲಿನ ವಿಲನ್ ಆಗಿದ್ದಾರೆ. ದಂಡಂದಶ ಗುಣಂ ಆಟದಿಂದಲೇ ಎಲ್ಲರ ಮನ ಗೆಲ್ತಿರುವ ಪಂತ್, ವಿಕೆಟ್ ಹಿಂದೆಯೂ ಮ್ಯಾಜಿಕ್​ ಮಾಡ್ತಿದ್ದಾರೆ. ಈ ಮ್ಯಾಜಿಕಲ್ ಇನ್ನಿಂಗ್ಸ್​ಗಳು,​ ಚಾಣಾಕ್ಷ ಕೀಪಿಂಗ್ ನೋಡಿದವರಿಗೆ ಪಂತ್​​, ಆ್ಯಡಂ ಗಿಲ್​​ಕ್ರಿಸ್ಟ್ ಆಟ ನೋಡಿದಂತೆ ಭಾಸವಾಗ್ತಿದೆ. ಇದಕ್ಕೆ ಕಾರಣವೂ ಇದೆ.

ಪಂತ್​-ಗಿಲ್​​ಕ್ರಿಸ್ಟ್​​ ಆಟಕ್ಕಿದೆ ಹಲವು ಸಾಮ್ಯತೆ..!
ಲೆಜೆಂಡರಿ ಆ್ಯಡಂ ಗಿಲ್​ಕ್ರಿಸ್ಟ್ ಹಾಗೂ ರಿಷಭ್​ ಪಂತ್ ನಡುವೆ ಹಲವು ಸಾಮ್ಯತೆಗಳಿವೆ. ಇದು ಜಸ್ಟ್​ ಲೆಫ್ಟಿ ಬ್ಯಾಟರ್​, ವಿಕೆಟ್ ಕೀಪರ್​ಗಳೆಂಬ ಕಾರಣಕ್ಕೆ ಹೇಳ್ತಿರುವ ಹೋಲಿಕೆ ಅಲ್ಲ. ಇದರಾಚೆಗಿನ ಸಾಮ್ಯತೆ ಹೆಚ್ಚಿದೆ. ಈ ಇಬ್ಬರ ಬ್ಯಾಟಿಂಗ್ ಶೈಲಿಯೇ ಇದಕ್ಕೆ ಮೊದಲ ಎಕ್ಸಾಂಪಲ್​. ಲೆಫ್ಟಿ ಬ್ಯಾಟರ್​ಗಳಾದ ಇವರು, ಹೊಡಿಬಡಿ ಆಟದಲ್ಲಿ ನಿಸ್ಸೀಮರು. ಫಾರ್ಮೆಟ್ ಯಾವುದೇ ಆಗಿಲಿರಲಿ, ಪರಿಸ್ಥಿತಿ ಹೇಗೆ ಇರಲಿ, ಬ್ಯಾಟಿಂಗ್ ಕ್ರಮಾಂಕ ಯಾವುದೇ ಆಗಿರ್ಲಿ, ಇವರಿಬ್ಬರ ಮೂಲಮಂತ್ರವೇ ಹೊಡಿಬಡಿ ಆಟ.

ಇದನ್ನೂ ಓದಿ:ಭಾರತ-ಇಂಗ್ಲೆಂಡ್ ಪಂದ್ಯಕ್ಕೆ ಮೀಸಲು ದಿನ ಇಲ್ಲ.. ಮಳೆಯಿಂದ ಪಂದ್ಯ ರದ್ದಾದರೆ ಫೈನಲ್​ಗೆ ಹೋಗೋದ್ಯಾರು?

ಪಂತ್​ ಸ್ಪೋಟಕ ಬ್ಯಾಟಿಂಗ್..
ಆಕ್ರಮಣಕಾರಿ ಆಟವೇ ರಿಷಭ್ ಪಂತ್ ಶಕ್ತಿಯಾಗಿದೆ. ಮೊದಲ ಬಾಲ್​ನಿಂದಲೇ ಅಟ್ಯಾಕಿಂಗ್​​ ಬ್ಯಾಟಿಂಗ್​ಗೆ ಇಳಿಯುವ ability ಹೊಂದಿದ್ದಾರೆ. ರಿಷಭ್ ಪಂತ್​ರ ಅಗ್ರೆಸ್ಸಿವ್ ಬ್ಯಾಟಿಂಗ್, ನಿಜಕ್ಕೂ ಆಸಿಸ್​ ದಿಗ್ಗಜನನ್ನೇ ಹೋಲುತ್ತೆ. ಆ್ಯಡಂ ಗಿಲ್​​ಕ್ರಿಸ್ಟ್​ ಕೂಡ ವಿಸ್ಪೋಟಕ ಬ್ಯಾಟರ್​ ಆಗಿದ್ರು. ಲೀಲಾಜಾಲವಾಗಿ ಸಿಕ್ಸರ್, ಬೌಂಡರಿಗಳ ಸುರಿಮಳೆ ಸುರಿಸುತ್ತಿದ್ರು. ಇದೇ ಅಗ್ರೆಸ್ಸಿವ್ ಬ್ಯಾಟಿಂಗ್, ಗಿಲ್​​ಕ್ರಿಸ್ಟ್​ರನ್ನ ಡಿಫರೆಂಟ್ ಸ್ಟ್ರೈಲ್​ ಆಫ್ ಪ್ಲೇಯರ್ ಆಗಿ ಗುರುತಿಸುವಂತೆ ಮಾಡಿತ್ತು.

ಜೀನಿಯಸ್​​ ಧೋನಿಯನ್ನೇ ಮೀರಿಸಿರುವ ಪಂತ್​
ಧೋನಿ ಟೀಮ್ ಇಂಡಿಯಾದ ಲೆಜೆಂಡರಿ ಆಟಗಾರ. ಕ್ರಿಕೆಟ್​ನ ಜೀನಿಯಸ್ ಧೋನಿಯನ್ನೇ ಪಂತ್ ಮೀರಿಸಿದ್ದಾರೆ. ಇದಕ್ಕೆ ಸಾಕ್ಷಿ ಆಸ್ಟ್ರೇಲಿಯಾ, ಇಂಗ್ಲೆಂಡ್​, ಸೌತ್ ಆಫ್ರಿಕಾ ನೆಲಗಳಲ್ಲಿ ಸಿಡಿಸಿರುವ ಟೆಸ್ಟ್ ಶತಕಗಳಾಗಿವೆ. ಇಂಥಾ ಸಾಧನೆಯನ್ನ ಧೋನಿ ಮಾಡಿದ್ದಿಲ್ಲ. ವಿದೇಶದಲ್ಲಿ ಪಂತ್ ಸಿಡಿಸಿರುವ ಶತಕಗಳು, ಆಡಿರುವ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್​​​ಗಳು ಧೋನಿಯನ್ನ ಮೀರಿಸುವಂಥದ್ದೇ ಆಗಿದೆ. ಈ ಪಂತ್​ ಬ್ಯಾಟ್​ ಬೀಸುವಂತೆ, ಆಗ ಹೋಮ್ ಕಂಡೀಷನ್ಸ್​ ಹೊರತಾಗಿ ಗಿಲ್​ಕ್ರಿಸ್ಟ್​, ಸಿಂಗಲ್ ಹ್ಯಾಂಡ್​​ ಮ್ಯಾಚ್ ವಿನ್ನರ್ ಆಗಿದ್ರು.

ಇದನ್ನೂ ಓದಿ:IND vs ENG ಸೆಮಿಫೈನಲ್ ಪಂದ್ಯ ಕ್ಯಾನ್ಸಲ್..? ವೆದರ್​​ ರಿಪೋರ್ಟ್​​ನಲ್ಲಿ ಶಾಕಿಂಗ್ ಮಾಹಿತಿ..!

ರಿಷಭ್​ ಪಂತ್ ಭವಿಷ್ಯದ ಶ್ರೇಷ್ಠ ವಿಕೆಟ್​ ಕೀಪರ್​​..?

15 ಸಾವಿರ ರನ್, 800 ವಿಕೆಟ್ ಪಡೆದ ಗಿಲ್​​ಕ್ರಿಸ್ಟ್ ಜೊತೆ ರಿಷಭ್​ ಪಂತ್ ಹೋಲಿಸ್ತಾ ಇರೋದು, ಕೆಲವರಿಗೆ ನಗು ತರಿಸಬಹುದು. ಆದ್ರೆ, ಭವಿಷ್ಯದಲ್ಲಿ ಪಂತ್​ಗೆ​​​​​​​​, ಗಿಲ್​ಕ್ರಿಸ್ಟ್ ಸ್ಥಾನ ತುಂಬಬಲ್ಲ ತಾಕತ್ತು ಇದೆ. ಕ್ವಿಂಟನ್ ಡಿಕಾಕ್, ಜೋಸ್ ಬಟ್ಲರ್​ನ್ನ ಹಿಂದಿಕ್ಕಿ, ಮಾಡ್ರನ್ ಡೇ ಕ್ರಿಕೆಟ್​ನ ಶ್ರೇಷ್ಠ ವಿಕೆಟ್ ಕೀಪರ್ ಆಗಿ ರೂಪುಗೊಳ್ಳಬಲ್ಲ ಸಾಮರ್ಥ್ಯ ಇದೆ. ಇದೇ ವಿಚಾರವಾಗಿ ಮಾತನಾಡಿರುವ ಆಸ್ಟ್ರೇಲಿಯಾದ ಶ್ರೇಷ್ಠ ಆಟಗಾರ ಇಯಾನ್​​ ಸ್ಮಿತ್, ಇಬ್ಬರನ್ನು ಹೋಲಿಕೆ ಮಾಡಿದ್ದಾರೆ. ಜೊತೆಗೆ ಪಂತ್​​ಗೆ ಮಹತ್ವದ ಸಲಹೆಯನ್ನ ನೀಡಿದ್ದಾರೆ.

ಪಂತ್ ದೂರಸಾಗಬೇಕು..!
26 ವರ್ಷದ ಕ್ರಿಕೆಟಿಗನ್ನು ಗಿಲ್​ಕ್ರಿಸ್ಟ್​ಗೆ ಹೋಲಿಸಲು ನಾವು ಕಾಯಬೇಕಿದೆ. ಗಿಲ್​​ಕ್ರಿಸ್ಟ್ ಮಟ್ಟವನ್ನು ತಲುಪಲು ಪಂತ್, ಬಹಳ ದೂರ ಸಾಗಬೇಕಿದೆ. ಆದ್ರೆ, ಇಬ್ಬರೂ ಟೆಸ್ಟ್​ ಕ್ರಿಕೆಟ್​ನಲ್ಲಿ ಕೆಳ ಕ್ರಮಾಂಕದಲ್ಲಿ ಮತ್ತು ಸೀಮಿತ ಓವರ್​ಗಳ ಕ್ರಿಕೆಟ್​ನಲ್ಲಿ ಮೇಲ್ಪಂಕ್ತಿಯಲ್ಲಿ ಬ್ಯಾಟಿಂಗ್ ಮಾಡ್ತಾರೆ. ಹೀಗಾಗಿ ಗಿಲ್​​​​​​​​​​​​​ಕ್ರಿಸ್ಟ್​ ಹಾಗೂ ಪಂತ್ ನಡುವೆ ಸಾಮ್ಯತೆ ಇದೆ-ಇಯಾನ್​ ಸ್ಮಿತ್, ಮಾಜಿ ಕ್ರಿಕೆಟಿಗ

ಇದನ್ನೂ ಓದಿ:ಈ ವಿಶ್ವಕಪ್​​ನಲ್ಲಿ ಇಂಗ್ಲೆಂಡ್​ ಜೊತೆಯಿದೆ ​​ಅದೃಷ್ಟದ ದೇವತೆ.. ‘ನಮ್ಗೆ ತಿರುಮಂತ್ರ ಗೊತ್ತು’ ಎಂದ ರೋಹಿತ್ ಪಡೆ

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಇಯಾನ್​​ ಸ್ಮಿತ್, ಹೇಳಿದಂತೆ ಪಂತ್ ಹಾಗೂ ಗಿಲ್​ಕ್ರಿಸ್ಟ್​ ನಡುವೆ ಹಲವು ಸಿಮಿಲಾರಿಟಿಗಳಿವೆ. ಆದ್ರೆ, ಪಂತ್​​, ಆಡಂ ಗಿಲ್​ಕ್ರಿಸ್ಟ್ ಮೀರಿಸಬೇಕಂದ್ರೆ, ಈ ಡೈನಾಮಿಕ್ ಆಟವನ್ನ ಮತ್ತಷ್ಟು ದಿನ ಮುಂದುವರಿಯಬೇಕಿದೆ. ಸದ್ಯದ ಫಾರ್ಮ್ ಉಳಿಸಿಕೊಳ್ಳುವ ಜೊತೆ ಜೊತೆಗೆ ಬದಲಾದ ಕಾಲಕ್ಕೆ ತಕ್ಕಂತೆ ಆಟದಲ್ಲಿ ಇಂಪ್ರೂವ್​ ಮಾಡಿಕೊಳ್ಳಬೇಕಿದೆ. ಆಗ ಮಾತ್ರ ಪಂತ್, ಭವಿಷ್ಯದ ಗಿಲ್​ ಕ್ರಿಸ್ಟ್ ಆಗಲು ಸಾಧ್ಯ.

ಇದನ್ನೂ ಓದಿ:ಸೆಮಿ ಫೈನಲ್ ಪಂದ್ಯ ಆರಂಭಕ್ಕೂ ಮುನ್ನ ದೊಡ್ಡ ಹೇಳಿಕೆ ನೀಡಿದ ಕ್ಯಾಪ್ಟನ್ ರೋಹಿತ್ ಶರ್ಮಾ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈ ಲೆಜೆಂಡರಿ ಬ್ಯಾಟ್ಸಮನ್​​​ನಂತೆ ರಿಷಬ್ ಪಂತ್.. ಮಾರಕ ಬ್ಯಾಟಿಂಗ್.. ಇಬ್ಬರ ಬಲವೂ ಒಂದೇ.. ಯಾರವರು..?

https://newsfirstlive.com/wp-content/uploads/2024/06/RISHAB-PANT-1.jpg

Load More