ಕಳೆದ ವರ್ಷ ಕಾರು ಅಪಘಾತಕ್ಕೊಳಗಾಗಿದ್ದ ಪಂತ್
ರಿಷಬ್ ಪಂತ್ ಅಭಿಮಾನಿಗಳಿಗೆ ಇಲ್ಲಿದೆ ಗುಡ್ನ್ಯೂಸ್
2024ರ ಇಂಗ್ಲೆಂಡ್ ಪ್ರವಾಸದ ವೇಳೆ ಪಂತ್ ಕಮ್ಬ್ಯಾಕ್!
ಡೆಡ್ಲಿ ಕಾರು ಆ್ಯಕ್ಸಿಡೆಂಟ್ನಿಂದ ರಿಷಬ್ ಪಂತ್ ಬದುಕುಳಿದಿದ್ದೇ ಪವಾಡ. ಗಂಭೀರ ಗಾಯಗೊಂಡಿದ್ದ ಪಂತ್ ರಿಕವರಿಗೆ ಸುದೀರ್ಘ ಸಮಯ ಬೇಕು ಅಂತಾ ಎಲ್ಲರೂ ಅಂದುಕೊಂಡಿದ್ರು. ಪಂತ್ ಅವೆಲ್ಲವನ್ನು ಸುಳ್ಳಾಗಿಸಿದ್ದಾರೆ. ಯಾರೂ ನಿರೀಕ್ಷಿಸದ ರೀತಿಯಲ್ಲಿ ರಿಕವರಿ ಆಗ್ತಿದ್ದಾರೆ. ಈ ಫಾಸ್ಟ್ ರಿಕವರಿಯ ಸಿಕ್ರೇಟ್ ಇದೀಗ ರಿವೀಲ್ ಆಗಿದೆ.
ಫೆಬ್ರವರಿ 2017 to ಡಿಸೆಂಬರ್ 2022.. ಈ ಐದು ವರ್ಷಗಳಲ್ಲಿ ಮ್ಯಾಚ್ ವಿನ್ನರ್ ರಿಷಬ್ ಪಂತ್ ಮುಟ್ಟಿದ್ದೆಲ್ಲ ಚಿನ್ನ. ಅದ್ಯಾವ ಮಟ್ಟಿಗೆ ಅಂತೀರಾ ? ಟೀಮ್ ಇಂಡಿಯಾ ಅಂದ್ರೆ ಪಂತ್ ಪಂತ್ ಅಂದ್ರೆ ಟೀಮ್ ಇಂಡಿಯಾ ಅನ್ನುವಷ್ಟರ ಮಟ್ಟಿಗೆ ಆವರಿಸಿ ಬಿಟ್ಟಿದ್ರು. ವಿಕೆಟ್ ಕೀಪಿಂಗ್, ಬ್ಯಾಟಿಂಗ್, ಮ್ಯಾಚ್ ಫಿನಿಶಿಂಗ್. ಹೀಗೆ ಎಲ್ಲಾ ರೋಲ್ಗಳನ್ನು ಸಮರ್ಥವಾಗಿ ನಿಭಾಯಿಸಿ ಸ್ಟಾರ್ ಪಟ್ಟ ಅಲಂಕರಿಸಿದ್ರು.
ಇಂತಹ ಡೇರಿಂಗ್ ಬ್ಯಾಟರ್ ಪಂತ್ ಮೇಲೆ ಅದ್ಯಾರ ಕಣ್ಣು ಬಿತ್ತೊ ಗೊತ್ತಿಲ್ಲ. ಪಂತ್ ಕರಿಯರ್ನಲ್ಲಿ ಯಾರೂ ನಿರೀಕ್ಷಿಸಲಾರದ, ಯಾರೂ ಊಹಿಸಲಾರದ, ಯಾರ ಯೋಚನೆಗೂ ನಿಲುಕದ ಒಂದು ಆಘಾತಕಾರಿ ಘಟನೆ ನಡೆದು ಹೋಯ್ತು. ಡಿಸೆಂಬರ್ 30, 2022 ರಂದು ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಬರಸಿಡಿಲಿನ ಸುದ್ದಿ ಅಪ್ಪಳಿಸಿತ್ತು. ಪಂತ್ ಡೆಡ್ಲಿ ಆಕ್ಸಿಡೆಂಟ್ಗೆ ತುತ್ತಾಗಿ ಪವಾಡ ಸದೃಶ್ಯ ರೀತಿಯಲ್ಲಿ ಬದುಕುಳಿದ್ರು.
ವೇಗವಾಗಿ ಗುಣಮುಖರಾಗುತ್ತಿದ್ದಾರೆ ರಿಷಬ್ ಪಂತ್..!
ಪಂತ್ ಕಾರು ಅಪಘಾತದಲ್ಲಿ ಪವಾಡ ಸದೃಶ್ಯ ರೀತಿಯಲ್ಲಿ ಪಂತ್ ಏನೋ ಬದುಕುಳಿದ್ರು. ಅವರ ರಿಕವರಿ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಮೈ ತುಂಬಾ ಗಾಯ, ಸರ್ಜರಿ ಎಲ್ಲವೂ ಯುವ ಆಟಗಾರರನ್ನು ಹಿಂಡಿ ಹಿಪ್ಪೆ ಮಾಡಿಸಿತ್ತು. ಪಂತ್ ಸ್ಥಿತಿಯನ್ನು ನೋಡಿದ ಡಾಕ್ಟರ್ಸ್ ಗುಣಮುಖರಾಗಲು ಸುದೀರ್ಘ ಸಮಯ ಹಿಡಿಯಲಿದೆ ಎಂದರು. ಫ್ಯಾನ್ಸ್ ಈ ಸುದ್ದಿ ಕೇಳಿ ಕುಗ್ಗಿ ಹೋದ್ರು. ಯಾಕಂದ್ರೆ ಪಂತ್ ಅಗತ್ಯತೆ ಟೀಮ್ ಇಂಡಿಯಾಗೇ ತುಂಬಾನೆ ಇದೆ. ತಂಡದಿಂದ ದೂರ ಇದ್ದಷ್ಟು ತಂಡಕ್ಕೆ ನಷ್ಟ ಹೆಚ್ಚು.
ಫ್ಯಾನ್ಸ್ ನೆಚ್ಚಿನ ಕ್ರಿಕೆಟರ್ ಬೇಗ ರಿಕವರಿ ಆಗಲಿ ಎಂದು ಪ್ರಾರ್ಥಿಸಿದ್ರು. ಕೊನೆಗೂ ಅಭಿಮಾನಿಗಳ ಪ್ರಾರ್ಥನೆ ಫಲಿಸಿದೆ. ಪಂತ್ ನಿರೀಕ್ಷೆಗೂ ಮೀರಿ ವೇಗವಾಗಿ ಚೇತರಿಸಿಕೊಳ್ತಿದ್ದಾರೆ. ರಿಹ್ಯಾಬ್ಗೆ ಒಳಗಾಗಿರೋ ಪಂತ್, ಫಿಟ್ನೆಸ್ ಕಡೆಗೆ ಗಮನ ವಹಿಸ್ತಿದ್ದಾರೆ. ಇದಕ್ಕೆ ಲೇಟೆಸ್ಟ್ ವಿಡಿಯೋವೇ ಬೆಸ್ಟ್ ಎಕ್ಸಾಂಪಲ್. ಇಷ್ಟಕ್ಕೆ ಖುಷಿಪಟ್ರೆ ಹೇಗೆ..? ಆಲೂರಿನಲ್ಲಿ ನಡೀತಿರೋ ಟೀಮ್ ಇಂಡಿಯಾ ಕ್ಯಾಂಪ್ನಲ್ಲೂ ಕಾಣಿಸಿಕೊಂಡಿರೋ ಪಂತ್, ಬ್ಯಾಟಿಂಗ್ ಮಾಡೋವಷ್ಟು ಫಿಟ್ ಆಗಿದ್ದಾರೆ. ವಾರದ ಹಿಂದೆ ಪ್ಯಾಡ್ ಕಟ್ಟಿ ಅಂಗಳಕ್ಕಿದು ಸಿಕ್ಸರ್ ಸಿಡಿಸಿದ್ದಾರೆ.
Rishabh Pant is back 💥#RishabhPant pic.twitter.com/QocIzoSisf
— rishab (@rishab9411) August 29, 2023
ಪಂತ್ ಸ್ಪೀಡ್ ರಿಕವರಿ ಹಿಂದಿದೆ 2 ಸೀಕ್ರೆಟ್..!
ಆಕ್ಸಿಡೆಂಟ್ ಬಳಿಕ ಪಂತ್ ಪ್ಯಾಡ್ ಕಟ್ಟಿ ಮತ್ತೆ ಬ್ಯಾಟ್ ಹಿಡಿದಿದ್ದನ್ನ ನೋಡಿದ ಫ್ಯಾನ್ಸ್ಗೆ ಖುಷಿ ಜೊತೆ ಅಚ್ಚರಿಯೂ ಆಗುತ್ತೆ. ಯಾಕಂದ್ರೆ ಪಂತ್ ರಿಕವರಿಗೆ ಎಕ್ಸ್ಪರ್ಟ್ ಡಾಕ್ಟರ್ಸ್ ಸುದೀರ್ಘ ಸಮಯ ಬೇಕು ಅಂದಿದ್ರು. ಆಶ್ಚರ್ಯಕರ ರೀತಿಯಲ್ಲಿ ರಿಷಬ್ ವೇಗವಾಗಿ ಗುಣಮುಖರಾಗುತ್ತಿದ್ದಾರೆ. ಇದರ ಹಿಂದಿನ ಸಿಕ್ರೇಟ್ ಏನು ಅನ್ನೋದನ್ನ ಪೌಷ್ಟಿಕತಜ್ಞ ಶ್ವೇತಾ ಶಾ ರಿವೀಲ್ ಮಾಡಿದ್ದಾರೆ.
ಪಂತ್ ಆಹಾರ ಕ್ರಮದಲ್ಲಿ ಬದಲಾವಣೆ
ಮಾಂಸಹಾರಿ ರಿಷಬ್ ಪಂತ್ ಚೇತರಿಕೆಗಾಗಿ ನೆಚ್ಚಿನ ಆಹಾರ ಚಿಕನ್ ತ್ಯಜಿಸಿದ್ರು. ಅವರಿಗೆ DE-BLOAT ಮತ್ತು ಮನೆ ಆಹಾರ ಸೇವಿಸುವಂತೆ ಸಲಹೆ ನೀಡಿದೆ. ಜೊತೆಗೆ ಕೆಂಪು ಮೆಣಸಿನ ಪುಡಿ, ಕಚ್ಚಾ ಆಹಾರಗಳು ಮತ್ತು ಮಸಾಲದಿಂದ ತಯಾರಿಸಿದ ಅಹಾರ ಪದಾರ್ಥಗಳ ತಿನ್ನೋದನ್ನೂ ಬಿಟ್ಟರು. ಅವರಿಗೆ ಬೆಳಗಿನ ತಿಂಡಿಗೆ ಮೊಟ್ಟೆ ಮತ್ತು ಅವಕಾಡೊಗಳನ್ನು ನೀಡಲಾಯಿತು. ಪಂತ್ ರೊಟ್ಟಿಗಳ ಜೊತೆ ಪರೋಠ ತುಂಬಾ ಇಷ್ಟ ಪಡುತ್ತಾರೆ. 15 ದಿನಗಳವರೆಗೆ, ಗೋಧಿ, ಡೈರಿ ಮತ್ತು ಪನೀರ್ ನೀಡುವುದನ್ನು ತಡೆದಿದ್ದೇವೆ. DE-BLOAT ಮತ್ತು ಮನೆ ಅಹಾರ ಸೇವನೆ ಶುರು ಮಾಡಿದ ಬಳಿಕ ಆರೋಗ್ಯದಲ್ಲಿ ಸಾಕಷ್ಟು ಚೇತರಿಕೆ ಕಂಡಿತು. ಜೊತೆಗೆ ವೇಗವಾಗಿ ಗುಣಮುಖುರಾಗುತ್ತಿದ್ದಾರೆ-ಶ್ವೇತಾ ಶಾ, ಆಹಾರ ಪೌಷ್ಟಿಕತಜ್ಞೆ
2024ರ ಇಂಗ್ಲೆಂಡ್ ಪ್ರವಾಸದ ವೇಳೆ ಪಂತ್ ಕಮ್ಬ್ಯಾಕ್?
ರಿಷಬ್ ಪಂತ್ ಟೀಮ್ ಇಂಡಿಯಾದಿಂದ ದೂರವಾಗಿ 8 ತಿಂಗಳು ಕಳೆದಿದೆ. ಕಾರು ಆಕ್ಸಿಡೆಂಟ್ನಲ್ಲಿ ರಿಕವರಿ ಆಗುತ್ತಿರುವ ಪಂತ್, ಮುಂದಿನ ವರ್ಷಾರಂಭದಲ್ಲಿ ತಂಡಕ್ಕೆ ಕಮ್ಬ್ಯಾಕ್ ಮಾಡಲಿದ್ದಾರೆ. ಬಿಸಿಸಿಐ ಮೂಲಗಳ ಪ್ರಕಾರ 2024 ರಲ್ಲಿ ಇಂಗ್ಲೆಂಡ್, ಟೀಮ್ ಇಂಡಿಯಾ ಪ್ರವಾಸ ಕೈಗೊಳ್ಳಲಿದೆ. ಈ ವೇಳೆ ಪಂತ್ ಫುಲ್ ಫಿಟ್ ಆಗಲಿದ್ದು ಮತ್ತೆ ಬ್ಯಾಟ್ ಹಿಡಿದು ಅಭಿಮಾನಿಗಳನ್ನ ರಂಜಿಸಲಿದ್ದಾರೆ ಎಂದು ಹೇಳಲಾಗ್ತಿದೆ. ಹಾಗೊಂದು ವೇಳೆ ಡೇರಿಂಗ್ ಬ್ಯಾಟರ್ ಕಮ್ಬ್ಯಾಕ್ ಮಾಡಿದ್ದೆ ಆದಲ್ಲಿ ಅದಕ್ಕಿಂತ ದೊಡ್ಡ ಗುಡ್ನ್ಯೂಸ್ ಮತ್ತೊಂದಿಲ್ಲ.
ವಿಶೇಷ ವರದಿ: ಮಾಗುಂಡಯ್ಯ ಪಟ್ಟೇದ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್