ಸ್ಟಾರ್​ ಪ್ಲೇಯರ್​ ರಿಷಬ್​​ ಪಂತ್​​ಗೆ ಬಿಗ್​ ಸ್ಟ್ರೋಕ್​​ ಕೊಟ್ಟ ಬಿಸಿಸಿಐ; ಮಹತ್ವದ ಟೂರ್ನಿಯಿಂದಲೇ ಔಟ್​​

author-image
Ganesh Nachikethu
Updated On
ಟಾರ್ಗೆಟ್ ಸೆಟ್ ಮಾಡಿದ ಪಂತ್; ಸಾವು ಗೆದ್ದು ಬಂದ ಆಟಗಾರನ ಮೇಲೆ ಅಭಿಮಾನಿಗಳಿಗೆ ಹೆಚ್ಚಿದ ಅಭಿಮಾನ..!
Advertisment
  • ಟೀಮ್​​ ಇಂಡಿಯಾ, ಬಾಂಗ್ಲಾದೇಶದ ನಡುವಿನ ಟಿ20 ಸರಣಿ!
  • ಅಕ್ಟೋಬರ್ 7ನೇ ತಾರೀಕಿನಿಂದ ಬಾಂಗ್ಲಾ ವಿರುದ್ಧ ಟಿ20 ಶುರು
  • ಭಾರತ ತಂಡದ ಸ್ಟಾರ್​​ ಯುವ ಬ್ಯಾಟರ್​​​ಗೆ ತಂಡದಲ್ಲಿ ಅವಕಾಶ

ಭಾರತ ಕ್ರಿಕೆಟ್​​ ತಂಡ ಮತ್ತು ಬಾಂಗ್ಲಾದೇಶದ ನಡುವಿನ 2 ಪಂದ್ಯಗಳ ಟೆಸ್ಟ್​​ ಸರಣಿಗೆ ಕ್ಷಣಗಣನೆ ಶುರುವಾಗಿದೆ. ಸೆಪ್ಟೆಂಬರ್ 19ನೇ ತಾರೀಕಿನಿಂದ ಚೆನ್ನೈನ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯಲಿರೋ ಮೊದಲ ಟೆಸ್ಟ್​​​ ಪಂದ್ಯಕ್ಕಾಗಿ ಟೀಮ್​ ಇಂಡಿಯಾ ಭರ್ಜರಿ ತಯಾರಿ ನಡೆಸಿದೆ. ಇದರ ಮಧ್ಯೆ ಟೀಮ್​ ಇಂಡಿಯಾ ಬಾಂಗ್ಲಾ ವಿರುದ್ಧ ಟಿ20 ಸರಣಿ ಆಡಲಿದ್ದು, ಬಿಗ್​ ಅಪ್ಡೇಟ್​​ ಒಂದಿದೆ.

ಬಾಂಗ್ಲಾ ವಿರುದ್ಧದ ಟೆಸ್ಟ್ ಪಂದ್ಯಗಳಲ್ಲಿ ರಿಷಬ್ ಪಂತ್ ಟೀಮ್ ಇಂಡಿಯಾ ಆಧಾರ ಸ್ತಂಭ. ಈ ವರ್ಷ ಭಾರತ 10ಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಹಾಗಾಗಿ ಇವರಿಗೆ ಮುಂಬರುವ ಟಿ20 ಸರಣಿಯಿಂದ ವಿಶ್ರಾಂತಿ ನೀಡಲಾಗುತ್ತಿದೆ. ಕೆಲಸದ ಹೊರೆ ಕಡಿಮೆ ಮಾಡಲು ಬಿಸಿಸಿಐ ಈ ನಿರ್ಧಾರ ತೆಗೆದುಕೊಂಡಿದೆ.

ಬಾಂಗ್ಲಾ ವಿರುದ್ಧ ಟಿ20 ಸರಣಿಯಿಂದ ಪಂತ್​​ ಔಟ್​

ಅಕ್ಟೋಬರ್ 7ನೇ ತಾರೀಕಿನಿಂದ ಬಾಂಗ್ಲಾದೇಶದ ವಿರುದ್ಧ ಟಿ20 ಸರಣಿ ಶುರುವಾಗಲಿದೆ. ರೆಸ್ಟ್​ ನೀಡುವ ಸಾಧ್ಯತೆ ಇರುವ ಕಾರಣ ಪಂತ್​ ಭಾರತ ಟಿ20 ಸೇರುವುದು ಡೌಟ್​​. ಹೀಗಾಗಿ ಇವರ ಸ್ಥಾನದಲ್ಲಿ ದುಲೀಪ್ ಟ್ರೋಫಿಯಲ್ಲಿ ಮಿಂಚುತ್ತಿರೋ ಇಶಾನ್‌ ಕಿಶನ್​ಗೆ ಸ್ಥಾನ ನೀಡಬಹುದು. ದುಲೀಪ್ ಟ್ರೋಫಿಯಲ್ಲಿ ಸತತ ಸ್ಥಿರ ಪ್ರದರ್ಶನವನ್ನು ನೀಡಿರೋ ಕಾರಣ ಆಯ್ಕೆದಾರರು ಇಶಾನ್​​ಗೆ ಮಣೆ ಹಾಕಲಿದ್ದಾರೆ ಎಂದು ತಿಳಿದು ಬಂದಿದೆ.

ಬುಚ್ಚು ಬಾಬು ಮತ್ತು ದುಲೀಪ್ ಟ್ರೋಫಿಯಲ್ಲಿ ಇಶಾನ್ ಕಿಶನ್ ಶತಕದ ಮೇಲೆ ಶತಕ ಸಿಡಿಸಿದ್ರು. ಈ ಮೂಲಕ ಬಿಸಿಸಿಐ ಗಮನ ಸೆಳೆದಿದ್ದಾರೆ. ಹೀಗಾಗಿ ಇಶಾನ್​​ ಬಾಂಗ್ಲಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಕ್ರಿಕೆಟ್​ ತಂಡದ ಭಾಗವಾಗಲಿದ್ದಾರೆ.

ಇದನ್ನೂ ಓದಿ:ಟೀಮ್​ ಇಂಡಿಯಾದ ಈ ದಿಗ್ಗಜರ ದಾಖಲೆ ಮುರಿಯಲಿದ್ದಾರೆ ಆರ್​​. ಅಶ್ವಿನ್​​​; ಏನದು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment