/newsfirstlive-kannada/media/post_attachments/wp-content/uploads/2024/04/PANT-1.jpg)
ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 106 ರನ್‌ಗಳಿಂದ ಸೋಲಿಸಿದೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಭಾರೀ ಅಂತರದಿಂದ ಸೋತ ನಂತರ ರಿಷಬ್ ಪಂತ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ದೆಹಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್‌ಗೆ ಕೆಟ್ಟ ಸುದ್ದಿಯೊಂದು ಬಂದಿದೆ. ಪಂತ್ ಮಾಡಿದ ಆ ಒಂದು ತಪ್ಪಿನಿಂದ 24 ಲಕ್ಷ ರೂಪಾಯಿ ನಷ್ಟ ಅನುಭವಿಸಿದ್ದಾರೆ.
ಇದನ್ನೂ ಓದಿ: ಕಂಬ್ಯಾಕ್ ABD ಅಂತಿದ್ದಾರೆ ಫ್ಯಾನ್ಸ್; ಆರ್​ಸಿಬಿ ಅಭಿಮಾನಿಗಳ ಕಣ್ಣುಗಳನ್ನು ಒದ್ದೆ ಮಾಡಿಸ್ತಿದೆ ಈ ದೃಶ್ಯ..!
ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಪಂತ್​​ಗೆ 24 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಇದು ಐಪಿಎಲ್ 2024ರ ಋತುವಿನಲ್ಲಿ ರಿಷಬ್ ಪಂತ್ ಅವರ ಎರಡನೇ ಅಪರಾಧವಾಗಿದೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಮಾಡಿರೋ ಹಿನ್ನೆಲೆಯಲ್ಲಿ ದಂಡ ವಿಧಿಸಿದೆ. ಒಂದು ವೇಳೆ ಪಂತ್ ಮುಂದಿನ ಪಂದ್ಯಗಳಲ್ಲಿ ಇದೇ ತಪ್ಪು ಮಾಡಿದ್ರೆ, ಅವರು ಒಂದು ಐಪಿಎಲ್ ಪಂದ್ಯದಿಂದ ನಿಷೇಧಕ್ಕೆ ಒಳಗಾಗುವ ಸಾಧ್ಯತೆ ಇದೆ. 24 ಲಕ್ಷ ರೂಪಾಯಿ ದಂಡದ ಬದಲಾಗಿ 30 ಲಕ್ಷ ದಂಡ ಕೂಡ ವಿಧಿಸಬಹುದು.
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಮಾಡಿದ್ಕೆ ದಂಡ ವಿಧಿಸಿದ್ದು ಪಂತ್​ಗೆ ಮಾತ್ರವಲ್ಲ. ಇಂಪ್ಯಾಕ್ಟ್ ಪ್ಲೇಯರ್​​ ಅಭಿಷೇಕ್ ಪೊರೆಲ್ ಸೇರಿದಂತೆ ಪ್ಲೇಯಿಂಗ್-11ನ ಪ್ರತಿ ಆಟಗಾರರಿಗೆ ತಲಾ 6 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಒಂದು ವೇಳೆ ಮೂರನೇ ಪಂದ್ಯದಲ್ಲೂ ಸ್ಲೋ ಓವರ್​ ಹಾಕಿಸಿದ್ದರೆ, 30 ಲಕ್ಷ ರೂಪಾಯಿ ದಂಡದ ಹೊರತಾಗಿ, ನಾಯಕನಿಗೆ ಒಂದು ಐಪಿಎಲ್ ಪಂದ್ಯಕ್ಕೆ ನಿಷೇಧ ಹೇರಲಾಗುತ್ತದೆ. ನಿಯಮದ ಪ್ರಕಾರ, 90 ನಿಮಿಷದಲ್ಲಿ 20 ಓವರ್​​ಗಳನ್ನು ಮುಗಿಸಬೇಕು. ಆದರೆ ಮೊನ್ನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಎರಡು ಗಂಟೆ ತೆಗೆದುಕೊಂಡಿದೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us