/newsfirstlive-kannada/media/post_attachments/wp-content/uploads/2024/09/RISHAB_PANTH.jpg)
ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಬಾಂಗ್ಲಾದೇಶದ ವಿರುದ್ಧ ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡಿದೆ.​ ಮೊದಲ ಟೆಸ್ಟ್​ನ 2ನೇ ಇನ್ನಿಂಗ್ಸ್​ನಲ್ಲಿ ಶುಭ್​ಮನ್ ಗಿಲ್ ಹಾಗೂ ರಿಷಬ್ ಪಂತ್ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಆದರೆ ರಿಷಬ್ ಪಂತ್ ಬ್ಯಾಟಿಂಗ್ ಮಾಡುವಾಗ ಮೈದಾನದಲ್ಲಿ ಕುತೂಹಲಕಾರಿ ಸಂಗತಿಯೊಂದು ನಡೆದಿದ್ದು ಬಾಂಗ್ಲಾ ಪ್ಲೇಯರ್ಸ್​ ಅನ್ನು ಫ್ಲೀಲ್ಡಿಂಗ್ ನಿಲ್ಲಿಸಿದ್ದಾರೆ.
ಮೈದಾನದಲ್ಲಿ ಬಾಂಗ್ಲಾ ಬೌಲರ್​ಗಳ ಎಸೆತಗಳನ್ನು​ ಪಂತ್ ಹಾಗೂ ಗಿಲ್​ ಮನ ಬಂದಂತೆ ಚಚ್ಚುತ್ತಿದ್ದರು. ಇವರನ್ನು ಔಟ್ ಮಾಡುವುದು ಹೇಗೆ ಎಂದು ಬಾಂಗ್ಲಾ ಕ್ಯಾಪ್ಟನ್​ಗೆ ತಲೆ ಕೆಟ್ಟು ಹೋಗಿತ್ತು. ಮೈದಾನದಲ್ಲಿ ತಮ್ಮ ಪ್ಲೇಯರ್ಸ್​ ಅನ್ನು ಎಲ್ಲಿ ನಿಲ್ಲಿಸಿದರು ಪಂತ್ ಹಾಗೂ ಗಿಲ್ ಅವರ ಬ್ಯಾಟಿಂಗ್ ಇನ್ನಷ್ಟು ಪ್ರಬಲವಾಗತ್ತಿತ್ತು. ಇದರಿಂದ ಬೇಸರಗೊಂಡಿದ್ದ ಬಾಂಗ್ಲಾ ಆಟಗಾರರು ನಿಯಮದಂತೆ ಫೀಲ್ಡಿಂಗ್​ ಸರಿಯಾಗಿ ನಿಂತಿರಲಿಲ್ಲ ಎನ್ನಲಾಗಿದೆ.
Rishabh Pant setting the field for Bangladesh. ??
- What a character, Pant. pic.twitter.com/sRL69LPgco
— Johns. (@CricCrazyJohns)
Rishabh Pant setting the field for Bangladesh. 😆🔥
- What a character, Pant. pic.twitter.com/sRL69LPgco— Johns. (@CricCrazyJohns) September 21, 2024
">September 21, 2024
ಈ ವೇಳೆ ಪಂತ್ ಸ್ಟ್ರೈಕ್ ಬಂದಾಗ ಲೆಗ್​​ಸೈಡ್​ ಫ್ರಂಟ್​ನಲ್ಲಿ ಫೀಲ್ಡರ್ ಯಾರು ಇರಲಿಲ್ಲ. ಹೀಗಾಗಿ ಆಫ್​ಸೈಡ್​ನಲ್ಲಿದ್ದ ಫೀಲ್ಡರ್​ನನ್ನು ರಿಷಬ್ ಪಂತ್ ಕರೆದು, ಒಬ್ಬ ಫಿಲ್ಡರ್​ ಇಲ್ಲಿ ಬಂದು ನಿಲ್ಲಬೇಕು (ಭಾಯ್​ ಏಕ್ ಇದಾರ್ ಆಯಾಗ ಏಕ್) ಎಂದು ಹೇಳುತ್ತಾರೆ. ಆಗ ಪಂತ್ ಹೇಳಿದ ಸ್ಥಳಕ್ಕೆ ಓಡೋಡಿ ಬಂದು ಫೀಲ್ಡರ್ ನಿಲ್ಲುತ್ತಾನೆ. ಮತ್ತೆ ಪಂತ್, ಗಿಲ್​ ಬಿರುಸಿನ ಬ್ಯಾಟಿಂಗ್ ಮುಂದುವರೆಯುತ್ತದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿತ್ತು. ಅಭಿಮಾನಿಗಳು ಪಂತ್​​ರನ್ನ ಹಾಡಿ ಹೊಗಳುತ್ತಿದ್ದಾರೆ.
ಇನ್ನು ಟೀಮ್ ಇಂಡಿಯಾ ಈ ಪಂದ್ಯದಲ್ಲಿ 2ನೇ ಇನ್ನಿಂಗ್ಸ್​ನಲ್ಲಿ 4 ವಿಕೆಟ್​ಗೆ 287 ರನ್​ಗಳನ್ನ ಗಳಿಸಿತ್ತು. ಆಗ ರೋಹಿತ್ ಶರ್ಮಾ ಡಿಕ್ಲೈರ್ ಮಾಡಿಕೊಂಡರು. ಸದ್ಯ ಭಾರತ 514 ರನ್​ಗಳ ಮುನ್ನಡೆ ಸಾಧಿಸಿದ್ದು ಬಾಂಗ್ಲಾ ಗೆಲ್ಲಬೇಕು ಎಂದರೆ 515 ರನ್​ಗಳನ್ನು ಗಳಿಸಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ