/newsfirstlive-kannada/media/post_attachments/wp-content/uploads/2024/06/ROHIT_PANT.jpg)
ನ್ಯೂಯಾರ್ಕ್​​ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ​ನಲ್ಲಿ ಇನ್ನೇನು ಕೆಲವೇ ಗಂಟೆಗಳಲ್ಲಿ ಐಸಿಸಿ ಮೆಗಾ ಟೂರ್ನಿಯ ಟಿ20 ವಿಶ್ವಕಪ್ ಪಂದ್ಯ ನಡೆಯಲಿದೆ. ಈಗಾಗಲೇ ರೋಹಿತ್ ಬಾಯ್ಸ್​ ಭರ್ಜರಿ ಅಭ್ಯಾಸ ನಡೆಸಿ ಬೆವರು ಹರಿಸಿದ್ದಾರೆ. ಸದ್ಯ ಇಡೀ ತಂಡದ ಆಕರ್ಷಣೆಯಾಗಿ ಕಂಡು ಬಂದಿರುವುದು ಡೆಲ್ಲಿಯ ಡೇರ್​ ಡೆವಿಲ್ ಪ್ಲೇಯರ್​ ರಿಷಬ್​ ಪಂತ್. ರೋಹಿತ್, ಕೊಹ್ಲಿಯಂತಹ ಸ್ಟಾರ್ ಆಟಗಾರರು ಇದ್ದರು ನನ್ನ ಆರಾಧ್ಯ ಆಟಗಾರ ಎಂಎಸ್ ಧೋನಿ ಎಂದು ಹಾಡಿ ಹೊಗಳಿದ್ದಾರೆ.
ಇದನ್ನೂ ಓದಿ: ಗೆಲ್ತಿವೋ, ಬಿಡ್ತಿವೋ ಅನ್ನೋದು ಸೆಕೆಂಡ್ರಿ.. ಪಾಕಿಸ್ತಾನದ ವಿರುದ್ಧ ಸೋಲಬಾರ್ದು; ಕುತೂಹಲ ಕೆರಳಿಸಿದ ಮ್ಯಾಚ್!
ಭಾರತದ ಮಾಜಿ ಕ್ಯಾಪ್ಟನ್ ಧೋನಿ ಕುರಿತು ಅಮೆರಿಕದಲ್ಲಿ ಮಾತನಾಡಿರುವ ರಿಷಬ್ ಪಂತ್, ಧೋನಿ ಭಾಯ್ ನನ್ನ ಆರಾಧ್ಯ ಆಟಗಾರ. ನಾನು ಅವರಿಂದ ಬಹಳಷ್ಟು ಕಲಿತಿದ್ದೇನೆ. ನನಗೆ ಯಾವುದೇ ಸಹಾಯ ಅಥವಾ ಸಲಹೆ ಬೇಕಾದಾಗ ಮಾಹಿ ಭಾಯಿಯನ್ನು ಕೇಳುತ್ತೇನೆ. ಅವರು ಯಾವಾಗಲೂ ನನಗೆ ಸಹಾಯ ಮಾಡಲು ಮತ್ತು ಮಾರ್ಗದರ್ಶನ ನೀಡಲು ರೆಡಿಯಾಗಿರುತ್ತಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಕರ್ನಾಟಕದ ಬಿಜೆಪಿ ಮುಖಂಡ ಮಹಾರಾಷ್ಟ್ರದ ಗಡಿ ಭಾಗದಲ್ಲಿ ಅನುಮಾನಾಸ್ಪದವಾಗಿ ಸಾವು
/newsfirstlive-kannada/media/post_attachments/wp-content/uploads/2024/06/ROHIT_DHONI-1.jpg)
ಇನ್ನು ಇದೇ ವೇಳೆ ರಿಷಬ್ ಪಂತ್ ಬಗ್ಗೆ ಮಾತನಾಡಿದ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು, ಯಾರ ಬಗ್ಗೆ ಮಾತನಾಡುವುದು ಪಂತ್ ಅವರ ವೈಯಕ್ತಿಕ ವಿಚಾರ. ಎಲ್ಲ ಮಾದರಿಯ ಕ್ರಿಕೆಟ್​ನಲ್ಲಿ ಭಾರತ ತಂಡಕ್ಕೆ ರಿಷಬ್ ಪಂತ್ ಅತ್ಯಂತ ಮುಖ್ಯವಾದ ಪ್ಲೇಯರ್ ಆಗಿದ್ದಾರೆ. ಆಕ್ಸಿಡೆಂಟ್ ಆದ ಮೇಲೆ ಅವರ ಕುಟುಂಬ ಸಾಕಷ್ಟು ನೋವು ಅನುಭವಿಸಿದೆ. ಆದರೆ ಎಲ್ಲವನ್ನು ಗೆದ್ದು ಟೀಮ್​​ಗೆ ಮರಳಿರುವುದು ತುಂಬಾ ಸಂತಸದ ಸುದ್ದಿ. ಇದರಿಂದ ನನಗೆ ಖುಷಿಯಾಗಿದೆ ಎಂದು ಪಂತ್ ಬಗ್ಗೆ ರೋಹಿತ್ ಮೆಚ್ಚುಗೆಯ ಮಾತುಗಳನ್ನು ಆಡಿರುವುದು ತಿಳಿದು ಬಂದಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us