/newsfirstlive-kannada/media/post_attachments/wp-content/uploads/2024/07/Riteish-and-Genelia.jpg)
ಶ್ರೇಷ್ಠದಾನಗಳಲ್ಲಿ ಅನ್ನದಾನ, ವಿದ್ಯಾದಾನಗಳೆಂಬಂತೆ ಅಂಗಾಂಗ ದಾನವು ಪ್ರಮುಖವಾದದ್ದು. ಅನೇಕ ತಾರೆಯರು ತಮ್ಮ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಅನೇಕರ ಜೀವನಕ್ಕೆ ಬೆಳಕಾಗಿರುವ ಉದಾಹರಣೆಗಳು ಹಲವಾರಿವೆ. ಇದೀಗ ಬಾಲಿವುಡ್​​ ತಾರೆಯರಾದ ರಿತೇಶ್​ ದೇಶ್​ಮುಖ್​ ಮತ್ತು ಜೆನಿಲಿಯಾ ತಮ್ಮ ಅಂಗಾಂಗ ದಾನ ಮಾಡುವುದಾಗಿ ತಿಳಿಸಿದ್ದಾರೆ.
ಬಾಲಿವುಡ್​ ಕ್ಯೂಟ್​​ ಕಪಲ್​ಗಳಾದ ರಿತೇಶ್​ ಮತ್ತು ಜೆನಿಲಿಯಾ ತಮ್ಮ ಇನ್​​ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದು, ಅಂಗಾಂಗ ದಾನ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಜೊತೆಗೆ ಇದೊಂದು ದೊಡ್ಡ ಉಡುಗೊರೆ ಎಂದು ಹೇಳಿದ್ದಾರೆ. ಜೊತೆಗೆ ಜನರಿಗೂ ಅಂಗಾಂಗ ದಾನ ಮಾಡಲು ಒತ್ತಾಯಿಸಿದ್ದಾರೆ.
Thanks to Riteish Deshmukh & Genelia, the Bollywood star couple for pledging to donate their organs during the ongoing organ donation month of July. Their gesture will motivate others also to connect with the noble cause.#organdonation#Bollywood#savelivespic.twitter.com/lJ1Yiyaj1o
— NOTTO (@NottoIndia)

— NOTTO (@NottoIndia) July 6, 2024
">July 6, 2024
ಇದನ್ನೂ ಓದಿ: VIDEO: ನದಿ ನೀರಿನಲ್ಲಿ ಹುಚ್ಚಾಟ ಮೆರೆದ ಡ್ರೈವರ್​.. ಕಣ್ಣ ಮುಂದೆಯೇ ಕೊಚ್ಚಿ ಹೋಯ್ತು ಲಾರಿ
ರಿತೇಶ್​ ಮತ್ತು ಜೆನಿಲಿಯಾ ಕಾರ್ಯಕ್ಕೆ ರಾಷ್ಟ್ರೀಯ ಅಂಗ ಮತ್ತು ಕಸಿ ಸಂಸ್ಥೆ ಕೃತಜ್ಞತೆ ಸಲ್ಲಿಸಿದೆ. ಇನ್ನು ಈ ಜೋಡಿ ಜುಲೈ 1 ರಂದು ಅಂಗಾಂಗ ದಾನ ಮಾಡುವುದಾಗಿ ನಿರ್ಧರಿಸಿ ಒಪ್ಪಿಗೆ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us