newsfirstkannada.com

ಪತಿಯಿಂದ ದೂರವಾದ ‘ಶೈಲೂ’ ನಟಿ.. ನನಗೂ ನನ್ನ ಮಗಳಿಗೆ ಇರೋದು ಇದೊಂದೇ ದಾರಿ ಎಂದ ಭಾಮಾ

Share :

Published May 8, 2024 at 1:44pm

Update May 8, 2024 at 1:53pm

    4 ವರ್ಷದ ದಾಂಪತ್ಯ ಜೀವನ ಫುಲ್​ ಸ್ಟಾಪ್​ ಇಟ್ಟ ‘ರಾಗ’ ನಟಿ ಭಾಮಾ

    ಇನ್​ಸ್ಟಾಗ್ರಾಂನಲ್ಲಿ ಮಗುವಿನೊಂದಿಗಿನ ಫೋಟೋ ಹಂಚಿಕೊಂಡ ನಟಿ

    2020ರಲ್ಲಿ ಹಸೆಮಣೆ ಏರಿದ್ದ ಮಾಲಿವುಡ್​ ನಟಿಯ ದಾಂಪತ್ಯ ಜೀವನದಲ್ಲಿ ಏನಾಯ್ತು?

ಮಾಲಿವುಡ್​ ನಟಿ ಭಾಮಾ ಕುರುಪ್​ ದಾಂಪತ್ಯ ಜೀವನಕ್ಕೆ ಗುಡ್​ ಬೈ ಹೇಳಿದ್ದಾರೆ. ಯಶ್‌ ಅಭಿನಯದ ‘ಮೊದಲಾಸಲ’ ಸಿನಿಮಾದ ಮೂಲಕ ಕನ್ನಡ ಸಿನಿರಸಿಕರಿಗೆ ಪರಿಚಯವಾಗಿದ್ದ ಮುದ್ದು ಮುಖದ ಬೆಡಗಿ ತನ್ನ ಪತಿಯಿಂದ ದೂರವಾಗಿರುವುದನ್ನ ಖಚಿತಪಡಿಸಿದ್ದಾರೆ.

ಭಾಮಾ ಕುರುಪ್ ನಾಲ್ಕು ವರ್ಷದ ಹಿಂದೆ ಅರುಣ್​ ಜಗದೀಶ್​ ಎಂಬವರನ್ನು ವಿವಾಹವಾಗಿದ್ದರು. 2020ರಲ್ಲಿ ಹಸೆಮಣೆ ಏರುವ ಮೂಲಕ ಸಂತಸದ ಸುದ್ದಿಯನ್ನು ಫ್ಯಾನ್​ ಜೊತೆಗೆ ಹಂಚಿಕೊಂಡಿದ್ದರು. ಆದರೀಗ ಪತಿಯಿಂದ ದೂರವಾಗಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ.

View this post on Instagram

A post shared by Bhamaa (@bhamaa)

ಭಾಮಾ ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಮಗುವಿನೊಂದಿಗಿನ ಫೋಟೋ ಹಂಚಿಕೊಂಡಿದ್ದಾರೆ. “ನಾನು ಸಿಂಗಲ್‌ ಮದರ್‌ ಆಗುವವರೆಗೂ ನಾನು ಇಷ್ಟು ಬಲಶಾಲಿ ಎಂದು ನನಗೆ ತಿಳಿದಿರಲಿಲ್ಲ. ಬಲಶಾಲಿಯಾಗಿರುವುದು ನನಗೆ ಮತ್ತು ನನ್ನ ಮಗಳಿಗೆ ಇರುವ ಒಂದೇ ದಾರಿ” ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ಪತಿಯಿಂದ ದೂರ ಉಳಿದಿರುವ ಬಗ್ಗೆ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಈ ದೇಶದಲ್ಲಿದೆ ವಿಶ್ವದ ವೇಗದ ಇಂಟರ್​ನೆಟ್​! ಜಸ್ಟ್​ 1 ಸೆಕೆಂಡ್​ಗೆ ‘KGF ​2’ HD ಸಿನಿಮಾವನ್ನು 150 ಬಾರಿ ಡೌನ್​ಲೋಡ್​ ಮಾಡ್ಬೋದು!

ಗಣೇಶ್​​ ಜೊತೆಗೆ ಶೈಲೂ ಸಿನಿಮಾದಲ್ಲಿ ನಟಿ ಭಾಮಾ

ಭಾಮಾ ಮೊದಲಿಗೆ ಟಿವಿ ನಿರೂಪಕಿಯಾಗಿ ಬಳಿಕ ಸಿನಿಮಾ ನಟಿಯಾಗಿ ತೆರೆ ಮೇಲೆ ಬಂದವರು. ಸೂರ್ಯ ಟಿವಿಯಲ್ಲಿ ನಿರೂಪಕಿಯಾಗಿ ಮೊದಲು ಕಾಣಿಸಿಕೊಂಡರು. ಬಳಿಕ ಕ್ರಿಶ್ಚಿಯನ್​ ಭಕ್ತಿ ಆಲ್ಬಂನಲ್ಲಿ ಕಾಣಿಸಿಕೊಂಡರು. ಇದಾದ ಬಳಿಕ ನಿರ್ದೇಶಕ ಲೋಹಿತ್​ ದಾಸ್​ ಅವರ ‘ನಿವೇದ್ಯಂ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದರು.

ಭಾಮಾ ಕನ್ನಡದಲ್ಲೂ ಅನೇಕ ಸಿನಿಮಾದಲ್ಲಿ ನಟಿಸಿದ್ದಾರೆ. ಯಶ್​ ಜೊತೆಗೆ ‘ಮೊದಲಾಸಲ’, ಗಣೇಶ್​ ಜೊತೆಗೆ ‘ಶೈಲೂ’, ಮಿತ್ರ ಅವರ ಜೊತೆಗೆ ‘ರಾಗ’ ಸಿನಿಮಾದಲ್ಲೂ ನಟಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪತಿಯಿಂದ ದೂರವಾದ ‘ಶೈಲೂ’ ನಟಿ.. ನನಗೂ ನನ್ನ ಮಗಳಿಗೆ ಇರೋದು ಇದೊಂದೇ ದಾರಿ ಎಂದ ಭಾಮಾ

https://newsfirstlive.com/wp-content/uploads/2024/05/Bhama.jpg

Load More