Advertisment

ಮಣ್ಣಲ್ಲಿ ಮಣ್ಣಾದ ಉತ್ತರ ಕರ್ನಾಟಕದ ರಾಕ್ ಸ್ಟಾರ್.. ಲಕ್ಷಾಂತರ ಅಭಿಮಾನಿಗಳಿಂದ ನೋವಿನ ವಿದಾಯ

author-image
Veena Gangani
Updated On
ಮಣ್ಣಲ್ಲಿ ಮಣ್ಣಾದ ಉತ್ತರ ಕರ್ನಾಟಕದ ರಾಕ್ ಸ್ಟಾರ್.. ಲಕ್ಷಾಂತರ ಅಭಿಮಾನಿಗಳಿಂದ ನೋವಿನ ವಿದಾಯ
Advertisment
  • ಉತ್ತರ ಕರ್ನಾಟಕದ ಹೆಬ್ಬಾಗಿಲಿನ ರಾಕ್ ಸ್ಟಾರ್ ಖ್ಯಾತಿಯ ಹೋರಿ ಇನ್ನಿಲ್ಲ
  • ಅಖಾಡಕ್ಕೆ ಇಳಿದ್ರೆ ರಾಕ್ ಸ್ಟಾರ್ ಮಿಂಚಿನ ಓಟಕ್ಕೆ ಹಬ್ಬದ ಬಹುಮಾನ ಫಿಕ್ಸ್
  • ವಯೋ ಸಹಜ ಖಾಯಿಲೆಯಿಂದ ರಾಕ್ ಸ್ಟಾರ್ ಬದುಕಿನ ಪಯಣ ಅಂತ್ಯ

ಹಾವೇರಿ: ಈ ಹೋರಿ ಸಖತ್ ಫೇಮಸ್. ಹೋರಿ ಹಬ್ಬದ ಅಖಾಡಕ್ಕೆ ಹೋರಿ ಇಳಿದ್ರೆ. ಲಕ್ಷಾಂತರ ಅಭಿಮಾನಿಗಳಿಂದ ಶಿಳ್ಳೆ, ಕೇಕೆ ಗ್ಯಾರಂಟಿ. ಕಳೆದ ಒಂದು ವರ್ಷದಿಂದ ಅನಾರೋಗ್ಯಕ್ಕಿಡಾಗಿ ಕೊಬ್ಬರಿ ಹಬ್ಬದ ಹೋರಿ ಇಂದು ಬಾರದ ಲೋಕಕ್ಕೆ ಪಯಣ ಬೆಳೆಸಿದೆ. ಈ ಹೋರಿಯ ಲಕ್ಷಾಂತರ ಅಭಿಮಾನಿಗಳು ಕೊಬ್ಬರಿ ಹೋರಿಯನ್ನ ಕೊನೆಯದಾಗಿ ನೋಡಿ ಕಂಬನಿ ಮಿಡಿದಿದ್ದಾರೆ.

Advertisment

ಇದನ್ನೂ ಓದಿ:ಡಿವೈಡರ್​ಗೆ ಡಿಕ್ಕಿ ಹೊಡೆದು ಬುಗುರಿಯಂತೆ ತಿರುಗಿದ ಕಾರು; ಬೆಚ್ಚಿ ಬೀಳಿಸಿದ ಭಯಾನಕ ಅಪಘಾತ

ಹೌದು, ಉತ್ತರ ಕರ್ನಾಟಕದ ಹಾವೇರಿ ಜಿಲ್ಲೆ ಹೋರಿ ಹಬ್ಬಕ್ಕೆ ಹೆಸರುವಾಸಿ. ಹಾಗೆಯೇ ವಿಶೇಷ ಹೆಸರಿನ ಹೋರಿಗಳಿಗೆ ಅದರದ್ದೇ ಆದ ಅಭಿಮಾನಿ ಬಳಗವು ಹೊಂದಿದೆ. ಅದರಲ್ಲಿ ಒಂದಾದ ಹಾವೇರಿ ನಗರದ ನಾಗೇಂದ್ರನ ಮಟ್ಟಿಯಲ್ಲಿ ರಾಕ್ ಸ್ಟಾರ್ ಹೆಸರಿನ ಕೊಬ್ಬರಿ ಹೋರಿ ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿದೆ. ಈ ಹಿನ್ನಲೆ ಲಕ್ಷಾಂತರ ಅಭಿಮಾನಿಗಳು ಕಣ್ಣಿರಲ್ಲಿ ಕೈ ತೊಳೆಯುತ್ತಿದ್ದಾರೆ. ಅಲ್ಲದೇ ಹೋರಿ ಅಂತಿಮ ದರ್ಶನ ಪಡೆಯಲು ಅಭಿಮಾನಿಗಳು ಹರಿದು ಬರುತ್ತಿದ್ದಾರೆ. ಜೊತೆಗೆ ಹಾವೇರಿ ಜಿಲ್ಲೆ ಸೇರಿದಂತೆ ಹುಬ್ಬಳ್ಳಿ, ಶಿರಸಿ ಯಲ್ಲಾಪುರ, ಕಾರವಾರ, ಆಂದ್ರ, ತಮಿಳುನಾಡಿನಿಂದ ಅಭಿಮಾನಿಗಳು ರಾಕ್ ಸ್ಟಾರ್ ನ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡರು.

publive-image

ಹಾವೇರಿ ನಗರದ ನಾಗೆಂದ್ರ ಮಟ್ಟಿಯ ಮಾಲತೇಶ ಎಂಬ ರೈತಾಪಿ ವರ್ಗದ ಯುವಕ ಮನೆಗೆ ತಮಿಳುನಾಡಿನಿಂದ 16 ವರ್ಷಗಳ ಹಿಂದೆ ಅರವತ್ತು ಸಾವಿರಕ್ಕೆ ಖರೀದಿ ಮಾಡಿ ವ್ಯವಸಾಯಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದರು. ಮೊದ ಮೊದಲು ಬಕ್ಕ ಹೋರಿಯಾಗಿ ಹಬ್ಬ ಮಾಡಿದಾಗ ಐದು ಬೈಕ್​ಗಳನ್ನ ಬಹುಮಾನವಾಗಿ ಪಡೆದು ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿತ್ತು. ನಂತರ ಹಾವೇರಿಯ ಪೀಪಿ ಹೋರಿಯಾಗಿ ಬಂಗಾರ, ಬೆಳ್ಳಿ, ಫ್ರೀಜ್, ಟಿವಿಗಳನ್ನ ಬಹುಮಾನ ರೂಪದಲ್ಲಿ ಗಳಿಸಿತ್ತು. ಕಳೆದ 1 ವರ್ಷದ ಹಿಂದೆ ಅನಾರೋಗ್ಯಕ್ಕಿಡಾದ ರಾಕ್ ಸ್ಟಾರ್ ಹೇಸರಿನ ಹೋರಿಯನ್ನ ಸಾಕಷ್ಟು ಅರೈಕೆ ಮಾಡುತ್ತಲೆ ಬಂದ್ರು. ರಾಕ್ ಸ್ಟಾರ್​ಗೆ ಆರೋಗ್ಯ ಸರಿ ಇಲ್ಲ ಅಖಾಡಕ್ಕೆ ಬರ್ತಿಲ್ಲ ಎಂದು ತಿಳಿದ ರಾಕ್ ಸ್ಟಾರ್ ಅಭಿಮಾನಿಗಳು ನಿತ್ಯ ನೂರಾರು ಸಂಖ್ಯೆಯಲ್ಲಿ ಬಂದು ನೋಡಿಕೊಂಡು ಹೋಗುತ್ತಿದ್ದರು.

Advertisment

ಇದೀಗ ರಾಕ್ ಸ್ಟಾರ್ ಕೊನೆಯುಸಿರೆಳೆದಿದ್ದು, ಹೋರಿಯ ಲಕ್ಷಾಂತರ ಅಭಿಮಾನಿಗಳು ಅಂತ್ಯಕ್ರಿಯೆಯಲ್ಲಿ ಬಾಗಿಯಾಗಿ ಅಂತಿಮ ನಮನ ಸಲ್ಲಿಸಿದ್ರು. ಅಲ್ಲದೆ 16 ವರ್ಷಗಳಿಂದ ಸತತವಾಗಿ ಮನೆಮಗನಂತೆ ನೋಡಿಕೊಂಡು ಬಂದಿದ್ದ ನೆಚ್ಚಿನ ಹೋರಿ ಇದೀಗ ಪಾಲನೆ ಪೋಷಣೆ ಮಾಡಿದ್ರು. ಆದ್ರೆ, ದುರಾದೃಷ್ಟ ಅಂದ್ರೆ ಬದುಕುಳಿದಿಲ್ಲಾ ರಾಕ್ ಸ್ಟಾರ್. ಇನ್ನು ಲಕ್ಷಾಂತರ ಅಭಿಮಾನಿಗಳನ್ನ ಸಂಪಾದಿಸಿದ ಹೋರಿ ಇನ್ನಿಲ್ಲ ಎಂದು ರಾಕ್ ಸ್ಟಾರ್ ಮಾಲೀಕ ಕಣ್ಣಿರು ಹಾಕಿದ್ರು. ಒಟ್ಟಾರೆಯಾಗಿ ಲಕ್ಷಾಂತರ ಜನರ ಪ್ರೀತಿ ಪಡೆದ ರಾಕ್ ಸ್ಟಾರ್ ಹೆಸರಿನ ಹಾವೇರಿಯ ಕೊಬ್ಬರಿ ಹಬ್ಬದ ಕೊಬ್ಬಿದ ಹೋರಿಗೆ ಲಕ್ಷಾಂತರ ಅಭಿಮಾನಿಗಳು ಅಂತಿಮ ನಮನ ಸಲ್ಲಿಸಿದರು. ಇನ್ನು ಅಭಿಮಾನಿಗಳು ಹಾವೇರಿ ನಗರದಾದ್ಯಂತ ಮೆರವಣಿಗೆಯಲ್ಲಿ ಸಾಗಿ ರಾಕ್ ಸ್ಟಾರ್​ಗೆ ಗೌರವ ಸಲ್ಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment