/newsfirstlive-kannada/media/post_attachments/wp-content/uploads/2024/03/Hardik_Rohit_Dubey.jpg)
ಇತ್ತೀಚೆಗೆ ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ತಂಡ ಐತಿಹಾಸಿಕ ಗೆಲುವು ಸಾಧಿಸಿದೆ. ಹೈದರಾಬಾದ್ ನೀಡಿದ್ದ 278 ರನ್ ಬೃಹತ್ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 5 ಕಳೆದುಕೊಂಡು 246 ರನ್ ಗಳಿಸಿದ್ರೂ 31 ರನ್‌ಗಳಿಂದ ಹೀನಾಯ ಸೋಲು ಅನುಭವಿಸಿದೆ.
ಇನ್ನು, ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ಬ್ಯಾಕ್ ಟು ಬ್ಯಾಕ್ ಸೋಲು ಕಂಡಿದೆ. ಹಾಗಾಗಿ ಹಾರ್ದಿಕ್ ವಿರುದ್ಧ ಮಾಜಿ ಕ್ರಿಕೆಟರ್ಸ್ ಸೇರಿದಂತೆ ಮುಂಬೈ ಇಂಡಿಯನ್ಸ್ ಫ್ಯಾನ್ಸ್ ತಿರುಗಿ ಬಿದ್ದಿದ್ದಾರೆ. ಅಷ್ಟೇ ಅಲ್ಲ, ಮಾಜಿ ಕ್ಯಾಪ್ಟನ್ ರೋಹಿತ್ ಶರ್ಮಾ ಸಲಹೆ ಸ್ವೀಕರಿಸದೆ ತನಗೆ ಇಷ್ಟ ಬಂದ ಹಾಗೇ ನಿರ್ಧಾರ ತೆಗೆದುಕೊಂಡ ಹಾರ್ದಿಕ್ ನಡೆಯನ್ನು ವಿರೋಧಿಸುತ್ತಿದ್ದಾರೆ.
This pic deserves 120 reposts, Captain Rohit Sharma with best allrounder Shivam dube ??
HARDIK KA BAAP DUBE pic.twitter.com/GNfsmKCx6J
— ????? ?? (@RofiedAyush)
This pic deserves 120 reposts, Captain Rohit Sharma with best allrounder Shivam dube 🚩🔥
HARDIK KA BAAP DUBE pic.twitter.com/GNfsmKCx6J— ` (@RofiedAyush) March 28, 2024
">March 28, 2024
ಈ ಮಧ್ಯೆ ರೋಹಿತ್ ಶರ್ಮಾ ಅಭಿಮಾನಿ ಮಾಡಿರೋ ಟ್ವೀಟ್ವೊಂದು ವೈರಲ್ ಆಗಿದೆ. ಟೀಮ್ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ ಸ್ಟಾರ್ ಆಲ್ರೌಂಡರ್ ಶಿವಂ ದುಬೆ ಕೈ ಕಟ್ಟಿ ನಿಂತಿರೋ ಫೋಟೋ ಹಾಕಿ ಟ್ವೀಟ್ ಮಾಡಿದ್ದಾರೆ. ಹಾರ್ದಿಕ್ ಬಾಪ್ ದುಬೆ, ಅವರೇ ರೋಹಿತ್ ಮುಂದೆ ಕೈಕಟ್ಟಿ ನಿಂತಿದ್ದಾರೆ, ನೀನು ಇದನ್ನ ನೋಡಿ ಕಲಿ ಎಂದಿದ್ದಾರೆ.
ಕೊನೆಗೂ ರೋಹಿತ್ ಮಾತು ಕೇಳಿದ ಹಾರ್ದಿಕ್..!
ನಿನ್ನೆ ಏಡನ್ ಮರ್ಕ್ರಮ್ ಮತ್ತು ಹೆನ್ರಿಕ್ ಕ್ಲಾಸೆನ್ ಕೂಡ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದರು. ಹಾರ್ದಿಕ್ ಕ್ಯಾಪ್ಟನ್ಸಿಯಿಂದಲೇ ಹೀಗಾಗಿದೆ ಎನ್ನುವ ಮಾತುಗಳು ಕೇಳಿ ಬಂದಿದೆ. ಯಾರಿಗೂ ಬೌಲಿಂಗ್ ನೀಡಿದ್ರೂ ಹೇಗೆ ಫೀಲ್ಡ್ ಸೆಟ್ ಮಾಡಿದ್ರೂ ಹಾರ್ದಿಕ್ ಫೋರ್, ಸಿಕ್ಸರ್ಗಳನ್ನು ತಡೆಯಲು ಆಗಲಿಲ್ಲ. ಈ ಸಂದರ್ಭದಲ್ಲಿ ಏನು ಮಾಡಬೇಕು ಎಂದು ತೋಚದೆ ರೋಹಿತ್ ಮೊರೆ ಹೋಗಿದ್ದರು. ಮೊನ್ನೆ ರೋಹಿತ್ಗೆ ನೀನು ಹಿಂದೆ ಹೋಗು ಎಂದಿದ್ದ ಪಾಂಡ್ಯ ಇಂದು ಹಿಟ್ಮ್ಯಾನ್ ಮಾತು ಕೇಳಿದ್ರು. ರೋಹಿತ್ ಶರ್ಮಾನೇ ಕೊನೆಗೆ ಫೀಲ್ಡ್ ಸೆಟ್ ಮಾಡಿದ್ರು. ಹಿಟ್ಮ್ಯಾನ್ ಹೇಳಿದಂತೆ ಹಾರ್ದಿಕ್ ಬೌಂಡರಿ ಲೈನ್ಗೆ ಹೋದರು.
ಇದನ್ನೂ ಓದಿ: VIDEO: ಕೆಟ್ಟ ಮೇಲೆ ಬುದ್ಧಿ ಕಲಿತ ಪಾಂಡ್ಯ; ಕೊನೆಗೂ ರೋಹಿತ್ ಮಾತು ಕೇಳಿದ ಹಾರ್ದಿಕ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ