newsfirstkannada.com

ರೋಹಿತ್​ ಮುಂದೆ ಕೈಕಟ್ಟಿ ನಿಂತ ಶಿವಂ ದುಬೆ; ನೋಡಿ ಬುದ್ಧಿ ಕಲಿ ಎಂದು ಹಾರ್ದಿಕ್​ಗೆ ಫ್ಯಾನ್ಸ್​​ ತರಾಟೆ..!

Share :

Published March 28, 2024 at 5:40pm

  ಮುಂಬೈ ಇಂಡಿಯನ್ಸ್​ ಬೌಲರ್​ಗಳ ಬೆಂಡೆತ್ತಿದ ಹೈದರಾಬಾದ್​ ಬ್ಯಾಟರ್ಸ್​​

  ಕೆಟ್ಟ ಮೇಲೆ ಬುದ್ಧಿ ಕಲಿತ ಮುಂಬೈ ಇಂಡಿಯನ್ಸ್​​ ಹೊಸ ಕ್ಯಾಪ್ಟನ್​ ಪಾಂಡ್ಯ

  ಏನು ತೋಚದೆ ರೋಹಿತ್​ ಶರ್ಮಾ ಹೋದ ಹೊಸ ಕ್ಯಾಪ್ಟನ್​ ಹಾರ್ದಿಕ್​​!

ಇತ್ತೀಚೆಗೆ ರಾಜೀವ್ ಗಾಂಧಿ ಇಂಟರ್​ ನ್ಯಾಷನಲ್​​ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ಮುಂಬೈ ಇಂಡಿಯನ್ಸ್​​ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ತಂಡ ಐತಿಹಾಸಿಕ ಗೆಲುವು ಸಾಧಿಸಿದೆ. ಹೈದರಾಬಾದ್ ನೀಡಿದ್ದ 278 ರನ್‌ ಬೃಹತ್ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 5 ಕಳೆದುಕೊಂಡು 246 ರನ್‌ ಗಳಿಸಿದ್ರೂ 31 ರನ್‌ಗಳಿಂದ ಹೀನಾಯ ಸೋಲು ಅನುಭವಿಸಿದೆ.

ಇನ್ನು, ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ಬ್ಯಾಕ್​ ಟು ಬ್ಯಾಕ್​​ ಸೋಲು ಕಂಡಿದೆ. ಹಾಗಾಗಿ ಹಾರ್ದಿಕ್​ ವಿರುದ್ಧ ಮಾಜಿ ಕ್ರಿಕೆಟರ್ಸ್​ ಸೇರಿದಂತೆ ಮುಂಬೈ ಇಂಡಿಯನ್ಸ್​ ಫ್ಯಾನ್ಸ್​ ತಿರುಗಿ ಬಿದ್ದಿದ್ದಾರೆ. ಅಷ್ಟೇ ಅಲ್ಲ, ಮಾಜಿ ಕ್ಯಾಪ್ಟನ್​ ರೋಹಿತ್​ ಶರ್ಮಾ ಸಲಹೆ ಸ್ವೀಕರಿಸದೆ ತನಗೆ ಇಷ್ಟ ಬಂದ ಹಾಗೇ ನಿರ್ಧಾರ ತೆಗೆದುಕೊಂಡ ಹಾರ್ದಿಕ್​​​ ನಡೆಯನ್ನು ವಿರೋಧಿಸುತ್ತಿದ್ದಾರೆ.

ಈ ಮಧ್ಯೆ ರೋಹಿತ್​ ಶರ್ಮಾ ಅಭಿಮಾನಿ ಮಾಡಿರೋ ಟ್ವೀಟ್​ವೊಂದು ವೈರಲ್​ ಆಗಿದೆ. ಟೀಮ್​ ಇಂಡಿಯಾದ ಕ್ಯಾಪ್ಟನ್​​ ರೋಹಿತ್​ ಶರ್ಮಾ ಸ್ಟಾರ್​​ ಆಲ್​ರೌಂಡರ್​ ಶಿವಂ ದುಬೆ ಕೈ ಕಟ್ಟಿ ನಿಂತಿರೋ ಫೋಟೋ ಹಾಕಿ ಟ್ವೀಟ್​ ಮಾಡಿದ್ದಾರೆ. ಹಾರ್ದಿಕ್​​ ಬಾಪ್​​ ದುಬೆ, ಅವರೇ ರೋಹಿತ್​ ಮುಂದೆ ಕೈಕಟ್ಟಿ ನಿಂತಿದ್ದಾರೆ, ನೀನು ಇದನ್ನ ನೋಡಿ ಕಲಿ ಎಂದಿದ್ದಾರೆ.

ಕೊನೆಗೂ ರೋಹಿತ್​ ಮಾತು ಕೇಳಿದ ಹಾರ್ದಿಕ್​..!

ನಿನ್ನೆ ಏಡನ್​ ಮರ್ಕ್ರಮ್​​ ಮತ್ತು ಹೆನ್ರಿಕ್​ ಕ್ಲಾಸೆನ್​ ಕೂಡ ಭರ್ಜರಿ ಬ್ಯಾಟಿಂಗ್​ ಮಾಡುತ್ತಿದ್ದರು. ಹಾರ್ದಿಕ್​ ಕ್ಯಾಪ್ಟನ್ಸಿಯಿಂದಲೇ ಹೀಗಾಗಿದೆ ಎನ್ನುವ ಮಾತುಗಳು ಕೇಳಿ ಬಂದಿದೆ. ಯಾರಿಗೂ ಬೌಲಿಂಗ್​ ನೀಡಿದ್ರೂ ಹೇಗೆ ಫೀಲ್ಡ್​ ಸೆಟ್​ ಮಾಡಿದ್ರೂ ಹಾರ್ದಿಕ್​​​ ಫೋರ್​, ಸಿಕ್ಸರ್​​ಗಳನ್ನು ತಡೆಯಲು ಆಗಲಿಲ್ಲ. ಈ ಸಂದರ್ಭದಲ್ಲಿ ಏನು ಮಾಡಬೇಕು ಎಂದು ತೋಚದೆ ರೋಹಿತ್​ ಮೊರೆ ಹೋಗಿದ್ದರು. ಮೊನ್ನೆ ರೋಹಿತ್​ಗೆ ನೀನು ಹಿಂದೆ ಹೋಗು ಎಂದಿದ್ದ ಪಾಂಡ್ಯ ಇಂದು ಹಿಟ್​ಮ್ಯಾನ್​ ಮಾತು ಕೇಳಿದ್ರು. ರೋಹಿತ್​ ಶರ್ಮಾನೇ ಕೊನೆಗೆ ಫೀಲ್ಡ್​ ಸೆಟ್​ ಮಾಡಿದ್ರು. ಹಿಟ್​ಮ್ಯಾನ್​​ ಹೇಳಿದಂತೆ ಹಾರ್ದಿಕ್​ ಬೌಂಡರಿ ಲೈನ್​ಗೆ ಹೋದರು.

ಇದನ್ನೂ ಓದಿ: VIDEO: ಕೆಟ್ಟ ಮೇಲೆ ಬುದ್ಧಿ ಕಲಿತ ಪಾಂಡ್ಯ; ಕೊನೆಗೂ ರೋಹಿತ್​ ಮಾತು ಕೇಳಿದ ಹಾರ್ದಿಕ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೋಹಿತ್​ ಮುಂದೆ ಕೈಕಟ್ಟಿ ನಿಂತ ಶಿವಂ ದುಬೆ; ನೋಡಿ ಬುದ್ಧಿ ಕಲಿ ಎಂದು ಹಾರ್ದಿಕ್​ಗೆ ಫ್ಯಾನ್ಸ್​​ ತರಾಟೆ..!

https://newsfirstlive.com/wp-content/uploads/2024/03/Hardik_Rohit_Dubey.jpg

Load More