/newsfirstlive-kannada/media/post_attachments/wp-content/uploads/2024/04/Hardik_Rohit_IPL2.jpg)
ಇಂದು ಮುಂಬೈನ ವಾಂಖೆಡೆ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಇಂಡಿಯನ್ ಪ್ರೀಮಿಯರ್ ಲೀಗ್ ಹೈವೋಲ್ಟೇಜ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್, ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿ ಆಗಿವೆ.
ಸತತ 2 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದ್ದ ಮುಂಬೈ ಇಂಡಿಯನ್ಸ್ ಇಂದು ಹೇಗಾದ್ರೂ ಮಾಡಿ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದಿದೆ. ಇನ್ನೊಂದೆಡೆ 3ನೇ ಪಂದ್ಯದಲ್ಲೂ ತನ್ನ ಗೆಲುವಿನ ನಾಗಲೋಟ ಮುಂದುವರಿಸಲು ರಾಜಸ್ತಾನ್ ಮುಂದಾಗಿದೆ. ಈ ಮಧ್ಯೆ ಟಾಸ್ ವೇಳೆ ಮತ್ತೆ ಹಾರ್ದಿಕ್ ಪಾಂಡ್ಯಗೆ ರೋಹಿತ್ ಶರ್ಮಾ ಫ್ಯಾನ್ಸ್ ಅವಮಾನ ಮಾಡಿದ್ದಾರೆ.
Sanjay Manjrekar asking Wankhede crowd to behave. pic.twitter.com/rxLRSO33yN
— Mufaddal Vohra (@mufaddal_vohra)
Sanjay Manjrekar asking Wankhede crowd to behave. pic.twitter.com/rxLRSO33yN
— Mufaddal Vohra (@mufaddal_vohra) April 1, 2024
">April 1, 2024
ಹೌದು, ಟಾಸ್ಗಾಗಿ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ, ರಾಜಸ್ತಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಬಂದರು. ಈ ಸಂದರ್ಭದಲ್ಲಿ ಹಾರ್ದಿಕ್ ಮುಂದೆ ಇಡೀ ವಾಂಖೆಡೆ ಸ್ಟೇಡಿಯಮ್ನಲ್ಲಿ ರೋಹಿತ್ ಅಭಿಮಾನಿಗಳು ರೋಹಿತ್.. ರೋಹಿತ್ ಎಂದು ಕೂಗಿದರು. ಇದರಿಂದ ಸಿಟ್ಟಿಗೆದ್ದ ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಸಂಜಯ್ ಮಂಜ್ರೇಕರ್ ಫ್ಯಾನ್ಸ್ಗೆ ಬಿಹೇವ್ ಯುವರ್ ಸೆಲ್ಫ್ ಎಂದು ಆಕ್ರೋಶ ಹೊರಹಾಕಿದ್ರು. ಇದಕ್ಕೆ ಹಾರ್ದಿಕ್ ಸ್ಮೈಲ್ ಕೊಟ್ಟು ಸುಮ್ಮನಾದ್ರು.
ಇದನ್ನೂ ಓದಿ: ಮುಂಬೈ ಇಂಡಿಯನ್ಸ್ ಫಸ್ಟ್ ಬ್ಯಾಟಿಂಗ್.. ಹಾರ್ದಿಕ್ ಪಾಂಡ್ಯಗೆ ಕೈಕೊಟ್ಟ ಸ್ಟಾರ್ ಪ್ಲೇಯರ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ