/newsfirstlive-kannada/media/post_attachments/wp-content/uploads/2024/08/Rohit-Roy-Fitness.jpg)
ತಿರುವನಂತಪುರ: ಆಯುರ್ವೇದದಲ್ಲಿ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಇದೆ. ಅದು ಪವಾಡದಂತೆ ಒಮ್ಮೊಮ್ಮೆ ನಡೆದು ಹೋಗುತ್ತದೆ. ಶತಮಾನಗಳಿಂದಲೂ ಭಾರತ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಆಯುರ್ವೇದದೊಂದಿಗೆ ತನ್ನ ಬೆಸುಗೆಯನ್ನು ಹೊಂದಿದೆ. ಮನೆಯಲ್ಲಿ ಅಡುಗೆ ಒಗ್ಗರಣೆ ಹಾಕುವ ಪದಾರ್ಥದಿಂದ ಹಿಡಿದು ಉಪವಾಸ ಮಾಡುವಾಗ ಸೇವಿಸುವ ಆಹಾರದವರೆಗೂ ಆಯುರ್ವೇದದ ಔಷಧಿಗಳು ಇವೆ. ಈಗ ಆಯುರ್ವೇದದ ಚರ್ಚೆ ಮತ್ತಷ್ಟು ಮುನ್ನೆಲೆಗೆ ಬಂದಿದೆ.
/newsfirstlive-kannada/media/post_attachments/wp-content/uploads/2024/08/PANCHAKARMA.jpg)
ಕಾರಣ ಕಳೆದ ಕೆಲವು ದಿನಗಳ ಹಿಂದಷ್ಟೇ ವಿನೇಶ್ ಪೋಗಟ್ ಅವರ ತೂಕ ಇಳಿಕೆಯ ವಿಚಾರ ದೊಡ್ಡದಾಗಿ ಸುದ್ದಿಯಾಗಿತ್ತು. ತೂಕ ಇಳಿಸುವುದು ಅಷ್ಟು ಸರಳವಲ್ಲ ಅನ್ನೋದು ಗೊತ್ತಾಗಿತ್ತು. ಆದ್ರೆ ಬಾಲಿವುಡ್ ಚಿತ್ರಗಳ ನಟ ಮತ್ತು ಹಿಂದಿ ಸೀರಿಯಲ್ ನಟ ಕೇವಲ 14 ದಿನಗಳಲ್ಲಿ ಆಯುರ್ವೇದಿಕ ಚಿಕಿತ್ಸೆಯಿಂದ 6 kG ತೂಕವನ್ನು ಇಳಿಸಿಕೊಂಡಿದ್ದಾರೆ.
/newsfirstlive-kannada/media/post_attachments/wp-content/uploads/2024/08/Rohit-Roy-Fitness-1.jpg)
ರೋಹಿತ್ ಬೋಸ್ ರಾಯ್ 2021ರಿಂದಲೂ ತಮ್ಮ ತೂಕ ಇಳಿಕೆಗಾಗಿ ಹಲವಾರು ದಾರಿಗಳನ್ನು ಹುಡುಕಿದ್ದರು. ಆದ್ರೆ ಯಾವುದೂ ಕೂಡ ಅವರಿಗೆ ಫಲಿತಾಂಶ ನೀಡಲಿಲ್ಲ, ಕೊನೆಗೆ ಅವರು ಕೇರಳಕ್ಕೆ ತಮ್ಮ ಪ್ರಯಾಣ ಬೆಳೆಸಿದರು. ಅಲ್ಲಿ ಪಂಚಕರ್ಮ ಚಿಕಿತ್ಸೆಗೆಂದು ಹೋದರು. ಅವರೇ ಖುದ್ದಾಗಿ ಹೇಳಿರುವ ಪ್ರಕಾರ ಅವರು ಕೇರಳಕ್ಕೆ ಹೋಗುವಾಗ ಹಲವು ಜೀರ್ಣಕ್ರಿಯೆ ಸಮಸ್ಯೆಯಿಂದ ಬಳಲುತ್ತಿದ್ದೆ. ಬರುವಾಗ ಒಬ್ಬ ಅಪ್ಪಟ ಮನುಷ್ಯನಾಗಿ ಹೊರಬಂದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಫಸ್ಟ್ ನೈಟ್‌ಗೆ ಹೋಗೋ ಮುನ್ನ ಇದನ್ನು ತಿನ್ನಲೇಬೇಕು; ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!
ಅದು ಮಾತ್ರವಲ್ಲ, ಪಂಚಕರ್ಮ ಚಿಕಿತ್ಸೆ ನನಗೊಂದು ಆಚರಣೆಯಂತೆಯೇ ಆಗಿದೆ. ವರ್ಷಕ್ಕೆ ಎರಡು ಬಾರಿ ನಾನು ಕೇರಳಕ್ಕೆ ಹೋಗಿ ಪಂಚಕರ್ಮ ಚಿಕಿತ್ಸೆ ಪಡೆದುಕೊಂಡು ಬರುತ್ತೇನೆ ಎಂದು ಕೂಡ ಇತ್ತೀಚೆಗೆ ನಡೆದ ಒಂದು ಸಂದರ್ಶನದಲ್ಲಿ ರೋಹಿತ್ ಬೋಸ್ರಾಯ್ ಹೇಳಿದ್ದಾರೆ.
ಇಷ್ಟೊಂದು ಉಪಯೋಗವಿರುವ ಈ ಪಂಚಕರ್ಮ ಚಿಕಿತ್ಸೆ ಎಂದರೇನು? ಏನೆಲ್ಲಾ ಪ್ರಕ್ರಿಯೆಗಳು ಈ ಪಂಚಕರ್ಮ ಚಿಕಿತ್ಸೆಯಲ್ಲಿರುತ್ತವೆ. ಪಂಚಕರ್ಮ ಚಿಕಿತ್ಸೆಯೆಂದರೆ ಇಡೀ ದೇಹದ ಆರೋಗ್ಯದ ಶುದ್ಧೀಕರಣ. ಇದು ಆಯುರ್ವೇದ ಪರಿಣಿತರೊಂದಿಗೆ ಸಮಾಲೋಚನೆಯ ಮೂಲಕ ಆರಂಭವಾಗುತ್ತದೆ. ದೇಹದ ಆರೋಗ್ಯದಲ್ಲಾಗಿರುವ ವಿಕೃತಿಯನ್ನು ಪ್ರಕೃತಿಯನ್ನಾಗಿ ಮಾರ್ಪಡಿಸುವ ಪ್ರಕ್ರಿಯೆಯೇ ಈ ಪಂಚಕರ್ಮ ಚಿಕಿತ್ಸೆ ಅದರಲ್ಲಿ ಒಟ್ಟು ಐದು ಬಗೆಯ ಚಿಕಿತ್ಸೆಗಳಿವೆ.
/newsfirstlive-kannada/media/post_attachments/wp-content/uploads/2024/08/PANCHAKARMA-VIRECHANA-1.jpg)
1. ವಾಮನ: ಇದು ಕಫವನ್ನು ಹೊರತೆಗೆಯಲು ವಾಂತಿ ಉಂಟು ಮಾಡುತ್ತದೆ. ಈ ಚಿಕಿತ್ಸೆಯ ತೆಗೆದುಕೊಳ್ಳುವದರಿಂದ ವಾಂತಿಯ ಮೂಲಕ ದೇಹದಲ್ಲಿರುವ ಕಫ ಆಚೆ ಬರುತ್ತದೆ. ಇದರ ಪ್ರಯೋಜನಗಳು ಅಂದ್ರೆ ಕಫವನ್ನು ಸಂಪೂರ್ಣವಾಗಿ ದೇಹದಿಂದ ಆಚೆ ತೆಗೆಯುತ್ತದೆ. ಶ್ವಾಸಕೋಶದ ಕಾರ್ಯ ಕ್ಷಮತೆಯನ್ನು ಹೆಚ್ಚಿಸುತ್ತದೆ, ಚಯಾಪಚಯ ಕ್ರಿಯೆಯ ಕ್ಷಮೆಯನ್ನು ಕೂಡ ಸುಧಾರಿಸುತ್ತದೆ.
/newsfirstlive-kannada/media/post_attachments/wp-content/uploads/2024/08/PANCHAKARMA-VIRECHANA.jpg)
2. ವಿರೇಚನ: ಈ ಒಂದು ಚಿಕಿತ್ಸೆಯನ್ನು ದೇಹದಲ್ಲಿರುವ ಪಿತ್ತ ನಾಶಕ್ಕಾಗಿ ನೀಡಲಾಗುತ್ತದೆ. ಇದರಿಂದ ಪಿತ್ತಕೋಶ ಹಾಗೂ ಯಕೃತ್ತ (ಲೀವರ್) ನಿರ್ವಹಿಸುವ ಕಾರ್ಯ ಕ್ಷಮತೆಯನ್ನು ಸುಧಾರಿಸುತ್ತದೆ ಮತ್ತು ಅವುಗಳಿಗೆ ಶಕ್ತಿ ನೀಡುತ್ತದೆ.
/newsfirstlive-kannada/media/post_attachments/wp-content/uploads/2024/08/PANCHAKARMA-BASTI.jpg)
3 ಬಸ್ತಿ: ದೇಹದಲ್ಲಿರುವ ತ್ಯಾಜ್ಯವನ್ನು ತೆಗೆದು ಹಾಕುತ್ತದೆ. ಸಂಪೂರ್ಣ ದೇಹದ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ.
/newsfirstlive-kannada/media/post_attachments/wp-content/uploads/2024/08/PANCHAKARMA-NASYA.jpg)
4. ನಸ್ಯಾ: ಇದು ದೇಹಕ್ಕೆ ಎಣ್ಣೆ ಅಥವಾ ಪುಡಿಯನ್ನು ಮೂಗಿನ ರಂಧ್ರದ ಮೂಲಕ ನೀಡಿ, ಮೂಗು, ತಲೆ ಹಾಗೂ ಗಂಟಲು ಭಾಗಗಳನ್ನು ಶುದ್ಧಗೊಳಿಸಲಾಗುತ್ತದೆ. ಇದು ಉಸಿರಾಟದ ಪ್ರಕ್ರಿಯೆಯನ್ನು ಸುಲಭಗೊಳಿಸಿ, ಮಾನಸಿಕ ನೆಮ್ಮದಿ ಹಾಗೂ ಹಾರ್ಮೋನುಗಳ ಸಮತೋಲನವನ್ನು ಕಾಯುತ್ತದೆ.
ಇದನ್ನೂ ಓದಿ:ಅಬ್ಬಬ್ಬಾ.. 542 ಕೆಜಿ ತೂಕ ಇದ್ದ ದಡೂತಿ ದೇಹ ಇಷ್ಟು ಕಡಿಮೆ ಆಯ್ತಾ? ಈತನ ಭಾರ ಇಳಿಸಿದ ದೊರೆ ಯಾರು?
5 ರಕ್ತಮೋಕ್ಷನ: ಒಂದಿಷ್ಟು ರಕ್ತವನ್ನು ಆಚೆ ತೆಗೆಯುವುದರ ಮೂಲಕ ರಕ್ತಶುದ್ಧೀಕರಣ ಕಾರ್ಯ ಇಲ್ಲಿ ನಡೆಯುತ್ತದೆ. ರಕ್ತಕ್ಕೆ ಸಂಬಂಧಿಸಿದ ಕಾಯಿಲೆಗಳು ಇದರಿಂದ ದೂರವಾಗುತ್ತವೆ. ರಕ್ತದಲ್ಲಿರುವ ಟಾಕ್ಸಿನ್ಸ್​ ನಿರ್ಮೂಲಗೊಳ್ಳುತ್ತವೆ. ಇದು ರಕ್ತವನ್ನು ಶುದ್ಧ ಮಾಡುವುದರ ಜೊತೆಗೆ, ಊರಿಯೂತವನ್ನು ಕೂಡ ಕಡಿಮೆ ಮಾಡುತ್ತದೆ. ಪಿತ್ತದ ಸಮತೋಲನವನ್ನು ಕಾಯುತ್ತದೆ.
ಆಯುರ್ವೇದದ ಪಂಚಕರ್ಮ ಚಿಕಿತ್ಸೆಯಿಂದಾಗಿ ಕೇವಲ ದೇಹದ ತೂಕ ಮಾತ್ರ ಇಳಿಯುವುದಿಲ್ಲ. ಅನೇಕ ಆರೋಗ್ಯಕ್ಕೆ ಸಂಬಂಧಿಸಿದ ಲಾಭಗಳು ಇವೆ. ಸತತ 14 ದಿನಗಳ ಕಾಲ ಹನಿ ನೀರು ಕುಡಿಯದೇ ರೋಹಿತ್ ಬೋಸ್ ರಾಯ್ ತನ್ನ ತೂಕ ಇಳಿಸಿಕೊಂಡು ಸಖತ್ ಫಿಟ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us