ಕೊಹ್ಲಿ ಅಲ್ಲವೇ ಅಲ್ಲ.. ಭಾರತದ ಈ ಓಪನರ್​ ಎಂದರೆ ಬಾಂಗ್ಲಾ ಪ್ಲೇಯರ್ಸ್​ಗೆ ನಿಂತಲ್ಲೇ ನಡುಕ!

author-image
Bheemappa
Updated On
ಕೊಹ್ಲಿ ಅಲ್ಲವೇ ಅಲ್ಲ.. ಭಾರತದ ಈ ಓಪನರ್​ ಎಂದರೆ ಬಾಂಗ್ಲಾ ಪ್ಲೇಯರ್ಸ್​ಗೆ ನಿಂತಲ್ಲೇ ನಡುಕ!
Advertisment
  • ಈ ಪ್ಲೇಯರ್ ಅನ್ನು ಕಟ್ಟಿ ಹಾಕೋದು ಬಾಂಗ್ಲಾಗೆ ಚಾಲೆಂಜ್​
  • ನೀರು ಕುಡಿದಷ್ಟೇ ಸುಲಭವಾಗಿ ಬೌಂಡರಿ, ಸಿಕ್ಸರ್ಸ್​ ಸಿಡಿಸ್ತಾರೆ
  • ಚಾಂಪಿಯನ್​ಶಿಪ್​ನಲ್ಲಿ ಹೆಚ್ಚು ಶತಕ ಸಿಡಿಸಿದ ಬ್ಯಾಟ್ಸ್​​ಮನ್

ವಿರಾಟ್​ ಕೊಹ್ಲಿ ಅಲ್ಲ, ಟೀಮ್​ ಇಂಡಿಯಾ ವಿರುದ್ಧದ ಟೆಸ್ಟ್​ ಸರಣಿಗೂ ಮುನ್ನ ಬಾಂಗ್ಲಾ ಶುರುವಾಗಿರೋದು ರೋಹಿತ್​ ಶರ್ಮಾ ಟೆನ್ಶನ್​. ರೆಸ್ಟ್​ ಮುಗಿಸಿ ಫೀಲ್ಡ್​ಗೆ ವಾಪಾಸ್ಸಾಗಿರೋ ಇಂಡಿಯನ್ ಕ್ಯಾಪ್ಟನ್​, ಚೆಪಾಕ್​ ಅಂಗಳದಲ್ಲಿ ಘರ್ಜಿಸಿದ್ದಾರೆ. ಈ ಘರ್ಜನೆ ಬಾಂಗ್ಲಾ ಟೈಗರ್ಸ್​​ ಕ್ಯಾಂಪ್​​ನಲ್ಲಿ ನಡುಕ ಹುಟ್ಟಿಸಿದೆ. ನೆಟ್ಸ್​ನಲ್ಲೇ ಆರ್ಭಟಿಸಿದ್ದಕ್ಕೆ ಮಾತ್ರವಲ್ಲ, ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ ಟೂರ್ನಿಯಲ್ಲಿ ರೋಹಿತ್,​​ ರಣಾರ್ಭಟದ ಇತಿಹಾಸವನ್ನ ನೋಡಿ ಬಾಂಗ್ಲಾ ಬೆಚ್ಚಿ ಬಿದ್ದಿದೆ.

ಇಂಡೋ -ಬಾಂಗ್ಲಾ ಟೆಸ್ಟ್​ ಸರಣಿಗೆ ಜಸ್ಟ್​ 4 ದಿನೇ ಬಾಕಿ. ಲಂಕಾ ಪ್ರವಾಸದ ಬಳಿಕ ಸುದೀರ್ಘ ವಿಶ್ರಾಂತಿ ಜಾರಿದ್ದ ಇಂಡಿಯನ್ಸ್​ ಮತ್ತೆ​ ಮೈದಾನಕ್ಕಿಳಿಯಲು ಸಜ್ಜಾಗಿದೆ. ಚೆನ್ನೈನ ಚೆಪಾಕ್​ ಅಂಗಳದಲ್ಲಿ ಕಳೆದ 2 ದಿನಗಳಿಂದ ಟೀಮ್​ ಇಂಡಿಯನ್ಸ್​​ ಭರ್ಜರಿ ಸಮರಾಭ್ಯಾಸ ನಡೆಸ್ತಿದ್ದಾರೆ. ವಿಶೇಷವಾಗಿ ಇಂಡಿಯನ್​​ ಕ್ಯಾಪ್ಟನ್​ ರೋಹಿತ್​ ಶರ್ಮಾ ಅಭ್ಯಾಸದ ಕಣದಲ್ಲೇ ಆರ್ಭಟಿಸ್ತಾ ಇದ್ದು, ನೆಟ್ಸ್​ನಿಂದಲೇ ಬಾಂಗ್ಲಾ ಟೈಗರ್ಸ್​​ಗೆ ವಾರ್ನಿಂಗ್​ ಕೊಟ್ಟಿದ್ದಾರೆ. ಪ್ರಾಕ್ಟಿಸ್​​ ಸೆಷನ್​ನಲ್ಲಿ ಸ್ಪಿನ್ನರ್ಸ್​​, ಪೇಸರ್ಸ್​ ಎಲ್ಲರ ಮೇಲೆ ದಂಡೆತ್ತಿ ಹೋಗಿ ರೋಹಿತ್​ ರಣಾರ್ಭಟ ನಡೆಸಿದ್ದಾರೆ.

ಇದನ್ನೂ ಓದಿ:ಕೊಹ್ಲಿ ಸೀಕ್ರೆಟ್​ ರಿವೀಲ್ ಮಾಡಿದ ಮಾಜಿ ಕ್ರಿಕೆಟರ್.. ವಿರಾಟ್ ಫ್ಲೈಟ್​​ನಲ್ಲಿ ಏನ್ ಮಾಡ್ತಿದ್ರು?

publive-image

ಹಿಟ್​​​ಮ್ಯಾನ್​ ರಣಾರ್ಭಟ, ಬಾಂಗ್ಲಾಗೆ ಢವ.. ಢವ.!

ಸದ್ಯ ಬಾಂಗ್ಲಾ ಟೈಗರ್ಸ್​​ ಬೇಟೆಗೆ ಭರ್ಜರಿಯಾಗಿ ಸಜ್ಜಾಗಿರೋ ರೋಹಿತ್​, ವಿಶ್ವ ಟೆಸ್ಟ್​ ಚಾಂಪಿಯನ್ ಶಿಪ್​ ಟೂರ್ನಿಯಲ್ಲಿ ದರ್ಬಾರ್​ ನಡೆಸಿದ್ದಾರೆ. ಹಿಟ್​ಮ್ಯಾನ್​ ಅಬ್ಬರದ ಆಟದ ಮುಂದೆ ಬೌಲರ್​ಗಳು ಥಂಡಾ ಹೊಡೆದಿದ್ದಾರೆ. 2019ರಿಂದ ಈವರೆಗೆ ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ನಲ್ಲಿ ಕನ್ಸಿಸ್ಟೆಂಟ್​ ಆಗಿ ಧಮಾಕ ಸೃಷ್ಟಿಸಿರೋ ಭಾರತದ ಏಕೈಕ ಬ್ಯಾಟ್ಸ್​ಮನ್​ ರೋಹಿತ್​. ಒಂದೇ ಮಾತಲ್ಲಿ ಹೇಳಬೇಕಂದ್ರೆ, WTC ಟೂರ್ನಿಗೆ ಮುಂಬೈಕರ್​ ಮಹಾರಾಜ.

2019ರಿಂದ ಆರಂಭವಾಗಿರೋ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಟೂರ್ನಿಯಲ್ಲಿ ರೋಹಿತ್ ಆಡಿರೋದು 54 ಇನ್ನಿಂಗ್ಸ್​​ಗಳನ್ನ. ಈ ಇನ್ನಿಂಗ್ಸ್​ಗಳಲ್ಲಿ ಕನ್ಸಿಸ್ಟೆಂಟ್​ ಪರ್ಫಾಮೆನ್ಸ್​ ನೀಡಿರೋ ಹಿಟ್​​ಮ್ಯಾನ್​​ 50.03ರ ಸರಾಸರಿಯಲ್ಲಿ ರನ್​ಗಳಿಸಿದ್ದಾರೆ. ಒಟ್ಟು 2,552 ರನ್​ಗಳಿಸಿದ್ದು, ಭಾರತದ ಬೇರ್ಯಾವ ಬ್ಯಾಟ್ಸ್​ಮನ್​ ಕೂಡ ಈ ಸಾಧನೆ ಮಾಡಿಲ್ಲ.

ಟೆಸ್ಟ್​ ಚಾಂಪಿಯನ್​ಶಿಪ್​ನ ಶತಕದ ಸರದಾರ

ರನ್​ಗಳಿಕೆ ಮಾತ್ರವಲ್ಲ, ಸೆಂಚುರಿ ಸಿಡಿಸೋದ್ರಲ್ಲೂ ರೋಹಿತ್ ಟಾಪರ್​​. ಆಡಿದ 54 ಇನ್ನಿಂಗ್ಸ್​ಗಳಲ್ಲಿ ಹಿಟ್​ಮ್ಯಾನ್​ 9 ಸೆಂಚುರಿ ಸಿಡಿಸಿದ್ದಾರೆ. ಈ ಮೂಲಕ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಹೆಚ್ಚು ಶತಕ ಸಿಡಿಸಿದ ಭಾರತೀಯ ಬ್ಯಾಟ್ಸ್​​ಮನ್​ ಎನಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ, 7 ಬಾರಿ ಹಾಫ್​ ಸೆಂಚುರಿ ಗಡಿಯನ್ನೂ ದಾಟಿದ್ದಾರೆ.

ಬೌಂಡರಿ-ಸಿಕ್ಸರ್​ ಸಿಡಿಸೋದ್ರಲ್ಲೂ ದಾಖಲೆ

ಹಿಟ್​ಮ್ಯಾನ್​ ಎಂಬ ಹೆಸರಿಗೆ ತಕ್ಕಂತೆ ಟೆಸ್ಟ್​​ ಫಾರ್ಮೆಟ್​ನಲ್ಲೂ ಅಗ್ರೆಸ್ಸಿವ್​ ಆಟವಾಡಿ ರೋಹಿತ್​ ಮಿಂಚಿದ್ದಾರೆ. ನೀರು ಕುಡಿದಷ್ಟು ಸುಲಭಕ್ಕೆ ಬೌಂಡರಿ, ಸಿಕ್ಸರ್​​ಗಳನ್ನ ಚಚ್ಚಿದ್ದಾರೆ. 52 ಸಿಕ್ಸರ್, 260 ಬೌಂಡರಿ ಸಿಡಿಸಿ​​​​ WTC ಟೂರ್ನಿಯಲ್ಲಿ ಅತಿ ಹೆಚ್ಚು ಬೌಂಡರಿ, ಸಿಕ್ಸರ್​ ಬಾರಿಸಿದ ಭಾರತದ ಬ್ಯಾಟ್ಸ್​ಮನ್​ ಅನಿಸಿದ್ದಾರೆ.

ಇದನ್ನೂ ಓದಿ: ದುಲೀಪ್ ಟ್ರೋಫಿಯಲ್ಲಿ ಈಶ್ವರನ್ ಸಿಡಿಲಬ್ಬರದ ಬ್ಯಾಟಿಂಗ್.. ಕ್ಯಾಪ್ಟನ್ ಅಭಿಮನ್ಯು ಸೆಂಚುರಿ

publive-image

ಒಟ್ಟಾರೆ ಮಾತ್ರವಲ್ಲ.. ಈ ಸೀಸನ್​ನ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಟೂರ್ನಿಯಲ್ಲೂ ರೋಹಿತ್​ ಶರ್ಮಾ ರೆಡ್ ​ಹಾಟ್​​ ಫಾರ್ಮ್​ನಲ್ಲಿ ಬ್ಯಾಟ್​ ಬೀಸಿದ್ದಾರೆ. ಆಡಿದ 16 ಇನ್ನಿಂಗ್ಸ್​ಗಳಲ್ಲೇ, 46.66ರ ಸರಾಸರಿಯಲ್ಲಿ 700 ರನ್​ ಚಚ್ಚಿದ್ದು, 3 ಸೆಂಚುರಿ, 3 ಹಾಫ್​ ಸೆಂಚುರಿಗಳಿಸಿದ್ದಾರೆ.

ವಿಶ್ವ ಟೆಸ್ಟ್​ ಚಾಂಪಿಯನ್​​ ಶಿಪ್​​ನಲ್ಲಿ ಅದ್ಭುತ ರೆಕಾರ್ಡ್ಸ್​​ ಹೊಂದಿರೋ ರೋಹಿತ್​, ಬಾಂಗ್ಲಾ ಟೆಸ್ಟ್​ ಸರಣಿಗೆ ಭರ್ಜರಿ ಸಿದ್ಧತೆಯನ್ನೂ ನಡೆಸಿದ್ದಾರೆ. ಶ್ರೀಲಂಕಾ ಪ್ರವಾಸದ ಬಳಿಕ ಟೀಮ್​ ಇಂಡಿಯಾದ ಉಳಿದ ಆಟಗಾರರು ಕಂಪ್ಲೀಟ್​ ವಿಶ್ರಾಂತಿಗೆ ಜಾರಿದ್ರೆ, ರೋಹಿತ್​ ಫಿಟ್​ನೆಸ್​ ಕಡೆಗೆ ಹೆಚ್ಚು ಫೋಕಸ್​ ಮಾಡಿದ್ರು. ಇದೀಗ ನೆಟ್ಸ್​​ನಲ್ಲೂ ಘರ್ಜಿಸಿ ಭರ್ಜರಿ ಶಸ್ತ್ರಾಭ್ಯಾಸದೊಂದಿಗೆ ಯುದ್ಧಕ್ಕೆ ಸಜ್ಜಾಗಿದ್ದಾರೆ. ಇಂತಾ ರೋಹಿತ್​ನ ಕಟ್ಟಿ ಹಾಕೋದು ಬಾಂಗ್ಲಾ ಪಡೆಗೆ ನಿಜಕ್ಕೂ ಸವಾಲಾಗಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment