Advertisment

T20 ವಿಶ್ವಕಪ್​ ಗೆಲುವಿನ ಮಾಸ್ಟರ್ ಮೈಂಡ್​ಗಳು.. ಕೊಹ್ಲಿರನ್ನ ಓಪನಿಂಗ್ ಆಡಿಸಿ ಟ್ರೋಫಿ ಗೆದ್ದೇ ಬಿಟ್ರು!

author-image
Bheemappa
Updated On
ವಿರಾಟ್​​ ಬ್ಯಾಟಿಂಗ್​ ವೈಫಲ್ಯಕ್ಕೆ ಕಾರಣವೇನು.. ಕೊಹ್ಲಿ ಬಗ್ಗೆ ಮಾಜಿ ಕ್ರಿಕೆಟರ್​ ಶಾಕಿಂಗ್ ಹೇಳಿಕೆ!
Advertisment
  • ಟೂರ್ನಿ ಗೆಲುವಿಗಾಗಿ ಮಾಡಿದ ಕೆಲಸ ಕಾರ್ಯ ಒಂದೆರೆಡಲ್ಲ
  • ಭಾರತ ತಂಡ ಸೋತಾಗ ಅನುಭವಿಸಿದ ಟೀಕೆಗಳು ಲೆಕ್ಕವಿಲ್ಲ
  • ಚೋಕರ್ಸ್​ ಹಣೆಪಟ್ಟಿ ಕಳಚಿ ಚಾಂಪಿಯನ್​ ಪಟ್ಟಕ್ಕೆ ಏರಿದೆ

ವಿಶ್ವ ಚಾಂಪಿಯನ್ ಆಗಿ ಟೀಮ್ ಇಂಡಿಯಾ ಮೆರೆದಾಡ್ತಿದೆ. ಆದ್ರೆ, ಇದೇ ಟೀಮ್ ಇಂಡಿಯಾ ಸತತ 13 ವರ್ಷಗಳ ಕಾಲ ಐಸಿಸಿ ಟೂರ್ನಿಗಳಲ್ಲಿ ಮುಖಭಂಗ ಅನುಭವಿಸಿದ್ದೇ ಹೆಚ್ಚು. ಇದೇ ಕಾರಣಕ್ಕೆ ವಿಶ್ವ ಕ್ರಿಕೆಟ್​ನ ನ್ಯೂ ಚೋಕರ್ಸ್​ ಎನಿಸಿಕೊಂಡ ಇಂಡಿಯಾ, ಇದೀಗ ಚೋಕರ್ಸ್​ ಹಣೆಪಟ್ಟಿ ಕಳಚಿ ಚಾಂಪಿಯನ್​ ಪಟ್ಟಕ್ಕೇರಿದೆ. ಇದರ ಹಿಂದಿನ ಸೂತ್ರದಾರಿಗಳು ದ್ರಾವಿಡ್​ & ರೋಹಿತ್​ ಜೋಡಿ.

Advertisment

ಇದನ್ನೂ ಓದಿ: ರೋಹಿತ್​ ಉತ್ತರಾಧಿಕಾರಿ ಪಟ್ಟಕ್ಕಾಗಿ ಟಫ್ ಫೈಟ್​.. ಕ್ಯಾಪ್ಟನ್ ರೇಸ್​ನಲ್ಲಿ ನಾಲ್ವರು ಪ್ಲೇಯರ್ಸ್!​

ಟೀಮ್ ಇಂಡಿಯಾ ಟಿ20 ವಿಶ್ವಕಪ್‌ ಗೆದ್ದಿದೆ. ಕೋಟ್ಯಾಂತರ ಅಭಿಮಾನಿಗಳ ಫ್ರಾರ್ಥನೆ ಫಲಿಸಿದೆ. ವಿಶ್ವ ಗೆದ್ದ ಆಟಗಾರರು ಹೀರೋಗಳಾಗಿ ಮೆರೆದಾಡ್ತಿದ್ದಾರೆ. ಟೀಮ್ ಇಂಡಿಯಾದ ಸಾಧನೆಯನ್ನ ಕೊಂಡಾಡ್ತಿದ್ದಾರೆ. ಆದ್ರೆ, ಇದೆಲ್ಲದರ ಗೆಲುವಿನ ಹಿಂದಿನ ಶ್ರೇಯಸ್ಸು ರಾಹುಲ್ ದ್ರಾವಿಡ್ ಆ್ಯಂಡ್ ಕ್ಯಾಪ್ಟನ್ ರೋಹಿತ್​ಗೆ ಸಲ್ಲುತ್ತೆ​​​​​​​​​​​​​​​​​. ರವಿಶಾಸ್ತ್ರಿ & ವಿರಾಟ್​ ಕೊಹ್ಲಿ ಪದತ್ಯಾಗದ ಬಳಿಕ ಪ್ರವರ್ದಮಾನಕ್ಕೆ ಬಂದ ಈ ಜೋಡಿ, ಪ್ರತಿಫಲಕ್ಕಿಂತ ಕಾರ್ಯ ಪ್ರವೃತ್ತಿಗೆ ಹೆಚ್ಚು ಒತ್ತು ನೀಡ್ತು. ಐಸಿಸಿ ಟೂರ್ನಿ ಗೆಲುವಿಗಾಗಿ ಮಾಡಿದ ಕೆಲಸ ಕಾರ್ಯ ಒಂದೆರೆಡಲ್ಲ. ಅನುಭವಿಸಿದ ಟೀಕೆಗಳಿಗೆ ಲೆಕ್ಕ ಇಲ್ಲ.

ಇದನ್ನೂ ಓದಿ: ಭೀಕರ ಪ್ರವಾಹದ ನೀರಿಗೆ ಬಿದ್ದ ಶಾಸಕ.. 14 ಜಿಲ್ಲೆಗಳಲ್ಲಿ ಭರ್ಜರಿ ಮಳೆ ಮುನ್ಸೂಚನೆ; ರೆಡ್ ಅಲರ್ಟ್ ಅನೌನ್ಸ್

Advertisment

publive-image

ಸುಗಮವಾಗಿರಲಿಲ್ಲ ದ್ರಾವಿಡ್‌-ರೋಹಿತ್​ ಹಾದಿ

ದ್ರಾವಿಡ್‌ ಆ್ಯಂಡ್ ರೋಹಿತ್​ ಹಾದಿ ಸುಗಮವಾಗಿರಲಿಲ್ಲ. ಐಸಿಸಿ ಟ್ರೋಫಿ ಗೆಲ್ಲಿಸಬೇಕು ಎಂಬ ಬೆಟ್ಟದಷ್ಟು ನಿರೀಕ್ಷೆ & ಒತ್ತಡ ಇಬ್ಬರ ಮೇಲಿತ್ತು. ಆದ್ರೆ, 2022ರ ಟಿ20 ವಿಶ್ವಕಪ್​​ ಸೋಲು, 2023ರ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಸೋಲು ಹಿನ್ನಡೆ ಉಂಟು ಮಾಡಿತು. 2023ರ ಏಕದಿನ ವಿಶ್ವಕಪ್‌ನ ಸೋಲು ಮತ್ತಷ್ಟು ಟೀಕೆಗೆ ಗುರಿಯಾಗುವಂತೆ ಮಾಡ್ತು. ಇದಕ್ಕೆ ರಾಹುಲ್ ದ್ರಾವಿಡ್ ಆ್ಯಂಡ್ ರೋಹಿತ್ ಜೋಡಿ ಕುಗ್ಗಲಿಲ್ಲ. ತಪ್ಪುಗಳಿಂದ ಪಾಠ ಕಲಿತು, ಸವಾಲನ್ನ ಸ್ವೀಕರಿಸಿದರು..

ಹೊಸ ಕಾರ್ಯತಂತ್ರ.. ಆನ್​ಫೀಲ್ಡ್​ನಲ್ಲಿ ಕಂಪ್ಲೀಟ್ ಡಾಮಿನೇಷನ್..!

ರೋಹಿತ್, ದ್ರಾವಿಡ್ ಟೀಮ್ ಇಂಡಿಯಾದ ಚುಕ್ಕಾಣಿ ಹಿಡಿದ ಬಳಿಕ ಎಲ್ಲವೂ ಬದಲಾಯ್ತು. ಆನ್​ಫೀಲ್ಡ್​ ಆಟದಲ್ಲಿ ಬದಲಾವಣೆ ಮಾಡಿದ ಈ ಜೋಡಿ, ಮಾತಿಗಿಂತ ಕೆಲಸಕ್ಕೆ ಒತ್ತು ನೀಡ್ತು. ಪ್ರತಿಫಲವಾಗಿ ಡಾಮಿನೇಷನ್​ ಮಾಡ್ತು. ಮೂರು ಫಾರ್ಮೆಟ್​ನಲ್ಲಿ ಗೆಲುವು ಅನ್ನೋದು ಟೀಮ್​ ಇಂಡಿಯಾಗೆ ಹ್ಯಾಬಿಟ್ ಆಯ್ತು. ವಿಶ್ವದ ನಂಬರ್.1 ಟೀಮ್ ಆಗಿ ಮೆರೆದಾಡಿತು.

ರಾಹುಲ್-ರೋಹಿತ್ ನೇತೃತ್ವದಲ್ಲಿ ಭಾರತ

ರಾಹುಲ್​ ದ್ರಾವಿಡ್​, ರೋಹಿತ್​ ಶರ್ಮಾ ಮುಂದಾಳತ್ವದಲ್ಲಿ ರಿಯಲ್ ಗೇಮ್ ಚೇಂಜರ್ ಆದ ಟೀಮ್ ಇಂಡಿಯಾ, ಟೆಸ್ಟ್​ ಕ್ರಿಕೆಟ್​ನಲ್ಲಿ 62.50 ವಿನ್ನಿಂಗ್ ಪರ್ಸೆಂಟೇಜ್ ಹೊಂದಿದೆ. ಇನ್ನು, ಏಕದಿನ ಮಾದರಿಯಲ್ಲಿ 75.55, ಟಿ20ಯಲ್ಲಿ 78.68 ಶೇಕಡವಾರಿನ ಗೆಲುವು ದಾಖಲಿಸಿದೆ. ದೇಶ-ವಿದೇಶಗಳಲ್ಲಿ ಗೆಲುವು, ಎಲ್ಲ ಮಾದರಿಯಲಲ್ಲಿ ನಂಬರ್​ 1 ಪಟ್ಟ, ರೋಹಿತ್ ಆ್ಯಂಡ್ ರಾಹುಲ್ ದ್ರಾವಿಡ್ ವರ್ಕ್​ಗೆ ಸಿಕ್ಕ ಪ್ರತಿಫಲವೇ ಆಗಿತ್ತು. ಆದ್ರೂ, ಐಸಿಸಿ ಟೂರ್ನಿಗಳಲ್ಲಿನ ಸೋಲು, ಟೀಕೆಗೆ ಗುರಿಯಾಗಿಸುತ್ತಲೇ ಇತ್ತು.

Advertisment

ಪ್ರತಿಭೆಗೆ ತಕ್ಕ ಹೊಣೆಗಾರಿಕೆ & ಆಟಗಾರರಿಗೆ ಸ್ವತಂತ್ರ..!

ಯುವ ಆಟಗಾರರ ಬಗ್ಗೆ ಚೆನ್ನಾಗಿ ಅರಿತಿದ್ದ ದ್ರಾವಿಡ್ ಆ್ಯಂಡ್ ರೋಹಿತ್, ಆಟಗಾರರ ಪ್ರತಿಭೆಗೆ ತಕ್ಕ ಹೊಣೆಗಾರಿಕೆ ನೀಡಿದ್ರು. ಅಷ್ಟೇ ಅಲ್ಲ.! ಅನಗತ್ಯ ಒತ್ತಡ ಹೇರದ ಈ ಜೋಡಿ, ಆಟಗಾರರಿಗೆ ಸ್ವತಂತ್ರವಾಗಿ ಆಡಲು ಬಿಟ್ಟರು. ಆ ಮೂಲಕ ವಿಶ್ವಕಪ್‌ಗೆ ಸಜ್ಜಗೊಳಿಸಿದ್ದರು. ಇದು ಟಿ20 ವಿಶ್ವಕಪ್​ನಲ್ಲಿ ವರ್ಕೌಟ್ ಆಯ್ತು.

ಇದನ್ನೂ ಓದಿ: ಒಂದೇ ಮನೆಯಲ್ಲಿ 5 ಮಂದಿ ನಿಗೂಢ ಸಾವು.. ಇದು ಡೆಲ್ಲಿಯ ಬುರಾರಿ ಫ್ಯಾಮಿಲಿ ಡೆತ್ ನೆನಪಿಸುತ್ತೆ!

publive-image

ಟೀಕೆ, ಟಿಪ್ಪಣೆಗೂ ರಾಹುಲ್-ರೋಹಿತ್​ ಡೋಂಟ್​ಕೇರ್

3 ವರ್ಷಗಳ ಅವಧಿಯಲ್ಲಿ ಟೀಮ್ ಇಂಡಿಯಾ ಒಂದು ಪ್ರಯೋಗ ಶಾಲೆಯಾಗಿತ್ತು. ಆಟಗಾರರ ಬ್ಯಾಟಿಂಗ್ ಕ್ರಮಾಂಕ ಬದಲಾಯ್ತು. ಟೀಕೆಗೂ ಗುರಿಯಾಗಿದ್ದರು. ಆದ್ರೆ, ಇದ್ಯಾವುದಕ್ಕೂ ದ್ರಾವಿಡ್ ಆ್ಯಂಡ್ ರೋಹಿತ್ ಡೋಂಟ್ ಕೇರ್ ಎಂದಿದ್ರು. ಇನ್​ಫ್ಯಾಕ್ಟ್​_ ವಿಶ್ವಕಪ್​ನಲ್ಲಿ ವಿರಾಟ್​​ ಕೊಹ್ಲಿಯನ್ನ ಆರಂಭಿಕನಾಗಿ ಆಡಿಸುವ ಪ್ರಯೋಗ ಕೈಕೊಟ್ಟರೂ, ಶಿವಂ ದುಬೆ ಹಾಗೂ ಹೆಚ್ಚುವರಿ ಸ್ಪಿನ್ನರ್​ಗಳ ಆಯ್ಕೆ ಬಗ್ಗೆ ಟೀಕೆ ವ್ಯಕ್ತವಾದರೂ, ತಂಡದಲ್ಲೇ ಮುಂದುವರಿಸಿದ್ರು. ಅವರೇ ಮ್ಯಾಚ್ ವಿನ್ನರ್​​ಗಳು ಅನ್ನೋದನ್ನ ನಿರೂಪಿಸಿದ್ರು.

Advertisment

ಇದನ್ನೂ ಓದಿ: ಐಕಾನಿಕ್ ವಾಕಿಂಗ್​ನಲ್ಲಿ ಟ್ರೋಫಿ ಸ್ವೀಕರಿಸಿದ್ದ ರೋಹಿತ್.. ಹಿಟ್​​ಮ್ಯಾನ್​ಗೆ ಈ ಸ್ಟೈಲ್ ಹೇಳಿದ್ಯಾರು?

ಕಳೆದೆರಡು ವರ್ಷಗಳಲ್ಲಿ ಹಲವು ಸವಾಲುಗಳನ್ನ ಎದುರಿಸಿದ್ದ ದ್ರಾವಿಡ್, ಹಿನ್ನಡೆಗಳ ಜೊತೆ ಕ್ಲಿಷ್ಟಕರ ಸನ್ನಿವೇಶಗಳನ್ನ ಎದುರಿಸಿದರು. ಆದ್ರೆ, ಎಲ್ಲ ಸವಾಲನ್ನ ಸ್ಪಷ್ಟ ಯೋಜನೆಗಳೊಂದಿಗೆ ಯಶಸ್ಸಿನತ್ತ ಮುನ್ನಡೆಸಿ, ವಿಶ್ವಕಪ್‌ ಗೆಲ್ಲಿಸಿಕೊಟ್ಟಿದ್ದಾರೆ. ಇದೀಗ ಟೀಕಾಕಾರರ ಬಾಯಲ್ಲೇ ರೋಹಿತ್ ಆ್ಯಂಡ್​ ದ್ರಾವಿಡ್ ಜೋಡಿ ಉಘೇ... ಉಘೇ ಎನಿಸಿಕೊಳ್ತಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment
Advertisment