/newsfirstlive-kannada/media/post_attachments/wp-content/uploads/2023/07/Kohli-Rohit.jpg)
ಮುಂದಿನ ತಿಂಗಳು ಸೆಪ್ಟೆಂಬರ್ 5ನೇ ತಾರೀಕಿನಿಂದ ದುಲೀಪ್ ಟ್ರೋಫಿ ಶುರುವಾಗಲಿದೆ. ದುಲೀಪ್ ಟ್ರೋಫಿ 5ನೇ ತಾರೀಕಿನಿಂದ 22ರ ತನಕ ನಡೆಯಲಿದೆ. ವಿಶೇಷ ಎಂದರೆ ಸೀನಿಯರ್ ಆಟಗಾರರು ದೇಶೀಯ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡಿದ್ದಾರೆ. ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಭಾರತದ ಅಂತರರಾಷ್ಟ್ರೀಯ ಆಟಗಾರರು ಭಾಗವಹಿಸುತ್ತಿದ್ದು, ಭಾರೀ ನಿರೀಕ್ಷೆ ಹುಟ್ಟುಹಾಕಿದೆ.
ಎಂದಿನಂತೆ ಈ ಸಲವೂ ದುಲೀಪ್ ಟ್ರೋಫಿಯನ್ನು ಯಾವುದೇ ನಾಕೌಟ್ ಪಂದ್ಯಗಳಿಲ್ಲದೆ ರೌಂಡ್-ರಾಬಿನ್ ಮಾದರಿಯಲ್ಲಿ ನಡೆಸಲಾಗುತ್ತಿದೆ. ಅದಕ್ಕಾಗಿ ಇಂಡಿಯಾ ಎ, ಇಂಡಿಯಾ ಬಿ, ಇಂಡಿಯಾ ಸಿ ಹಾಗೂ ಇಂಡಿಯಾ ಡಿ ಅನೌನ್ಸ್ ಮಾಡಲಾಗಿದೆ. ಅಜಿತ್ ಅಗರ್ಕರ್ ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿ ತಂಡಗಳನ್ನು ಆಯ್ಕೆ ಮಾಡಿದ್ದು, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರನ್ನು ಯಾವ ತಂಡಕ್ಕೂ ಆಯ್ಕೆ ಮಾಡಿಲ್ಲ. ಇದರ ಮಧ್ಯೆ ಗುಡ್ನ್ಯೂಸ್ ಒಂದಿದೆ.
ದುಲೀಪ್ ಟ್ರೋಫಿಗೆ ಕೊಹ್ಲಿ, ರೋಹಿತ್?
ಇತ್ತೀಚೆಗಷ್ಟೇ ವಿಶ್ವಕಪ್ ಗೆದ್ದ ಬೆನ್ನಲ್ಲೇ ವಿರಾಟ್ ಕೊಹ್ಲಿ, ರೋಹಿತ್ 20 ಅಂತರಾಷ್ಟ್ರೀಯ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ರು. ಅಷ್ಟೇ ಅಲ್ಲದೇ ಶ್ರೀಲಂಕಾ ಪ್ರವಾಸದಿಂದ ರೆಸ್ಟ್ ಕೂಡ ಕೇಳಿದ್ದರು. ಬಿಸಿಸಿಐ ಕೊಹ್ಲಿ, ರೋಹಿತ್ ಮತ್ತು ಬುಮ್ರಾಗೆ ರೆಸ್ಟ್ ನೀಡಿತ್ತು. ಗಂಭೀರ್ ಕೋಚ್ ಆದ ಬಳಿಕ ಇದು ಮೊದಲ ಸರಣಿ ಆಗಿದ್ದು, ಮೂವರು ಸ್ಟಾರ್ ಆಟಗಾರರು ಶ್ರೀಲಂಕಾ ವಿರುದ್ಧ ಏಕದಿನ ಸೀರೀಸ್ ಆಡಲೇಬೇಕು ಎಂದು ಮನವಿ ಮಾಡಿಕೊಂಡಿದ್ದರು. ಇದಕ್ಕೆ ವಿರಾಟ್ ಕೊಹ್ಲಿ, ರೋಹಿತ್ ಸಮ್ಮತಿಸಿದ್ದು, ತಂಡಕ್ಕೆ ವಾಪಸ್ಸಾಗಿದ್ರು. ಈಗ ಶ್ರೀಲಂಕಾ ಸೀರೀಸ್ ಮುಗಿದಿದ್ದು, ದುಲೀಪ್ ಟ್ರೋಫಿ ಆಡುವುದಾಗಿ ಹೇಳಿದ್ದಾರೆ. ಈ ಮೂಲಕ ಫ್ಯಾನ್ಸ್ಗೆ ಗುಡ್ನ್ಯೂಸ್ ಕೊಟ್ಟಿದ್ದಾರೆ. ಯಾವಾಗ ಬೇಕಾದ್ರೂ ರೋಹಿತ್ ಮತ್ತು ಕೊಹ್ಲಿ ತಂಡಗಳು ಸೇರಿಕೊಳ್ಳಬಹುದು.
ಇದನ್ನೂ ಓದಿ: ಶುಭ್ಮನ್ ಗಿಲ್ ಅಡಿಯಲ್ಲಿ ಕನ್ನಡಿಗ ಆಡಬೇಕಾ? ಬಿಸಿಸಿಐನಿಂದ KL ರಾಹುಲ್ಗೆ ಘನಘೋರ ಮೋಸ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ