/newsfirstlive-kannada/media/post_attachments/wp-content/uploads/2024/07/Kohli_Rohit-RCB-1.jpg)
ಬಹುನಿರೀಕ್ಷಿತ 2024ರ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಗೆದ್ದು ಬೀಗಿದೆ. ಈ ಮೂಲಕ 2ನೇ ಬಾರಿಗೆ ಟಿ20 ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿದೆ. ವಿಶ್ವಕಪ್ ಗೆದ್ದ ಕೂಡಲೇ ಟೀಮ್ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ರೂ ತಾನು ಐಪಿಎಲ್ ಆಡೋದಾಗಿ ರೋಹಿತ್ ಹೇಳಿದ್ರು.
ಇನ್ನು, ಮುಂದಿನ ಸೀಸನ್ ವೇಳೆಗೆ ರೋಹಿತ್ ಮುಂಬೈ ಇಂಡಿಯನ್ಸ್ ತೊರೆಯೋದು ಗ್ಯಾರಂಟಿ. ಆಕ್ಷನ್ನಲ್ಲಿ ಆರ್ಸಿಬಿ ರೋಹಿತ್ ಶರ್ಮಾ ಅವರನ್ನು ಖರೀದಿ ಮಾಡಲಿ. ರೋಹಿತ್ ಕ್ಯಾಪ್ಟನ್ ಆಗಲಿ, ಕೊಹ್ಲಿ ಆರ್ಸಿಬಿ ಪರ ಚೆನ್ನಾಗಿ ಆಡಿ ಕಪ್ ಗೆಲ್ಲಿಸಲಿ ಎಂದು ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಟ್ರೆಂಡ್ ಮಾಡುತ್ತಿದ್ದಾರೆ. ಮೂಲಗಳ ಪ್ರಕಾರ ಆರ್ಸಿಬಿ ಫ್ರಾಂಚೈಸಿ ಕೂಡ ಒಂದು ವೇಳೆ ಕೊಹ್ಲಿ ಕ್ಯಾಪ್ಟನ್ ಆಗಲು ನಿರಾಕರಣೆ ಮಾಡಿದ್ರೆ ರೋಹಿತ್ ಶರ್ಮಾ ಅವರನ್ನು ಬೆಂಗಳೂರು ತಂಡಕ್ಕೆ ಕರೆ ತರೋ ಸಾಧ್ಯತೆಗಳು ಇವೆ.
Rohit Sharma with Virat Kohli Opening for RCB in IPL 2025,
And imagine they won first title for RCB, Peak Cricket ?? #RohitSharma? ❤️? #ViratKohli?pic.twitter.com/uoMj8Q2aQg
— OG Khan (@Og_Opionions)
Rohit Sharma with Virat Kohli Opening for RCB in IPL 2025,
And imagine they won first title for RCB, Peak Cricket 🥹😂 #RohitSharma𓃵 ❤️🔥 #ViratKohli𓃵pic.twitter.com/uoMj8Q2aQg— OG Khan (@Og_Opionions) July 1, 2024
">July 1, 2024
ಆರ್ಸಿಬಿ ಪ್ಲಾನ್ ಏನು?
ಆರ್ಸಿಬಿ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ಈಗ 40 ವರ್ಷ. ಹಾಗಾಗಿ ಐಪಿಎಲ್ನಿಂದ ಫಾಫ್ ನಿವೃತ್ತಿ ಆಗೋ ಸಾಧ್ಯತೆ ಇದೆ. ಇದಾದ ಬಳಿಕ ಆರ್ಸಿಬಿ ತಂಡಕ್ಕೆ ಹೊಸ ಕ್ಯಾಪ್ಟನ್ ಬೇಕಿದ್ದಾರೆ. ಆದ್ದರಿಂದ ಮುಂದಿನ ಸೀಸನ್ಗೆ ಕೊಹ್ಲಿ ಅವರಿಗೆ ಆರ್ಸಿಬಿ ಪಟ್ಟ ನೀಡಲು ಫ್ರಾಂಚೈಸಿ ನಿರ್ಧಾರ ಮಾಡಿದೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಕೊಹ್ಲಿ ಕ್ಯಾಪ್ಟನ್ ಆಗಲು ಒಪ್ಪದಿದ್ರೆ ರೋಹಿತ್ ಶರ್ಮಾಗೆ ಕ್ಯಾಪ್ಟನ್ಸಿ ನೀಡಲು ಆರ್ಸಿಬಿ ಭರ್ಜರಿ ತಯಾರಿ ನಡೆಸಿಕೊಂಡಿದೆ. ರೋಹಿತ್ಗೆ ಕ್ಯಾಪ್ಟನ್ಸಿ ಮಾತ್ರವಲ್ಲ ತಂಡದ ಓಪನಿಂಗ್ ಮಾಡೋ ಜವಾಬ್ದಾರಿ ಕೂಡ ಇರಲಿದೆ. ಆರ್ಸಿಬಿ ತಂಡಕ್ಕೆ ಬೆಸ್ಟ್ ಓಪನರ್ ಕೂಡ ಬೇಕಾಗಿದ್ದಾರೆ.
ಇದನ್ನೂ ಓದಿ:ಅಭಿಮಾನಿಗಳಿಗೆ ಹಬ್ಬ.. ಕೊಹ್ಲಿಗೆ ಹಿಟ್ಮ್ಯಾನ್ ಸಾಥ್.. ರೋಹಿತ್ ಆರ್ಸಿಬಿ ಕ್ಯಾಪ್ಟನ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ