/newsfirstlive-kannada/media/post_attachments/wp-content/uploads/2024/06/ROHIT_SHARMA_T20.jpg)
ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ T20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾವನ್ನು ಮಣಿಸಿ ಭಾರತ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. 17 ವರ್ಷಗಳ ನಂತರ T20 ಕ್ರಿಕೆಟ್ನಲ್ಲಿ ಮತ್ತೊಮ್ಮೆ ಭಾರತ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದರ ಬೆನ್ನಲ್ಲೇ ಕಪ್ ಗೆದ್ದ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು 3 ವಿಶ್ವದಾಖಲೆಗಳನ್ನು ಮಾಡಿರುವುದು ವಿಶೇಷ ಎನಿಸಿದೆ.
ಇದನ್ನೂ ಓದಿ:ಬಿಕ್ಕಿಬಿಕ್ಕಿ ಕಣ್ಣೀರಿಟ್ಟ ಪಾಂಡ್ಯ.. ಪತ್ನಿ ಅನುಷ್ಕಾ ಶರ್ಮಾಗೆ ವಿಡಿಯೋ ಕಾಲ್ ಮಾಡಿ ಕೊಹ್ಲಿ ಭಾವುಕ
ಸದ್ಯ ಹಿಟ್ಮ್ಯಾನ್ ರೋಹಿತ್ ಶರ್ಮಾ T20 ವಿಶ್ವಕಪ್ ಫೈನಲ್ ಪಂದ್ಯ ಗೆದ್ದು ಕಪ್ಗೆ ಮುತ್ತಿಟ್ಟಿದ್ದಾರೆ. ಇದರ ಜೊತೆಗೆ ನಾಯಕನಾಗಿ 50 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಗೆದ್ದ ವಿಶ್ವದ ಫಸ್ಟ್ ಕ್ಯಾಪ್ಟನ್ ಎನ್ನುವ ಹೆಗ್ಗಳಿಕೆಯನ್ನು ರೋಹಿತ್ ಶರ್ಮಾ ಪಡೆದುಕೊಂಡಿದ್ದಾರೆ. 2021ರಲ್ಲಿ ಭಾರತದ ಟಿ20 ತಂಡಕ್ಕೆ ರೋಹಿತ್ ನಾಯಕನಾದರು. ಅಲ್ಲಿಂದ ಇಲ್ಲಿವರೆಗೆ 61 ಪಂದ್ಯಗಳನ್ನು ಆಡಿರುವ ರೋಹಿತ್ ಇದರಲ್ಲಿ 50 ಪಂದ್ಯಗಳನ್ನು ಗೆದ್ದಿದ್ದಾರೆ.
ಇದನ್ನೂ ಓದಿ: 25ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಸಾರಿಗೆ ಬಸ್ ಪಲ್ಟಿ.. ಡ್ರೈವರ್ ಸೇರಿ ಮೂವರು ಗಂಭೀರ; ಆಕ್ಸಿಡೆಂಟ್ ಆಗಿದ್ದೇಗೆ?
ರೋಹಿತ್ ಶರ್ಮಾ ಅವರು ಎರಡು ಟಿ20 ವಿಶ್ವಕಪ್ ಟ್ರೋಫಿ ಗೆದ್ದಂತಹ ಟೀಮ್ ಇಂಡಿಯಾದ ಮೊದಲ ಪ್ಲೇಯರ್ ಆಗಿದ್ದಾರೆ. ಈ ಮೊದಲು 2007ರಲ್ಲಿ ಎಂ.ಎಸ್ ಧೋನಿ ನಾಯಕತ್ವದಲ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದ ರೋಹಿತ್ 16 ಎಸೆತಕ್ಕೆ 30 ರನ್ ಗಳಿಸಿ ಟ್ರೋಫಿ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದರು.
ಇದನ್ನೂ ಓದಿ:ಕಾಲೇಜು ಮುಂಭಾಗ ಸ್ಕಿಡ್ ಆಗಿ ಬಿದ್ದ ಬೈಕ್.. ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವು, ಯುವಕ ಗಂಭೀರ
ಈ T20 ವಿಶ್ವಕಪ್ ಟೂರ್ನಿಯಲ್ಲಿ ಒಂದೂ ಪಂದ್ಯವನ್ನು ಭಾರತ ತಂಡ ಸೋತಿಲ್ಲ. ಈ ಕಾರಣಕ್ಕಾಗಿ ಹಿಟ್ಮ್ಯಾನ್ ಟೂರ್ನಿಯಲ್ಲಿ ಶೇ.100ರಷ್ಟು ಗೆಲುವಿನ ದಾಖಲೆಯೊಂದಿಗೆ 2024ರ ಟಿ20 ವಿಶ್ವಕಪ್ ಗೆದ್ದ ವಿಶ್ವದ ಮೊದಲ ನಾಯಕ ಎನ್ನುವ ದಾಖಲೆಯನ್ನು ರೋಹಿತ್ ಶರ್ಮಾ ಮಾಡಿದ್ದಾರೆ. 2007ರಲ್ಲಿ ನಾಯಕನಾಗಿದ್ದ ಧೋನಿ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧ 10 ರನ್ಗಳಿಂದ ಒಂದು ಪಂದ್ಯ ಸೋತಿದ್ದರು. ಆದರೆ ಈ ಪಂದ್ಯಾವಳಿಯಲ್ಲಿ ರೋಹಿತ್ ಸತತ ಗೆಲುವಿನೊಂದಿಗೆ ದಾಖಲೆ ಮಾಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ