/newsfirstlive-kannada/media/post_attachments/wp-content/uploads/2024/07/SURYA_KUMAR-2.jpg)
T20 ವಿಶ್ವಕಪ್ ಟ್ರೋಫಿ ಗೆದ್ದ ಮೇಲೆ ಭೀಕರ ಬೆರಿಲ್ ಸೈಕ್ಲೋನ್ ಅಪ್ಪಳಿಸಿದ್ದಕ್ಕೆ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ನ ಬಾರ್ಬಡೋಸ್ನಲ್ಲೇ ಉಳಿದುಕೊಂಡಿತ್ತು. ಆದರೆ ಸ್ಪೆಷಲ್ ಚಾರ್ಟರ್ ಏರ್ ಇಂಡಿಯಾ ವಿಮಾನದ ಮೂಲಕ ರೋಹಿತ್ ಶರ್ಮಾ ಬಾಯ್ಸ್ ಭಾರತಕ್ಕೆ ಆಗಮಿಸುತ್ತಿದ್ದು ನಾಳೆ ದೆಹಲಿಯ ವಿಮಾನ ನಿಲ್ದಾಣದಲ್ಲಿ ಇಳಿಯಲಿದ್ದಾರೆ. ಇಳಿದ ನಂತರ ಟೀಮ್ ಇಂಡಿಯಾದ ಇವೆಂಟ್ಸ್ ಏನೇನು ಇವೆ ಎಂಬುದರ ಮಾಹಿತಿ ಇಲ್ಲಿದೆ.
ಇದನ್ನೂ ಓದಿ:ವಿಶ್ವಕಪ್ ಗೆದ್ದ ತಂಡಕ್ಕೆ ಸೈಕ್ಲೋನ್ ಕಂಟಕ.. ಕೊನೆಗೂ ಸ್ವದೇಶಕ್ಕೆ ಮರಳಲು ಸ್ಪೆಷಲ್ ಫ್ಲೈಟ್ ಸಿದ್ಧ; ವಾಪಸ್ ಯಾವಾಗ?
ಬಾರ್ಬಡೋಸ್ನಿಂದ 17 ಗಂಟೆಗಳ ಪ್ರಯಾಣದ ನಂತರ ನೇರ ದೆಹಲಿಯ ವಿಮಾನ ನಿಲ್ದಾಣದಲ್ಲಿ ಭಾರತ ತಂಡದ ಆಟಗಾರರು ಇಳಿಯಲಿದ್ದಾರೆ. ಬಳಿಕ ಪ್ರಧಾನಿ ನರೇಂದ್ರ ಮೋದಿಯವರನ್ನ ಭೇಟಿ ಮಾಡಿ, ಬೆಳಗಿನ ಉಪಾಹಾರವನ್ನು ಪ್ರಧಾನಿಯವರೊಂದಿಗೆ ಮಾಡಲಿದ್ದಾರೆ. ಈ ಕಾರ್ಯಕ್ರಮ ಮುಗಿದ ಮೇಲೆ ಭಾರತ ತಂಡ ದೆಹಲಿಯಿಂದ ಮುಂಬೈಗೆ ಪ್ರಯಾಣ ಮಾಡಲಿದೆ. ಮುಂಬೈಗೆ ತೆರಳಿದ ಮೇಲೆ ನಾರಿಮನ್ ಪಾಯಿಂಟ್ನಿಂದ ವಾಂಖೇಡೆ ಸ್ಟೇಡಿಯಂವರೆಗೆ ಓಪನ್ ಬಸ್ನಲ್ಲಿ ವಿಕ್ಟರಿ ಪೆರೇಡ್ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ: ದರ್ಶನ್ ಕೈದಿ ನಂಬರ್ ಫೋಟೋ ಶೂಟ್.. ಮಗುವಿನ ತಂದೆ, ತಾಯಿ, ವೈರಲ್ ಮಾಡಿದವ್ರಿಗೆ ಸಂಕಷ್ಟ!
TEAM INDIA ARE OFF TO NEW DELHI. ??
- The heroes are coming with the World Cup. ? pic.twitter.com/FRgjvpceXa
— Mufaddal Vohra (@mufaddal_vohra)
TEAM INDIA ARE OFF TO NEW DELHI. 🇮🇳
- The heroes are coming with the World Cup. 🏆 pic.twitter.com/FRgjvpceXa— Mufaddal Vohra (@mufaddal_vohra) July 3, 2024
">July 3, 2024
ಈ ಎಲ್ಲ ಕಾರ್ಯಕ್ರಮ ಆದ ನಂತರ ಬಿಸಿಸಿಐ ಕಾರ್ಯದರ್ಶಿ ಜೈಶಾ ಅವರು ಎಲ್ಲ ಆಟಗಾರರಿಗೆ, ಕೋಚ್, ಸಿಬ್ಬಂದಿ ವರ್ಗದವರಿಗೆ 125 ಕೋಟಿ ಬಹುಮಾನದ ಹಣವನ್ನು ವಿತರಿಸಲಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಭಾರತ ತಂಡದ ಆಟಗಾರರೆಲ್ಲ ಒಂದೇ ಪ್ಲೈಟ್ನಲ್ಲಿ ಬಾರ್ಬಡೋಸ್ನಿಂದ ದೆಹಲಿಗೆ ಬರುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲೂ ಸೆಲೆಬ್ರೆಷನ್ ಮಾಡಲಿದ್ದಾರೆ ಎನ್ನಲಾಗಿದ್ದು ಅಭಿಮಾನಿಗಳು ಕೂಡ ಸಾಕಷ್ಟು ಸಂಖ್ಯೆಯಲ್ಲಿ ಸೇರುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ