ವಿಶ್ವ ಟೆಸ್ಟ್ ಚಾಂಪಿಯನ್ಶಿಫ್ ಫೈನಲ್ ಕನಸು ಬಹುತೇಕ ಭಗ್ನ..?
ಬಾರ್ಡರ್ ಗವಾಸ್ಕರ್ ಸರಣಿ ಮೇಲೆ ಈ ನಾಲ್ವರ ಭವಿಷ್ಯ ನಿಂತಿದೆ
ಯಾವ್ಯಾವ ಆಟಗಾರರಿಗೆ ನ್ಯೂಜಿಲೆಂಡ್ ಸೋಲಿನಿಂದ ಸಂಕಷ್ಟ?
ನ್ಯೂಜಿಲೆಂಡ್ ಎದುರಿನ ಕ್ಲೀನ್ಸ್ವೀಪ್, ಟೀಮ್ ಇಂಡಿಯಾಗೆ ಮಾತ್ರವಲ್ಲ, ಅಭಿಮಾನಿಗಳಿಗೂ ಅರಗಿಸಿಕೊಳ್ಳಲಾರದ ನೋವು. ಈ ಸೋಲು ಸ್ವತಃ ಬಿಸಿಸಿಐ ಬಿಗ್ಬಾಸ್ಗಳ ಅಸಮಾಧಾನಕ್ಕೂ ಕಾರಣವಾಗಿದೆ. ವೈಟ್ವಾಶ್ ಶಾಕ್, ಟೀಮ್ ಇಂಡಿಯಾದ ಸೂಪರ್ ಸೀನಿಯರ್ಸ್ ಭವಿಷ್ಯವನ್ನೇ ತೂಗುಯ್ಯಾಲೆಯಲ್ಲಿ ಸಿಗಲುಕುವಂತೆ ಮಾಡಿದೆ.
ತವರಲ್ಲಿ ಟೀಮ್ ಇಂಡಿಯಾ ವೈಟ್ವಾಶ್ ಮುಖಭಂಗ ಅನುಭವಿಸಿದೆ. ಕ್ರಿಕೆಟ್ ಪಂಡಿತರು, ಮಾಜಿ ಆಟಗಾರರು ಟೀಮ್ ಇಂಡಿಯಾ ಆಟದ ವೈಖರಿ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಟೀಮ್ ಇಂಡಿಯಾದ ಹೀನಾಯ ಪ್ರದರ್ಶನ ನೋಡಿದ ಫ್ಯಾನ್ಸ್, ಆಟಗಾರರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಅಷ್ಟೇ ಅಲ್ಲ, ಕೆಲ ಆಟಗಾರರನ್ನ ಟೀಮ್ ಇಂಡಿಯಾದಿಂದ ಕಿಕ್ ಔಟ್ ಮಾಡುವಂತೆ ಆಕ್ರೋಶ ಹೊರಹಾಕುತ್ತಿದ್ದಾರೆ.
ಇದನ್ನೂ ಓದಿ: ₹24 ಕೋಟಿ ವೀರ ಮಿಚೆಲ್ ಸ್ಟಾರ್ಕ್ಗೆ ಬಿಗ್ ಶಾಕ್.. ಈ IPL ಫ್ರಾಂಚೈಸಿ ಮಾಡಿರುವುದು ಸರಿನಾ..?
ಟಾಪ್ ಆಟಗಾರರನ್ನ ಹೊರಗಾಕಿ, ಕೆಲ ಹೊಸ ಆಟಗಾರರನ್ನು ಕರೆ ತನ್ನಿ. ಕೊಹ್ಲಿ, ಕ್ಯಾಪ್ಟನ್ ರೋಹಿತ್, ಅಶ್ವಿನ್, ಜಡೇಜಾ. ಈ ನಾಲ್ವರ ಬದಲಿಗೆ ಹೊಸ ಮುಖಗಳಿಗೆ ಅವಕಾಶ ನೀಡಿ.
ಟೀಮ್ ಇಂಡಿಯಾದ ಅಭಿಮಾನಿ
ಅಭಿಮಾನಿಯ ಮನದ ಆಕ್ರೋಶದ ಮಾತುಗಳಿವು. ಆದ್ರೀಗ ಇದೇ ರೀತಿಯ ಕಠಿಣ ಕ್ರಮಕ್ಕೆ ಬಿಗ್ಬಾಸ್ಗಳು ಮುಂದಾಗಿದ್ದಾರೆ. ಒಂದಲ್ಲ, ಎರಡಲ್ಲ ಬರೋಬ್ಬರಿ ನಾಲ್ವರು ಸೂಪರ್ ಸೀನಿಯರ್ಸ್ ಭವಿಷ್ಯಕ್ಕೆ ಫುಲ್ ಸ್ಟಾಪ್ ಇಡಲು ಬಿಸಿಸಿಐ ಚಿಂತಿಸಿದೆ.
ವೈಟ್ವಾಶ್ ಶಾಕ್ ಬೆನ್ನಲ್ಲೇ ಸೀನಿಯರ್ಸ್ಗೆ ಶಾಕ್..?
ನ್ಯೂಜಿಲೆಂಡ್ ಎದುರಿನ ವೈಟ್ವಾಶ್ ಅಪಮಾನಕ್ಕೆ ಅಸಮಾಧಾನಗೊಂಡ ಬಿಸಿಸಿಐ, ಸೂಪರ್ ಸೀನಿಯರ್ಸ್ಗೆ ಶಾಕ್ ನೀಡಲು ಮುಂದಾಗಿದೆ. ಸರಣಿಯಲ್ಲಿ ವೈಫಲ್ಯ ಅನುಭವಿಸಿದ್ದ ನಾಯಕ ರೋಹಿತ್, ಕೊಹ್ಲಿ, ಜಡೇಜಾ, ಅಶ್ವಿನ್ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಬಿಸಿಸಿಐ, ಶೀಘ್ರವೇ ಈ ನಾಲ್ವರ ಭವಿಷ್ಯದ ಬಗ್ಗೆ ಬಿಗ್ ಡಿಸಿಷನ್ ಕೈಗೊಳ್ಳುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯತಂತ್ರಕ್ಕೆ ಕೈಹಾಕಿದೆ.
ಆಸ್ಟ್ರೇಲಿಯಾ ಸರಣಿ ಬಳಿಕ ಬಿಸಿಸಿಐ ಟಫ್ ಕಾಲ್..!
ಮುಂದಿನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸೈಕಲ್ಗಾಗಿ ಯುವ ಟೆಸ್ಟ್ ತಂಡ ಕಟ್ಟುವ ಲೆಕ್ಕಾಚಾರದಲ್ಲಿರುವ ಬಿಸಿಸಿಐ, ಆಸ್ಟ್ರೇಲಿಯಾ ಎದುರಿನ ಸರಣಿ ತನಕ ಕಾದು ನೋಡುವ ತಂತ್ರ ಅನುಸರಿಸಲಿದೆ. ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಫಲಿತಾಂಶದ ಮೇಲೆ ಈ ನಾಲ್ವರ ಭವಿಷ್ಯ ನಿಂತಿದೆ. ಒಮ್ಮೆಲೆ ನಾಲ್ವರನ್ನ ತಂಡದಿಂದ ಹೊರಗಿಡದಿದ್ದರು, ಇಬ್ಬರಿಗೆ ಗೇಟ್ ಪಾಸ್ ನೀಡುವುದು ಫಿಕ್ಸ್ ಎನ್ನಲಾಗ್ತಿದೆ.
ಇದನ್ನೂ ಓದಿ: ನಟ ನಾಗಚೈತನ್ಯ, ಶೋಭಿತಾ ಮದುವೆ ದಿನಾಂಕ ನಿಗದಿ.. ಡೆಸ್ಟಿನೇಶನ್ ವೆಡ್ಡಿಂಗ್ ಎಲ್ಲಿ?
WTC ಫೈನಲ್ ತಲುಪದಿದ್ರೆ ನಾಲ್ವರ ಭವಿಷ್ಯ ಖತಂ!
ಟೀಮ್ ಇಂಡಿಯಾದ ವಿಶ್ವ ಟೆಸ್ಟ್ ಚಾಂಪಿಯನ್ಶಿಫ್ ಫೈನಲ್ ಕನಸು ಬಹುತೇಕ ಭಗ್ನಗೊಂಡಿದೆ. ಆದ್ರೆ, ಫೈನಲ್ ಹಾದಿ ಸಂಪೂರ್ಣ ಮುಚ್ಚಿಲ್ಲ ಎಂಬ ಭರವಸೆ ಇದೆ. ಹೀಗಾಗಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಫ್ ಫೈನಲ್ ಭವಿಷ್ಯದ ಮೇಲೆ ಸೀನಿಯರ್ಗಳ ಭವಿಷ್ಯ ನಿಂತಿದೆ. ಟೀಮ್ ಇಂಡಿಯಾ WTC ಫೈನಲ್ ತಲುಪಲು ವಿಫಲಗೊಂಡರೆ, ಆಸ್ಟ್ರೇಲಿಯಾದಲ್ಲೇ ಹಿರಿಯ ಆಟಗಾರರ ಟೆಸ್ಟ್ ವೃತ್ತಿ ಬದುಕು ಅಂತ್ಯಗೊಂಡರು ಅಚ್ಚರಿ ಇಲ್ಲ.
ಕೊಹ್ಲಿ, ರೋಹಿತ್, ಜಡೇಜಾ, ಅಶ್ವಿನ್ ವಯಸ್ಸು 35 ದಾಟಿದೆ. ಪ್ರದರ್ಶನ ಕುಸಿದಿದೆ. ಮತ್ತೊಂದೆಡೆ ಯುವ ಆಟಗಾರರು ಟೀಮ್ ಇಂಡಿಯಾ ಕದ ತಟ್ಟುತ್ತಿದ್ದಾರೆ. ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್ ಸೇರಿದಂತೆ ಹಲವರು ಸಾಮರ್ಥ್ಯ ಸಾಬೀತು ಮಾಡ್ತಿದ್ದಾರೆ. ಹೀಗಾಗಿ 2025ರ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಹಿರಿಯರನ್ನ ಕೈಬಿಟ್ಟು, ಕಿರಿಯರಿಗೆ ಮಣೆ ಹಾಕುವ ಚಿಂತನೆ ಬಿಸಿಸಿಐಗಿದೆ. ಆದ್ರೆ, ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್, ಗೌತಮ್ ಗಂಭೀರ್ ಮೇಲೆ ಎಲ್ಲವೂ ನಿಂತಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ