/newsfirstlive-kannada/media/post_attachments/wp-content/uploads/2024/03/PANDYA-2.jpg)
ಹಿಂದಿನ ಎರಡು ಸೀಸನ್​​ಗಳಲ್ಲಿ ಗುಜರಾತ್ ಟೈಟನ್ಸ್ ತಂಡದ ಕ್ಯಾಪ್ಟನ್ ಆಗಿದ್ದ ಹಾರ್ದಿಕ್ ಪಾಂಡ್ಯ ಈಗ ಮುಂಬೈ ಇಂಡಿಯನ್ಸ್​​ ನಾಯಕ. ರೋಹಿತ್ ಶರ್ಮಾಗೆ ಕೊಕ್ ನೀಡಿ, ಪಾಂಡ್ಯಗೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಕ್ಯಾಪ್ಟನ್ಸಿ ಪಟ್ಟ ಕಟ್ಟಿರೋದು ಭಾರೀ ವಿವಾದಕ್ಕೆ ಕಾರಣವಾಗಿತ್ತು.
/newsfirstlive-kannada/media/post_attachments/wp-content/uploads/2024/04/Surya_Rohit.jpg)
ಆದರೆ ಕ್ಯಾಪ್ಟನ್ಸಿ ಕಳೆದುಕೊಂಡಿದ್ದ ರೋಹಿತ್ ಶರ್ಮಾ, ಇಲ್ಲಿಯವರೆಗೂ ತುಟಿ ಬಿಚ್ಚಿರಲಿಲ್ಲ. ಇದೀಗ ರೋಹಿತ್ ಶರ್ಮಾ, ನಾಯಕತ್ವ ಕಳೆದುಕೊಂಡ ಬಗ್ಗೆ ಮಾತನಾಡಿದ್ದಾರೆ. ರೋಹಿತ್ ಶರ್ಮಾ ಹೇಳಿದ್ದು ಏನೆಂದರೆ.. ‘‘ನೋಡಿ.. ಇದು ಜೀವನದ ಒಂದು ಭಾಗ. ನಾವು ಅಂದುಕೊಂಡಂತೆ ಎಲ್ಲವೂ ನಡೆಯುವುದಿಲ್ಲ. ಇದೊಂದು ಒಳ್ಳೆಯ ಅನುಭವ’’ ಎಂದಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಮೀನು ತಿಂದು ಇಬ್ಬರು ಸಾವು.. ಗ್ರಾಮದ 15 ಮಂದಿ ಅಸ್ವಸ್ಥ, ಭಾರೀ ಆತಂಕ
/newsfirstlive-kannada/media/post_attachments/wp-content/uploads/2024/03/Hardik_Rohit-IPL.jpg)
ಮೊದಲು ನಾನು ಕೂಡ ನಾಯಕನಾಗಿರಲಿಲ್ಲ. ನಾನು ಬಹಳಷ್ಟು ನಾಯಕರ ಅಡಿಯಲ್ಲಿ ಆಡಿದ್ದೇನೆ. ಇದು ನನಗೆ ಭಿನ್ನವಾಗಿಲ್ಲ ಅಥವಾ ಹೊಸದಲ್ಲ. ಭಾರತಕ್ಕಾಗಿ ಮಹೇಂದ್ರ ಸಿಂಗ್ ಧೋನಿ, ವೀರೇಂದ್ರ ಸೆಹ್ವಾಗ್ ಮತ್ತು ವಿರಾಟ್ ಕೊಹ್ಲಿ ಅಡಿಯಲ್ಲಿ ಆಡಿದ್ದೇನೆ. ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಆಡಮ್ ಗಿಲ್‌ಕ್ರಿಸ್ಟ್, ಹರ್ಭಜನ್ ಸಿಂಗ್ ಮತ್ತು ರಿಕಿ ಪಾಂಟಿಂಗ್ ನೇತೃತ್ವದಲ್ಲಿ ಆಡಿದ್ದೇನೆ ಅಂತಾ ಹೇಳಿದ್ದಾರೆ.
ಇದನ್ನೂ ಓದಿ:ಮಳೆಯ ಬಗ್ಗೆ ಬಿಗ್ ಅಪ್​ಡೇಟ್.. ಮುಂದಿನ ನಾಲ್ಕು ದಿನ ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ..!
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us