ಕೊಹ್ಲಿ ವಿರುದ್ಧ ಜನ ಭಾರೀ ಆಕ್ರೋಶ.. ಆದರೂ ಸ್ನೇಹಿತನ ಬಿಟ್ಟು ಕೊಡದ ಕ್ಯಾಪ್ಟನ್ ರೋಹಿತ್ ಶರ್ಮಾ

author-image
Ganesh
Updated On
ರೋಹಿತ್​​ಗೆ ಇವತ್ತು ಈ ಆಟಗಾರನದ್ದೇ ಚಿಂತೆ.. ವಿಶ್ವಕಪ್​ ಗೆಲ್ಲಬೇಕು ಅಂದ್ರೆ ಆತ ಆಡಲೇಬೇಕು..!
Advertisment
  • ಟಿ20 ಸೆಮಿ ಫೈನಲ್​​​ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಗೆಲುವು
  • 68 ರನ್​ಗಳಿಂದ ಇಂಗ್ಲಿಷರ ಬಗ್ಗು ಬಡಿದ ಭಾರತ ತಂಡ
  • ಕೊಹ್ಲಿ ಕಳಪೆ ಫಾರ್ಮ್​ ಕಂಟಿನ್ಯೂ, ಬೆಂಬಲಕ್ಕೆ ನಿಂತ ರೋಹಿತ್

ಟಿ-20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ 68 ರನ್‌ಗಳಿಂದ ಇಂಗ್ಲೆಂಡ್ ಸೋಲಿಸಿದೆ. ಈ ಮೂಲಕ ಭಾರತ ಫೈನಲ್ ತಲುಪಿದೆ. ಫೈನಲ್‌ನಲ್ಲಿ ಮಾರ್ಕ್ರಾಮ್ ನೇತೃತ್ವದ ದಕ್ಷಿಣ ಆಫ್ರಿಕಾ ತಂಡವನ್ನು ಟೀಂ ಇಂಡಿಯಾ ಎದುರಿಸಲಿದೆ.

ಟೀಂ ಇಂಡಿಯಾ ಫೈನಲ್ ಪ್ರವೇಶ ಮಾಡಿದ್ದರೂ, ರೋಹಿತ್ ಶರ್ಮಾಗೆ ವಿರಾಟ್ ಕೊಹ್ಲಿ ಫಾರ್ಮ್​​ ಹೆಚ್ಚು ಚಿಂತೆಯನ್ನುಂಟು ಮಾಡಿದೆ. ಇಂಗ್ಲೆಂಡ್ ವಿರುದ್ಧ ಕೊಹ್ಲಿ 9 ರನ್​ಗಳಿಸಿ ಔಟ್ ಆದರು. ಈ ಬೆನ್ನಲ್ಲೇ ವಿಶ್ವಕಪ್​​ನಲ್ಲಿ ಹೀನಾಯ ಪ್ರದರ್ಶ ಮಾಡ್ತಿರುವ ವಿರಾಟ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ:ಟಿ20 ವಿಶ್ವಕಪ್​ನಲ್ಲಿ ಭಾರತ ಫೈನಲ್​​​ಗೆ ಎಂಟ್ರಿ.. ಪಾಕಿಸ್ತಾನ ಹೇಳಿದ್ದೇನು.. ವಿಡಿಯೋ ವೈರಲ್..!

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ರೋಹಿತ್ ಶರ್ಮಾಗೆ ಪ್ರಶ್ನೆ ಮಾಡಿದ್ದವು. ಆದರೆ ರೋಹಿತ್ ಶರ್ಮಾ ವಿರಾಟ್ ಕೊಹ್ಲಿಯನ್ನು ಸಮರ್ಥಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಗುಣಮಟ್ಟದ ಆಟಗಾರ. ಎಲ್ಲ ಆಟಗಾರರು ಕೆಲವು ಸಂದರ್ಭದಲ್ಲಿ ಕಳೆಪ ಫಾರ್ಮ್​​ಗೆ ಕುಸಿಯುತ್ತಾರೆ. ಇದು ನಮಗೆ ಗೊತ್ತಿರುವ ವಿಚಾರ. ದೊಡ್ಡ ಪಂದ್ಯಗಳಲ್ಲಿ ಅವರ ಪ್ರಾಮುಖ್ಯತೆಯನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಕೊಹ್ಲಿಗೆ ಫಾರ್ಮ್ ಎಂದಿಗೂ ಸಮಸ್ಯೆಯಾಗಿರಲಿಲ್ಲ. ನೀವು 15 ವರ್ಷಗಳಿಂದ ಕ್ರಿಕೆಟ್ ಆಡಿದಾಗ ಮತ್ತೆ ಫಾರ್ಮ್ ಗೆ ಮರಳೋದು ದೊಡ್ಡ ಸಮಸ್ಯೆ ಅಲ್ಲ. ಅವರು ಉತ್ತಮವಾಗಿ ಕಾಣುತ್ತಿದ್ದಾರೆ. ಅವರ ಉದ್ದೇಶಗಳು ಒಂದೇ ಆಗಿದೆ. ಬಹುಶಃ ಫೈನಲ್​​ನಲ್ಲಿ ಸ್ಫೋಟಕ ಬ್ಯಾಟಿಂಗ್ ಆಡಬಹುದು. ನಾವು ಖಂಡಿತವಾಗಿಯೂ ಫೈನಲ್‌ಗೆ ಕೊಹ್ಲಿಯನ್ನು ಬೆಂಬಲಿಸುತ್ತೇವೆ ಎಂದಿದ್ದಾರೆ. ನಾಳೆ ಟಿ20 ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ.

ಇದನ್ನೂ ಓದಿ:Watch: ಫೈನಲ್ ಪ್ರವೇಶ ಮಾಡ್ತಿದ್ದಂತೆ ರೋಹಿತ್ ಕಣ್ಣಲ್ಲಿ ಬಿಕ್ಕಿಬಿಕ್ಕಿ ಬಂತು ಕಣ್ಣೀರು.. ಬೆನ್ನುತಟ್ಟಿ ಹಾರೈಸಿದ ಕೊಹ್ಲಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment