/newsfirstlive-kannada/media/post_attachments/wp-content/uploads/2024/05/Rohit-sharma-3.jpg)
ನಿನ್ನೆ ವಾಂಖೆಡೆ ಮೈದಾನದಲ್ಲಿ ನಡೆದ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಮುಂಬೈ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಆಳುತ್ತಿರುವ ದೃಶ್ಯ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದೆ.
ಸನ್ರೈಸರ್ಸ್ ವಿರುದ್ಧ ರೋಹಿತ್ ಶರ್ಮಾ 5 ಎಸೆತ ಎದುರಿಸಿ ಒಂದು ಬೌಂಡರಿ ಬಾರಿಸಿದ್ದಾರೆ. ಆದರೆ 5ನೇ ಎಸತಕ್ಕೆ ಔಟ್ ಆಗುವ ಮೂಲಕ ಪೆವಿಲಿಯನತ್ತ ಸಾಗಿದರು. ಆದರೆ ಇದೇ ಬೇಸರದಿಂದ ರೋಹಿತ್ ಶರ್ಮಾ ಬೇಸರಗೊಂಡಿದ್ದಾರೆ ಎಂದು ಅಭಿಮಾನಿಗಳು ಅಂದಾಜಿಸಿದ್ದಾರೆ.
ರೋಹಿತ್ ಶರ್ಮಾ ಹೆನ್ರಿಚ್ ಕ್ಲಾಸಿನ್ ಎಸೆತಕ್ಕೆ ಬ್ಯಾಟ್ ಬೀಸಲು ಹೋಗಿ ಪ್ಯಾಟ್ ಕಮಿನ್ಸ್ಗೆ ಕ್ಯಾಚ್ ನೀಡಿ ಔಟಾದರು. ಕೊನೆಗೆ ಬೇಸರದಿಂದ ಡ್ರೆಸ್ಸಿಂಗ್ ರೂಮ್ಗೆ ಹೋದ ರೋಹಿತ್ ಶರ್ಮಾ ಅಲ್ಲಿ ಅತ್ತಿದ್ದಾರೆ. ಈ ದೃಶ್ಯ ಕ್ಯಾಮೆರಾ ಕಣ್ಣಿನಲ್ಲಿ ಕಂಡಿದೆ.
ಇದನ್ನೂ ಓದಿ: ಭರ್ಜರಿ ಸೆಂಚುರಿ ಸಿಡಿಸಿ ರೋಹಿತ್ ಶರ್ಮಾ ರೆಕಾರ್ಡ್ ಸರಿಗಟ್ಟಿದ ಮಿಸ್ಟರ್ 360 ಸೂರ್ಯ
Rohit Sharma crying in the dressing room. pic.twitter.com/GRU5uF3fpc
— Gaurav (@Melbourne__82)
Rohit Sharma crying in the dressing room. pic.twitter.com/GRU5uF3fpc
— Gaurav (@Melbourne__82) May 6, 2024
">May 6, 2024
ಇನ್ನು ನಿನ್ನೆ ನಡೆದ ಪಂದ್ಯದಲ್ಲಿ ಮುಂಬೈ ತಂಡ ಸನ್ರೈಸರ್ಸ್ ತಂಡವನ್ನು ಸೋಲಿಸಿದೆ. ಸೂರ್ಯ ಕುಮಾರ್ ಯಾದವ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡುವ ಮೂಲಕ ಶತಕ ಬಾರಿಸಿದ್ದಾರೆ. 51 ಎಸೆತ ಎದಿರಿಸಿದ ಅವರು 12 ಫೋರ್, 6 ಸಿಕ್ಸ್ ಬಾಋಇಸುವ ಮೂಲಕ 102 ರನ್ ಬಾರಿಸಿದ್ದಾರೆ.
ನಿನ್ನೆ ಹೈದರಾಬಾದ್ ವಿರುದ್ಧ ಮುಂಬೈ ಗೆಲ್ಲಲು ಸೂರ್ಯ ಮೊದಲ ಕಾರಣರಾಗಿದ್ದಾರೆ. ಹೀಗಾಗಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಟೀಂ 7 ವಿಕೆಟ್ ಜಯ ತನ್ನದಾಗಿಸಿಕೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ