newsfirstkannada.com

ಭರ್ಜರಿ ಸೆಂಚುರಿ ಸಿಡಿಸಿ ರೋಹಿತ್ ಶರ್ಮಾ ರೆಕಾರ್ಡ್​ ಸರಿಗಟ್ಟಿದ ಮಿಸ್ಟರ್​ 360 ಸೂರ್ಯ

Share :

Published May 7, 2024 at 8:52am

    ಹೈದ್ರಾಬಾದ್ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ ಸೂರ್ಯಕುಮಾರ್

    ಸಂಕಷ್ಟದಲ್ಲಿದ್ದ ಮುಂಬೈ ತಂಡವನ್ನ ಪಾರು ಮಾಡಿದ ಮಿಸ್ಟರ್ 360

    ತಂಡವನ್ನು ಗೆಲ್ಲಿಸಿದ್ದು, ಸೆಂಚುರಿ ಸಿಡಿಸಿದ್ದು ಆ ಒಂದೇ ಒಂದು ಸಿಕ್ಸರ್

ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​​ನ ಪಂದ್ಯದಲ್ಲಿ ಸನ್ ರೈಸರ್ಸ್​ ಹೈದ್ರಾಬಾದ್ ವಿರುದ್ಧ ಮುಂಬೈ ಇಂಡಿಯನ್ಸ್​ ಭರ್ಜರಿ 7 ವಿಕೆಟ್‌ಗಳ ಗೆಲುವು ಪಡೆದಿದೆ. ಮಿಸ್ಟರ್ 360 ಖ್ಯಾತಿಯ ಸೂರ್ಯಕುಮಾರ್ ಯಾದವ್ ಅವರ ಅಮೋಘ ಸೆಂಚುರಿಯಿಂದ ಹಾರ್ದಿಕ್ ಪಾಂಡ್ಯ ಪಡೆ ಗೆಲುವಿನ ನಗೆ ಬೀರಿತು.

174 ರನ್​ಗಳ ಗುರಿ ಬೆನ್ನಟ್ಟಿದ್ದ ಮುಂಬೈ ಟೀಮ್​ 31 ರನ್​ಗೆ ರೋಹಿತ್ ಶರ್ಮಾ ಸೇರಿ 3 ಪ್ರಮುಖ ವಿಕೆಟ್​ಗಳನ್ನ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಕ್ರೀಸ್​ಗೆ ಆಗಮಿಸಿದ ವಿಶ್ವದ ನಂಬರ್‌-1 ಟಿ20 ಬ್ಯಾಟರ್‌ ಸೂರ್ಯಕುಮಾರ್ ಆಕರ್ಷಕ ಬ್ಯಾಟಿಂಗ್‌ ನಡೆಸಿ ಈ ಟೂರ್ನಿಯಲ್ಲಿ ಫಸ್ಟ್ ಸೆಂಚುರಿ ಹಾಗೂ ಐಪಿಎಲ್‌ನಲ್ಲಿ 2ನೇ ಶತಕ ಸಿಡಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಕೇವಲ 51 ಎಸೆತಗಳಲ್ಲಿ 6 ಭರ್ಜರಿ ಸಿಕ್ಸರ್ ಹಾಗೂ 12 ಬೌಂಡರಿಗಳೊಂದಿಗೆ ಅಜೇಯ 102 ರನ್‌ಗಳನ್ನು ಸಿಡಿಸಿದರು.

ಇದನ್ನೂ ಓದಿ: ವೋಟರ್​ ID ಕಾರ್ಡ್​ ತಂದಿಲ್ಲ.. ಮಾಜಿ ಸಚಿವರನ್ನ ವಾಪಸ್ ಕಳಿಸಿದ ಚುನಾವಣಾ ಸಿಬ್ಬಂದಿ

ಇದನ್ನೂ ಓದಿ: ಲಾಯರ್ ಸಿಡಿಸಿರೋ ಬಾಂಬ್​​ಗೆ ಕಾಂಗ್ರೆಸ್​ ಕೋಟೆಯಲ್ಲಿ ನಡುಕ.. DCM ಬಗ್ಗೆ ದೇವರಾಜೇಗೌಡ ಗಂಭೀರ ಆರೋಪ

200ರ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ ಸೂರ್ಯ, 51 ಎಸೆತಗಳಲ್ಲಿ 12 ಫೋರ್, 6 ಆಕಾಶದೆತ್ತರ ಸಿಕ್ಸರ್‌ ಸಮೇತ 102 ರನ್‌ ಗಳಿಸುವ ಮೂಲಕ ಮುಂಬೈ ತಂಡವನ್ನು ಗೆಲ್ಲಿಸಿದರು. ಈ ಪಂದ್ಯದ 18ನೇ ಓವರ್​​ನಲ್ಲಿ ತಂಡದ ಗೆಲುವಿಗೆ 6 ರನ್ ಬೇಕಿದ್ದರೇ ಸೂರ್ಯ ಸೆಂಚುರಿಗೆ 4 ರನ್ ಬೇಕಿತ್ತು. ಈ ವೇಳೆ ಆಫ್​ ಸೈಡ್​ನಲ್ಲಿ ಸಖತ್ ಆಗಿರೋ ಸಿಕ್ಸರ್​ ಸಿಡಿಸಿದ ಸೂರ್ಯಕುಮಾರ್ ತಂಡದ ಗೆಲುವಿನೊಂದಿಗೆ ಶತಕ ಪೂರೈಸಿದರು. ಈ ಮೂಲಕ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ಪರ ರೋಹಿತ್‌ ಶರ್ಮಾ ನಂತರ 2 ಸೆಂಚುರಿ ಸಿಡಿಸಿದ 2ನೇ ಬ್ಯಾಟ್ಸ್​ಮನ್ ಸೂರ್ಯ ಆಗಿದ್ದಾರೆ. ಹೀಗಾಗಿ ಐಪಿಎಲ್​ನಲ್ಲಿ ಸೆಂಚುರಿ ಸಿಡಿಸಿದ ಸಾಲಿನಲ್ಲಿ ರೋಹಿತ್ ಜೊತೆ ಈಗ ಸೂರ್ಯ ಕೂಡ ಇರಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭರ್ಜರಿ ಸೆಂಚುರಿ ಸಿಡಿಸಿ ರೋಹಿತ್ ಶರ್ಮಾ ರೆಕಾರ್ಡ್​ ಸರಿಗಟ್ಟಿದ ಮಿಸ್ಟರ್​ 360 ಸೂರ್ಯ

https://newsfirstlive.com/wp-content/uploads/2024/05/SURYA_KUMAR.jpg

Load More