newsfirstkannada.com

2025ರ ಐಪಿಎಲ್; RCB ಟೀಮ್​ಗೆ ರೋಹಿತ್​ ಶರ್ಮಾ ಕ್ಯಾಪ್ಟನ್..!

Share :

Published April 17, 2024 at 10:18pm

Update April 17, 2024 at 10:22pm

  ಮುಂಬೈ ಇಂಡಿಯನ್ಸ್​ ಮಾಜಿ ಕ್ಯಾಪ್ಟನ್​ ರೋಹಿತ್​ ಶರ್ಮಾ ಬಗ್ಗೆ ಮತ್ತೆ ಭವಿಷ್ಯ

  ಭವಿಷ್ಯ ನುಡಿದ ಟೀಮ್​ ಇಂಡಿಯಾದ ಮಾಜಿ ಕ್ರಿಕೆಟರ್​​ ಅಂಬಾಟಿ ರಾಯುಡು!

  ರೋಹಿತ್ ಮುಂದಿನ​​ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಕ್ಯಾಪ್ಟನ್​ ಎಂದ್ರು

ಟೀಮ್​ ಇಂಡಿಯಾದ ಮಾಜಿ ಕ್ರಿಕೆಟರ್​​ ಅಂಬಾಟಿ ರಾಯುಡು ಮುಂಬೈ ಇಂಡಿಯನ್ಸ್​ ಮಾಜಿ ಕ್ಯಾಪ್ಟನ್​ ರೋಹಿತ್​ ಶರ್ಮಾ ಬಗ್ಗೆ ಮತ್ತೆ ಭವಿಷ್ಯ ನುಡಿದಿದ್ದಾರೆ. ಮುಂಬೈ ತಂಡದ ಕ್ಯಾಪ್ಟನ್ಸಿಯಿಂದ ಕೆಳಗಿಳಿಸಿದ ರೋಹಿತ್​ ಶರ್ಮಾ ಮುಂದಿನ ಸೀಸನ್​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಅಥವಾ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಸೇರೋ ಸಾಧ್ಯತೆ ಇದೆ ಎಂದಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ರೋಹಿತ್ ಬದಲಿಗೆ ಹಾರ್ದಿಕ್ ಪಾಂಡ್ಯಗೆ ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್​ ಕ್ಯಾಪ್ಟನ್ಸಿ ನೀಡಿದೆ. ಬರೋಬ್ಬರಿ 5 ಬಾರಿ ಟ್ರೋಫಿ ಗೆಲ್ಲಿಸಿದ್ದ ರೋಹಿತ್​​ ಶರ್ಮಾ ಅವರನ್ನು ಕೆಟ್ಟದಾಗಿ ನಡೆಸಿಕೊಂಡ ಮುಂಬೈ ಇಂಡಿಯನ್ಸ್​​​ ವಿರುದ್ಧ ಫ್ಯಾನ್ಸ್​ ಆಕ್ರೋಶ ಹೊರಹಾಕಿದ್ದರು. ರೋಹಿತ್​ ಪತ್ನಿ ರಿತಿಕಾ ಕೂಡ ಇನ್​​ಸ್ಟಾದಲ್ಲಿ ಅಸಮಾಧಾನ ಹೊರಹಾಕಿದ್ದರು.

ಈ ಮಧ್ಯೆ ಮಾತಾಡಿರೋ ಅಂಬಾಟಿ ರಾಯುಡು ರೋಹಿತ್ ವಿಚಾರದಲ್ಲಿ ಮುಂಬೈ ಇಂಡಿಯನ್ಸ್​ ಆತುರದ ನಿರ್ಧಾರ ತೆಗೆದುಕೊಂಡಿದೆ. ರೋಹಿತ್ ಈ ವರ್ಷ ನಾಯಕನಾಗಿ ಮುಂದುವರಿಯಬೇಕಿತ್ತು. ಮುಂದಿನ ಸೀಸನ್​ಗೆ ಹಾರ್ದಿಕ್​ಗೆ ಜವಾಬ್ದಾರಿ ನೀಡಬಹುದಿತ್ತು. ಈಗ ರೋಹಿತ್​ ಮನಸ್ಸು ಬದಲಾಗಿದೆ. 2025ರ ಸೀಸನ್​ನಲ್ಲಿ ಸಿಎಸ್​ಕೆ ತಂಡದಿಂದ ಧೋನಿ, ಆರ್​​ಸಿಬಿಯಿಂದ ಫಾಫ್​ ರಿಟೈರ್​ ಆಗಲಿದ್ದಾರೆ. ಆಗ ಈ ಎರಡು ತಂಡಗಳಲ್ಲಿ ಒಂದಕ್ಕೆ ರೋಹಿತ್​ ಕ್ಯಾಪ್ಟನ್​ ಆಗಿ ಇನ್ನೊಂದು 4 ವರ್ಷ ಐಪಿಎಲ್​ ಆಡಲಿದ್ದಾರೆ ಎಂದರು.

ಇದನ್ನೂ ಓದಿ: ಟಿ20 ವಿಶ್ವಕಪ್​ಗೆ ಮುನ್ನವೇ ಕೆ.ಎಲ್​ ರಾಹುಲ್​​, ಪಂತ್​​ಗೆ ಬಿಗ್​ ಶಾಕ್​ ಕೊಟ್ಟ ಬಿಸಿಸಿಐ!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

2025ರ ಐಪಿಎಲ್; RCB ಟೀಮ್​ಗೆ ರೋಹಿತ್​ ಶರ್ಮಾ ಕ್ಯಾಪ್ಟನ್..!

https://newsfirstlive.com/wp-content/uploads/2023/12/Rohit_Kohli-IPL-RCB.jpg

Load More