ಆಗಸ್ಟ್ 30ನೇ ತಾರೀಕಿನಿಂದಲೇ 2023 ಏಷ್ಯಾಕಪ್ ಸ್ಟಾರ್ಟ್
ಸೆಪ್ಟೆಂಬರ್ 2ಕ್ಕೆ ಟೀಂ ಇಂಡಿಯಾ, ಪಾಕಿಸ್ತಾನ ಮುಖಾಮುಖಿ
ಪಾಕ್ ತಂಡಕ್ಕೆ ಕ್ಯಾಪ್ಟನ್ ರೋಹಿತ್ ವಾರ್ನಿಂಗ್ ಕೊಟ್ಟಿದ್ದೇಕೆ?
ಬಹುನಿರೀಕ್ಷಿತ 2023 ಏಷ್ಯಾಕಪ್ ಟೂರ್ನಿ ಆಗಸ್ಟ್ 30ನೇ ತಾರೀಕಿನಿಂದಲೇ ಶುರುವಾಗಲಿದೆ. ಹೀಗಾಗಿ ಇಡೀ ಕ್ರೀಡಾ ಜಗತ್ತೇ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕಾಗಿ ಕಾತುರದಿಂದ ಕಾಯುತ್ತಿದೆ. ಸೆಪ್ಟೆಂಬರ್ 2ನೇ ತಾರೀಕು ಪಲ್ಲೆಕೆಲೆ ಮೈದಾನದಲ್ಲಿ ನಡೆಯಲಿರೋ ಈ ಬಿಗ್ ಮ್ಯಾಚ್ಗಾಗಿ ಟೀಂ ಇಂಡಿಯಾ, ಪಾಕ್ ಆಟಗಾರರು ಭರ್ಜರಿ ತಯಾರಿ ನಡೆಸಿಕೊಂಡಿದ್ದಾರೆ. ಟೀಂ ಇಂಡಿಯಾ ಆಟಗಾರರು ಆರು ದಿನಗಳ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಲೂರು ಕ್ಯಾಂಪಸ್ನಲ್ಲಿ ಸೇರಿರೋ ಆಟಗಾರರು ಅಂತಿಮ ತಯಾರಿ ನಡೆಸುತ್ತಿದ್ದಾರೆ. ಈ ಮಧ್ಯೆ ಪಾಕ್ ತಂಡಕ್ಕೆ ಟೀಂ ಇಂಡಿಯಾದ ಸ್ಕಿಪರ್ ರೋಹಿತ್ ಶರ್ಮಾ ವಾರ್ನಿಂಗ್ ಕೊಟ್ಟಿದ್ದಾರೆ.
ನಾನು ಎಂದಿಗೂ ನನ್ನ ಬ್ಯಾಟಿಂಗ್ ಶೈಲಿ ಬದಲಿಸುವುದಿಲ್ಲ. ಮೂರು ವರ್ಷಗಳ ಹಿಂದೆ ನನ್ನ ಕರಿಯರ್ ಸ್ಟ್ರೈಕ್ ರೇಟ್ ಕೇವಲ 90 ಇತ್ತು. ಈಗ ನೀವು ನೋಡಿದ್ರೆ ಅದು 110 ದಾಟಿದೆ. 110 ಸ್ಟ್ರೈಕ್ ರೇಟ್ ಜತೆ 55 ಆವರೇಜ್ ಸಾಧ್ಯವಿಲ್ಲ. ಹೀಗಾಗಿ ನಾನು ಬಿಗ್ ಸ್ಕೋರ್ ಮಾಡಲು ಸಾಧ್ಯವಾಗುತ್ತಿಲ್ಲ. ನಾನು ಪವರ್ ಹಿಟ್ಟಿಂಗ್ ಬ್ಯಾಟಿಂಗ್ ಮಾಡೋದು. ಈ ಬಗ್ಗೆ ನಾನು ಮ್ಯಾನೇಜ್ಮೆಂಟ್ಗೆ ಹೇಳಿದ್ದೇನೆ. ಪಾಕ್ ವಿರುದ್ಧದ ಪಂದ್ಯದಲ್ಲೂ ನಾನು ರಿಸ್ಕ್ ತೆಗೆದುಕೊಂಡು ಪವರ್ ಹಿಟ್ ಮಾಡಲಿದ್ದೇನೆ ಎಂದರು.
ಆವರೇಜ್ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದ ರೋಹಿತ್
ಇದು ನನ್ನ ಆಯ್ಕೆ. ನಾನು ಏನಾದ್ರೂ ಹೊಸದಾಗಿ ಟ್ರೈ ಮಾಡಬೇಕು ಎಂದಿದ್ದೇನೆ. ನನ್ನ ಫಲಿತಾಂಶ ನನಗೆ ಖುಷಿ ಕೊಡುತ್ತಿದೆ. ಎಲ್ಲರಿಗೂ ಕ್ರೀಸ್ನಲ್ಲಿ ಹೆಚ್ಚು ಸಮಯ ಕಳೆಯಬೇಕು, 150 ರನ್ ಸ್ಕೋರ್ ಮಾಡಬೇಕು ಎಂದು ಇರುತ್ತದೆ. ನಾನು ನನ್ನ ಆವರೇಜ್ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ನಾನು ಅಗ್ರೆಸ್ಸಿವ್ ಆಗಿ ಬ್ಯಾಟಿಂಗ್ ಮಾಡುತ್ತೇನೆ ಎಂದು ಹೇಳಿದರು. ಈ ಮೂಲಕ ಪಾಕ್ ತಂಡಕ್ಕೆ ಎಚ್ಚರಿಕೆ ನೀಡಿದ್ದರು.
ಭಾರತ, ಪಾಕ್ ನಡುವಿನ ಪಂದ್ಯ ಎಂದರೆ ಜನಕ್ಕೆ ಕ್ರೇಜ್. ಕಾರಣ ಪಂದ್ಯ ಫ್ಯಾನ್ಸ್ಗೆ ಅಷ್ಟು ಕಿಕ್ ನೀಡಲಿದೆ. ಕೇವಲ ಭಾರತ, ಪಾಕ್ ಮಾತ್ರವಲ್ಲ ಇಡೀ ಕ್ರೀಡಾ ಜಗತ್ತೇ ಈ ಬಿಗ್ ಮ್ಯಾಚ್ ನೋಡುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ