Advertisment

ನಿನ್ನೆಯ ಪಂದ್ಯದಲ್ಲೂ ಪ್ರಮಾದ.. ಮೈದಾನಕ್ಕೆ ನುಗ್ಗಿದ ಅಭಿಮಾನಿ ಕಂಡು ಹೌಹಾರಿದ ರೋಹಿತ್ ಶರ್ಮಾ -VIDEO

author-image
Ganesh
Updated On
ನಿನ್ನೆಯ ಪಂದ್ಯದಲ್ಲೂ ಪ್ರಮಾದ.. ಮೈದಾನಕ್ಕೆ ನುಗ್ಗಿದ ಅಭಿಮಾನಿ ಕಂಡು ಹೌಹಾರಿದ ರೋಹಿತ್ ಶರ್ಮಾ -VIDEO
Advertisment
  • ಐಪಿಎಲ್​ ಪಂದ್ಯಗಳಲ್ಲಿ ಪದೆ ಪದೇ ಭದ್ರತಾ ಲೋಪ ಆಗ್ತಿರೋದೇಕೆ?
  • ಮೊನ್ನೆ ಬೆಂಗಳೂರಲ್ಲಿ ಹೈಡ್ರಾಮಾ ಸೃಷ್ಟಿಸಿದ್ದ ಕಿಂಗ್ ಕೊಹ್ಲಿಯ ಅಭಿಮಾನಿ
  • ಕೊಹ್ಲಿ ಅಭಿಮಾನಿಗೆ ಬಿದ್ದಂತೆ ರೋಹಿತ್ ಫ್ಯಾನ್​ಗೂ ಬಿದ್ವಾ ಒದೆಗಳು..?

ಐಪಿಎಲ್​​ ಪಂದ್ಯಗಳ ವೇಳೆ ನಡೆಯುತ್ತಿರುವ ಭದ್ರತಾ ಲೋಪ ಮುಂದುವರಿದಿದೆ. ಮೊನ್ನೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ ಅಭಿಮಾನಿ ಮೈದಾನಕ್ಕೆ ನುಗ್ಗಿ ಹೈಡ್ರಾಮಾ ಸೃಷ್ಟಿಸಿದ್ದ. ಅದಾದ ನಂತರ ಆತನಿಗೆ ಬಿಸಿಬಿಸಿ ಬಾಸುಂಡೆಗಳು ಬಿದ್ದಿದ್ದವು. ಇದೀಗ ಮತ್ತೆ ಅಂತಹುದೇ ಒಂದು ಪ್ರಮಾದ ನಡೆದಿದೆ.

Advertisment

ಐಪಿಎಲ್​​ನ 14ನೇ ಪಂದ್ಯವು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿತ್ತು. ಮುಂಬೈ ಇಂಡಿಯನ್ಸ್​ ಮತ್ತು ರಾಜಸ್ಥಾನ್ ರಾಯಲ್ಸ್​​ ನಡುವೆ ನಡೆದ ಪಂದ್ಯದ ವೇಳೆ ರೋಹಿತ್ ಶರ್ಮಾ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿಬಿಟ್ಟಿದ್ದಾನೆ. ಮುಂಬೈ ಇಂಡಿಯನ್ಸ್ ಬ್ಯಾಟಿಂಗ್​ ಮಾಡ್ತಿದ್ದ ವೇಳೆ ಓಡಿ ಬಂದು ರೋಹಿತ್ ಶರ್ಮಾರನ್ನ ತಬ್ಬಿಕೊಂಡಿದ್ದಾರೆ.

ಇದನ್ನೂ ಓದಿ: ನಿರಾಸೆ ಮಾಡಲಿಲ್ಲ ಧೋನಿ; ಒಂದೇ ಕೈಯಲ್ಲಿ ಅದ್ಭುತ ಸಿಕ್ಸರ್ ಸಿಡಿಸಿದ ವಿಡಿಯೋ

ಫ್ಯಾನ್ಸ್ ಓಡಿ ಬರ್ತಿರೋದು ಗೊತ್ತಾಗ್ತಿದ್ದಂತೆ ಒಂದು ಕ್ಷಣ ರೋಹಿತ್ ದಂಗಾಗಿದ್ದಾನೆ. ರೋಹಿತ್ ತಬ್ಬಿಕೊಂಡ ಆತ ಇಶಾನ್ ಕಿಶನ್​ರನ್ನೂ ತಬ್ಬಿಕೊಂಡಿದ್ದಾನೆ. ವಿಶೇಷ ಅಂದ್ರೆ ಇಶಾನ್ ಕಿಶನ್ ಕೂಡ ಆತನನ್ನು ತಬ್ಬಿ ಶೇಖ್​ ಹ್ಯಾಂಡ್ ಮಾಡಿದ್ದಾನೆ. ಅದೇ ಖುಷಿಯಲ್ಲಿ ಹುಚ್ಚು ಅಭಿಮಾನಿ, ಮೈದಾನದಲ್ಲಿ ಸಂಭ್ರಮಿಸುತ್ತ ಓಡಿ ಬಂದಿದ್ದಾನೆ. ಕೊನೆಗೆ ಭದ್ರತಾ ಸಿಬ್ಬಂದಿ ಅಲ್ಲಿಗೆ ಓಡಿ ಬಂದು ವಶಕ್ಕೆ ಪಡೆದಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment