newsfirstkannada.com

ಶಿವಮೊಗ್ಗದಲ್ಲಿ ಹಾಡಹಗಲೇ ಗ್ಯಾಂಗ್ ವಾರ್​; ಸ್ಥಳದಲ್ಲೇ ರೌಡಿಶೀಟರ್​​ ಸೇರಿ ಇಬ್ಬರು ಸಾವು

Share :

Published May 8, 2024 at 7:58pm

  ಶೋಹೆಬ್ ಮೇಳೆ ಏಕಾಏಕಿ ಪ್ರತಿದಾಳಿ ಮಾಡಿದ ಯಾಸೀನ್ ಕುರೇಶಿ ಗ್ಯಾಂಗ್

  ಮಾರಕಾಸ್ತ್ರ, ಚಪ್ಪಡಿ ಕಲ್ಲು, ಸೈಕಲ್, ಬ್ಯಾಟ್, ಲಾಂಗು, ಮಚ್ಚುಗಳಿಂದ ಭೀಕರ ಹತ್ಯೆ

  ಘಟನಾ ಸ್ಥಳಕ್ಕೆ ಕೋಟೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ

ಶಿವಮೊಗ್ಗ: ಹಾಡಹಗಲೇ ನಡುರಸ್ತೆಯಲ್ಲೇ ಇಬ್ಬರು ಯುವಕನ್ನು ಬರ್ಬರವಾಗಿ ಹತ್ಯೆ ಮಾಡಿರೋ ಘಟನೆ ಲಷ್ಕರ್ ಮೊಹಲ್ಲಾ ಸರ್ಕಲ್ ಬಳಿ ನಡೆದಿದೆ. ಶೋಹೆಬ್ ಅಲಿಯಾಸ್​​ ಸೇಬು ಭೀಕರವಾಗಿ ಹತ್ಯೆಯಾದ ರೌಡಿ ಶೀಟರ್. ಹತ್ಯೆಯಾದ ಇನ್ನೊಬ್ಬನ ಗುರುತನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ.

ರೌಡಿ ಶೀಟರ್ ಶೋಹೆಬ್ ಮೇಲೆ ಯಾಸೀನ್ ಕುರೇಶಿ ಗ್ಯಾಂಗ್ ಅಟ್ಯಾಕ್ ಮಾಡಿದೆ. ಈ ವೇಳೆ ಶೋಹೆಬ್ ಮೇಲೆ ಮಾರಕಾಸ್ತ್ರಗಳಿಂದ ಅಟ್ಯಾಕ್​ ಮಾಡಿ ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಭೀಕರ ಹತ್ಯೆ ಮಾಡಲಾಗಿದೆ. ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆದರೆ ರೌಡಿ ಶೀಟರ್ ಯಾಸೀನ್ ಕುರೇಶಿ ಜಸ್ಟ್​ ಮಿಸ್​ ಆಗಿದ್ದಾನೆ. ರೌಡಿ ಶೀಟರ್ ಯಾಸೀನ್ ಕುರೇಶಿಗೂ ಕೂಡ ಗಂಭೀರ ಗಾಯಗಳಾಗಿವೆ. ಕೂಡಲೇ ಯಾಸೀನ್ ಕುರೇಶಿನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಪುಷ್ಪ ಸಿನಿಮಾದಿಂದ ನನ್ನ ಜೀವನ ಬದಲಾಗಿಲ್ಲ, ನನಗೇನು ಸಿಕ್ಕಿಲ್ಲ; ಫಾಹದ್ ಫಾಸಿಲ್ ಹೀಗ್ಯಾಕಂದ್ರು?

ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಕೋಟೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಘಟನಾ ಸ್ಥಳದಲ್ಲಿ ಪೊಲೀಸ್ ಬೀಗಿ ಬಂದೋಬಸ್ತ್ ಕಲ್ಪಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಿವಮೊಗ್ಗದಲ್ಲಿ ಹಾಡಹಗಲೇ ಗ್ಯಾಂಗ್ ವಾರ್​; ಸ್ಥಳದಲ್ಲೇ ರೌಡಿಶೀಟರ್​​ ಸೇರಿ ಇಬ್ಬರು ಸಾವು

https://newsfirstlive.com/wp-content/uploads/2024/05/smg1.jpg

Load More