ಮೊದಲ ಐಪಿಎಲ್ನಲ್ಲಿ ಚೆನ್ನೈಗೆ ಆರ್ಸಿಬಿ ಸಾಧಾರಣ ಟಾರ್ಗೆಟ್
ಆರ್ಸಿಬಿ ಪರ ದಿನೇಶ್ ಕಾರ್ತಿಕ್, ಅನೂಜ್ ರಾವತ್ ಭರ್ಜರಿ ಬ್ಯಾಟಿಂಗ್
ಸಿಎಸ್ಕೆಗೆ ಬರೋಬ್ಬರಿ 174 ರನ್ಗಳ ಟಾರ್ಗೆಟ್ ನೀಡಿದ ಬೆಂಗಳೂರು!
ಇಂದು ಚೆನ್ನೈ ಇಂಟರ್ ನ್ಯಾಷನಲ್ ಸ್ಟೇಡಿಯಮ್ನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಾಧಾರಣ ಮೊತ್ತದ ಟಾರ್ಗೆಟ್ ಕೊಟ್ಟಿದೆ. ಸಿಎಸ್ಕೆಗೆ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 174 ರನ್ಗಳ ಗುರಿ ನೀಡಿದೆ.
ಟಾಸ್ ಗೆದ್ದು ಫಸ್ಟ್ ಬ್ಯಾಟಿಂಗ್ ಮಾಡಿದ ಆರ್ಸಿಬಿ ಪರ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ಭರ್ಜರಿ ಬ್ಯಾಟಿಂಗ್ ಮಾಡಿದ್ರು. ಕೇವಲ 23 ಬಾಲ್ನಲ್ಲಿ ಬರೋಬ್ಬರಿ 8 ಫೋರ್ ಸಮೇತ 35 ರನ್ ಚಚ್ಚಿದ್ರು. ಬೌಂಡರಿ ಬಾರಿಸಲು ಹೋದ ಫಾಫ್ ರಾಚಿನ್ ರವೀಂದ್ರಗೆ ಕ್ಯಾಚ್ ನೀಡಿದ್ರು.
ಫಾಫ್ ಡುಪ್ಲೆಸಿಸ್ ಔಟಾದ ಬಳಿಕ ಕ್ರೀಸ್ಗೆ ಬಂದ ರಜತ್ ಪಾಟಿದಾರ್ ಕೇವಲ ಮೂರು ಬಾಲ್ ಆಡಿ ಮುಸ್ತಾಫಿಜುರ್ ಬೌಲಿಂಗ್ನಲ್ಲಿ ಎಂ.ಎಸ್ ಧೋನಿಗೆ ಕ್ಯಾಚ್ ನೀಡಿದ್ರು. ಇವರ ಬೆನ್ನಲ್ಲೇ ಬಂದ ಮ್ಯಾಕ್ಸಿ ರಜತ್ ಮಾಡಿದ ತಪ್ಪನ್ನೇ ಮಾಡಿದ್ದಾರೆ. ಅದೇ ಮಾದರಿ ಬಾಲ್ ಮುಟ್ಟಿ ಧೋನಿಗೆ ಕ್ಯಾಚ್ ನೀಡಿದ್ದಾರೆ.
ಇನ್ನು, ಆರ್ಸಿಬಿ ಪರ ಓಪನಿಂಗ್ ಮಾಡಿದ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅಚ್ಚರಿ ರೀತಿಯಲ್ಲಿ ಔಟ್ ಆಗಿದ್ದಾರೆ. ಮುಸ್ತಾಫಿಜುರ್ ಬೌಲಿಂಗ್ನಲ್ಲಿ ಸಿಕ್ಸ್ ಹೊಡೆಯಲು ಹೋದ ಕೊಹ್ಲಿಯದ್ದು ಫೋರಾ ಅಥವಾ ಔಟಾ ಎಂದು ಅಂಪೈರ್ ಕನ್ಫ್ಯೂಸ್ ಆದರು. ಕೊಹ್ಲಿ 20 ಬಾಲ್ನಲ್ಲಿ 1 ಸಿಕ್ಸರ್ನೊಂದಿಗೆ 21 ರನ್ ಗಳಿಸಿದ್ರು. ಈ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ರು.
21 ಬಾಲ್ ಎದುರಿಸಿದ ಕ್ಯಾಮೆರಾನ್ ಗ್ರೀನ್ 1 ಫೋರ್ ಸಮೇತ 18 ರನ್ ಸಿಡಿಸಿದ್ರು. ಬಳಿಕ ಕ್ರೀಸ್ಗೆ ಬಂದ ಅನೂಜ್ ರಾವತ್ ಸಿಎಸ್ಕೆ ಬೌಲರ್ಗಳ ಬೆಂಡೆತ್ತಿದ್ರು. ಕೇವಲ 25 ಬಾಲ್ನಲ್ಲಿ 3 ಸಿಕ್ಸರ್, 4 ಫೋರ್ ಸಮೇತ 48 ರನ್ ಚಚ್ಚಿದ್ರು.
ಎಂದಿನಂತೆ ಈ ಬಾರಿ ದಿನೇಶ್ ಕಾರ್ತಿಕ್ ಮೋಡಿ ಮಾಡಿದ್ರು. ಕೇವಲ 25 ಬಾಲ್ನಲ್ಲಿ 2 ಸಿಕ್ಸರ್, 3 ಫೋರ್ ಸಮೇತ 38 ರನ್ ಬಾರಿಸಿದ್ರು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ