17 ವರ್ಷಗಳಿಂದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಇತಿಹಾಸ ಸೃಷ್ಟಿಸಿದ ತಂಡ
ಐಪಿಎಲ್ನಲ್ಲಿ ತನ್ನದೇ ಆದ ಬ್ರ್ಯಾಂಡ್ ಕ್ರಿಯೇಟ್ ಮಾಡಿರೋ ಟೀಮ್ ಎಂದರೆ RCB
2025ರ ಐಪಿಎಲ್ ಮೆಗಾ ಆಕ್ಷನ್ನಲ್ಲಿ ಬಲಿಷ್ಠ ಆಟಗಾರರ ಮೇಲೆ ಆರ್ಸಿಬಿ ಕಣ್ಣು..!
ಕಳೆದ 17 ವರ್ಷಗಳಿಂದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ತನ್ನದೇ ಆದ ಬ್ರ್ಯಾಂಡ್ ಕ್ರಿಯೇಟ್ ಮಾಡಿರೋ ತಂಡ ಎಂದರೆ ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು. ಎಂಥೆಂತಾ ಘಟಾನುಘಟಿ ಆಟಗಾರರು ಬಂದು ಹೋದ್ರೂ ಆರ್ಸಿಬಿ ಇನ್ನೂ ಕಪ್ ಗೆದ್ದಿಲ್ಲ. ಆದ್ರೂ ಆರಂಭದಿಂದಲೂ ಆರ್ಸಿಬಿ ಕ್ರೇಜ್ ಒಂದು ಚೂರು ಕಡಿಮೆ ಆಗಿಲ್ಲ.
ಇದುವರೆಗೂ ಆರ್ಸಿಬಿ ಮೂರು ಸಲ ಎಂದರೆ 2009, 2011 ಮತ್ತು 2016ರಲ್ಲಿ ಫೈನಲ್ ತಲುಪಿತ್ತು. ಕಳೆದ ಸೀಸನ್ನಲ್ಲಂತೂ ಆರ್ಸಿಬಿ ಪ್ಲೇ ಆಫ್ಗೆ ಹೋದ ರೀತಿ ಯಾವ ಸಿನಿಮಾಗೂ ಕಡಿಮೆ ಇರಲಿಲ್ಲ. ಪಾಯಿಂಟ್ಸ್ ಟೇಬಲ್ನಲ್ಲಿ ಕೊನೆಯಲ್ಲಿದ್ದ ಆರ್ಸಿಬಿ ಚೆನ್ನೈ ವಿರುದ್ಧ ಗೆದ್ದು ಪ್ಲೇ-ಆಫ್ಗೆ ರಾಯಲ್ ಎಂಟ್ರಿ ನೀಡಿದ್ರು. ಇಷ್ಟಾದ್ರೂ ಆರ್ಸಿಬಿ ಕಪ್ ಗೆಲ್ಲಲು ಆಗಲಿಲ್ಲ.
2025ರ ಐಪಿಎಲ್ನಲ್ಲೂ ಕಪ್ ಗೆಲ್ಲಲೇಬೇಕು ಅನ್ನೋ ಪ್ಲಾನ್ ಆರ್ಸಿಬಿ ತಂಡದ್ದು. ಹಾಗಾಗಿ ಎಲ್ಲ ತಂಡಗಳಂತೆ ಆರ್ಸಿಬಿ ಕೂಡ ಮೆಗಾ ಆಕ್ಷನ್ಗೆ ಭರ್ಜರಿ ತಯಾರಿ ನಡೆಸಿಕೊಳ್ಳುತ್ತಿದೆ. ಸದ್ಯ ತಂಡದಲ್ಲಿರೋ ಬಲಿಷ್ಠ ಆಟಗಾರರನ್ನು ಎಷ್ಟು ಬೇಕಾದ್ರೂ ದುಡ್ಡಾಗಲಿ ರೀಟೈನ್ ಮಾಡಿಕೊಳ್ಳಲು ಮುಂದಾಗಿದೆ.
ಆರ್ಸಿಬಿ ರೀಟೈನ್ ಮಾಡಿಕೊಳ್ಳೋ ಆಟಗಾರರು ಇವರೇ!
2025ರ ಐಪಿಎಲ್ಗಾಗಿ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯಲ್ಲಿ ಮೊದಲ ಹೆಸರು ಕೊಹ್ಲಿಯದ್ದು. ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭದಿಂದಲೂ ಕೊಹ್ಲಿ ಆರ್ಸಿಬಿ ತಂಡದಲ್ಲೇ ಇದ್ದಾರೆ. ಅನುಭವಿ ಬ್ಯಾಟರ್ ಕೊಹ್ಲಿ ಆರ್ಸಿಬಿ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಆಗಿದ್ದಾರೆ. ಇಷ್ಟೇ ಇಲ್ಲ 2024ರ ಐಪಿಎಲ್ನಲ್ಲಿ ಇಂಗ್ಲೆಂಡ್ ಆಲ್ರೌಂಡರ್ ವಿಲ್ ಜ್ಯಾಕ್ಸ್ ಉತ್ತಮ ಪ್ರದರ್ಶನ ನೀಡಿದ್ರು. ಹಾಗಾಗಿ ಮ್ಯಾಕ್ಸ್ವೆಲ್ ಬದಲಿಗೆ ವಿಲ್ ಜ್ಯಾಕ್ಸ್ ಅವರನ್ನು ಉಳಿಸಿಕೊಳ್ಳಬಹುದು. ಜತೆಗೆ ಸ್ಟಾರ್ ಬ್ಯಾಟರ್ ಆಗಿರೋ ರಜತ್ ಪಾಟಿದಾರ್ ಅವರನ್ನು ಆರ್ಸಿಬಿ ತಮ್ಮ ಕೋರ್ ತಂಡದ ಭಾಗವಾಗಿ ಇರಿಸಿಕೊಳ್ಳಲು ನಿರ್ಧಾರ ಮಾಡಿದೆ.
ಇದನ್ನೂ ಓದಿ: ಕೋಚ್ ಗಂಭೀರ್ ವಿರುದ್ಧ ಮತ್ತೆ ಆಕ್ರೋಶ ಹೊರಹಾಕಿದ KL ರಾಹುಲ್ ಫ್ಯಾನ್ಸ್; ಕಾರಣವೇನು..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್