newsfirstkannada.com

ಚೆನ್ನೈ ವಿರುದ್ಧ ಗೆಲ್ಲಲು ಆರ್​​​ಸಿಬಿ ಬಳಿಯಿದೆ ದೊಡ್ಡ ಬ್ರಹ್ಮಾಸ್ತ್ರ.. ಯಾರು ಆ ಮಿಸೈಲ್ ಮ್ಯಾನ್​​?

Share :

Published May 16, 2024 at 10:26pm

  ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಸೀಸನ್​​

  ಶನಿವಾರ ಚೆನ್ನೈ ಕಿಂಗ್ಸ್​, ಬೆಂಗಳೂರು ಟೀಮ್​ ಮಧ್ಯೆ ರೋಚಕ ಪಂದ್ಯ..!

  ಚೆನ್ನೈ ಟೀಮ್​​ ವಿರುದ್ಧ ಗೆಲ್ಲಲು ಆರ್​​ಸಿಬಿ ಬಳಿ ಇದ್ದಾರೆ ಮಿಸೈಲ್​ ಮ್ಯಾನ್​​

ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಇನ್ನೇನು ಮುಕ್ತಾಯದ ಹಂತಕ್ಕೆ ಬಂದಿದೆ. ಕೋಲ್ಕತ್ತಾ ನೈಟ್​ ರೈಡರ್ಸ್​​, ರಾಜಸ್ತಾನ್​ ರಾಯಲ್ಸ್​ ಈಗಾಗಲೇ ಪ್ಲೇ ಆಫ್​ಗೆ ಹೋಗಿವೆ. ಉಳಿದ 2 ಸ್ಥಾನಗಳಿಗಾಗಿ ಐದು ತಂಡಗಳ ಮಧ್ಯೆ ಭಾರೀ ಪೈಪೋಟಿ ನಡೆಯುತ್ತಿದೆ. ಮೇ 18ಕ್ಕೆ ಹೇಗಾದ್ರೂ ಮಾಡಿ ಗೆದ್ದು ಪ್ಲೇ ಆಫ್​ ಪ್ರವೇಶ ಮಾಡಲೇಬೇಕು ಎಂದು ಚೆನ್ನೈ, ಆರ್​​ಸಿಬಿ ತಂಡಗಳು ಎದುರು ನೋಡುತ್ತಿವೆ.

ಯಾವುದೇ ಕಾರಣಕ್ಕೂ ಪಂದ್ಯ ರದ್ದಾಗಬಾರದು. ಒಂದು ವೇಳೆ ಮ್ಯಾಚ್​​ ಕ್ಯಾನ್ಸಲ್​ ಆದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಕೋಟ್ಯಂತರ ಅಭಿಮಾನಿಗಳ ಕನಸು ನುಚ್ಚು ನೂರಾಗಲಿದೆ. ಫೀನಿಕ್ಸ್​​ನಂತೆ ಎದ್ದು ಬಂದು ಕೊನೆ ಕ್ಷಣದಲ್ಲಿ ಹೋರಾಟ ನಿಲ್ಲಿಸಲು ಸಾಧ್ಯವಿಲ್ಲ ಎಂದು ಫ್ಯಾನ್ಸ್​​ ಮಾತಾಡೋಕೆ ಶುರು ಮಾಡಿದ್ದಾರೆ.

ಮೇ 18ಕ್ಕೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ವಿರುದ್ಧ ನಡೆಯಲಿರೋ ಕೊನೆ ಲೀಗ್​ ಪಂದ್ಯ ಆರ್​ಸಿಬಿ ಪ್ಲೇಆಫ್​ ಸ್ಥಾನ ನಿರ್ಧರಿಸಲಿದೆ. ಏನೇ ಆದರೂ ಪಂದ್ಯ ಗೆಲ್ಲಲೇಬೇಕು ಎಂದು ಆರ್​​ಸಿಬಿ ಮುಂದಾಗಿದೆ. ಅತ್ತ ಚೆನ್ನೈ ಸೂಪರ್​ ಕಿಂಗ್ಸ್​​ ಆರ್​​ಸಿಬಿಯನ್ನು ಎದುರಿಸಲು ನಮ್ಮ ಬಳಿ ಡೆರಿಲ್ ಮಿಚೆಲ್, ರವೀಂದ್ರ ಜಡೇಜಾ, ಸಮೀರ್ ರಿಜ್ವಿ, ದೀಪಕ್ ಚಾಹರ್, ಮಹೇಶ್ ತೀಕ್ಷಣ, ಮುಸ್ತಾಫಿಜುರ್ ರಹಮಾನ್, ತುಷಾರ್ ದೇಶಪಾಂಡೆ ಇದ್ದಾರೆ ಎಂದು ಬೀಗುತ್ತಿದೆ.

ಇನ್ನೊಂದೆಡೆ ಚೆನ್ನೈ ಬೌಲಿಂಗ್​ಗೆ ಆರ್​​ಸಿಬಿ ಬಳಿ ದೊಡ್ಡ ಬ್ರಹ್ಮಾಸ್ತ್ರವೇ ಇದೆ. ಸ್ಪಿನ್ನರ್ಸ್​ ಬೆವರಿಳಿಸಲು ಆರ್​​ಸಿಬಿ ರಜತ್​ ಪಾಟಿದಾರ್​ ಸಜ್ಜಾಗಿದ್ದಾರೆ. ಕಳೆದ ಐದು ಪಂದ್ಯಗಳಲ್ಲೂ ರಜತ್​​​ ಸ್ಪಿನ್ನರ್ಸ್​ ಎದುರು ಅದ್ಭುತ ಬ್ಯಾಟಿಂಗ್​ ಮಾಡಿದ್ದಾರೆ. ಇವರಿಗೆ ಸಾಥ್​ ನೀಡಲು ಕೊಹ್ಲಿ, ಫಾಫ್ ಡುಪ್ಲೆಸಿಸ್, ಗ್ರೀನ್, ದಿನೇಶ್ ಕಾರ್ತಿಕ್ ಇದ್ದಾರೆ.

ಇದನ್ನೂ ಓದಿ: ಶನಿವಾರ ಚೆನ್ನೈ, ಬೆಂಗಳೂರು ಮಧ್ಯೆ ರೋಚಕ ಪಂದ್ಯ.. ಆರ್​​ಸಿಬಿಗೆ ಗುಡ್​ನ್ಯೂಸ್​​!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಚೆನ್ನೈ ವಿರುದ್ಧ ಗೆಲ್ಲಲು ಆರ್​​​ಸಿಬಿ ಬಳಿಯಿದೆ ದೊಡ್ಡ ಬ್ರಹ್ಮಾಸ್ತ್ರ.. ಯಾರು ಆ ಮಿಸೈಲ್ ಮ್ಯಾನ್​​?

https://newsfirstlive.com/wp-content/uploads/2024/05/Kohli_Rajat_1.jpg

Load More