ಬೆಂಗಳೂರಿಗೆ ಬಂತು ಆನೆಬಲ; ಆರ್​​​ಸಿಬಿಗೆ ಈ ಮೂವರು ಸ್ಫೋಟಕ ಆಟಗಾರರ ಎಂಟ್ರಿ!

author-image
Ganesh Nachikethu
Updated On
ಬೆಂಗಳೂರಿಗೆ ಬಂತು ಆನೆಬಲ; ಆರ್​​​ಸಿಬಿಗೆ ಈ ಮೂವರು ಸ್ಫೋಟಕ ಆಟಗಾರರ ಎಂಟ್ರಿ!
Advertisment
  • ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್​ ಲೀಗ್​ಗೆ ತಯಾರಿ!
  • ವರ್ಷದ ಕೊನೆಯಲ್ಲಿ ನಡೆಯಲಿರೋ​ 2025ರ ಐಪಿಎಲ್​​ ಮೆಗಾ ಆಕ್ಷನ್​​
  • ಮೂವರು ಪ್ಲೇಯರ್ಸ್​​​ ಮೇಲೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಕಣ್ಣು

ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್​ ಲೀಗ್​ಗೆ ತಯಾರಿ ಶುರುವಾಗಿದೆ. ವರ್ಷದ ಕೊನೆಯಲ್ಲಿ ನಡೆಯಲಿರೋ​ ಮೆಗಾ ಆಕ್ಷನ್​​ನಲ್ಲಿ ಬಲಿಷ್ಠ ತಂಡಗಳನ್ನ ಕಟ್ಟುವ ಲೆಕ್ಕಚಾರದಲ್ಲೇ ಎಲ್ಲ ಫ್ರಾಂಚೈಸಿಗಳು ಇವೆ. ಈ ವಿಚಾರದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಹ ಹೊರತಾಗಿಲ್ಲ.

ಕ್ಯಾಪ್ಟನ್ ಫಾಫ್​​ ಡುಪ್ಲೆಸಿಗೆ ಗೇಟ್ ಪಾಸ್ ನೀಡೋ ಲೆಕ್ಕಾಚಾರದಲ್ಲಿರುವ ಫ್ರಾಂಚೈಸಿ, ಈಗಾಗಲೇ ನ್ಯೂ ಕ್ಯಾಪ್ಟನ್​​ ಹುಡುಕಾಟದಲ್ಲಿ ಬ್ಯುಸಿಯಾಗಿದೆ. ಈ ಸ್ಥಾನಕ್ಕೆ ಕಪ್ ಗೆಲ್ಲಿಸಿಕೊಡಬಲ್ಲ ನಾಯಕನ ಕರೆತರುವ ಯತ್ನದಲ್ಲಿದೆ. ಹಾಗಾಗಿ ಮೆಗಾ ಹರಾಜಿನಲ್ಲಿ ಈ ಆಟಗಾರರ ಮೇಲೆ ಕಣ್ಣಿಟ್ಟಿದೆ. ಎಷ್ಟೇ ಕೋಟಿ ಖರ್ಚಾದರೂ ಸರಿ ಅವರನ್ನು ಖರೀದಿಸಲು ಹರಾಜಿನಲ್ಲಿ ಫೈಟ್ ಮಾಡಲು ನಿರ್ಧರಿಸಿದೆ.

ಮೂವರು ಸ್ಫೋಟಕ ಬ್ಯಾಟರ್ಸ್​ ಮೇಲೆ ಆರ್​​ಸಿಬಿ ಕಣ್ಣು!

ಸನ್​ರೈಸರ್ಸ್​ ಹೈದರಾಬಾದ್​ ತಂಡದ ವಿಧ್ವಂಸಕ ಬ್ಯಾಟ್ಸ್​​ಮನ್​ ಟ್ರಾವಿಸ್ ಹೆಡ್​ ಮೇಲೆ ಆರ್​ಸಿಬಿ ಕಣ್ಣಿಟ್ಟಿದೆ ಅನ್ನೋದು ಲೇಟೆಸ್ಟ್ ಸುದ್ದಿ. ಒಂದು ವೇಳೆ ಅವರನ್ನು ಸನ್​ ರೈಸರ್ಸ್​ ಹೈದರಾಬಾದ್ ತಂಡವು ಕೈಬಿಟ್ಟರೆ, ಆರ್​ಸಿಬಿ ಖರೀದಿಸೋದ್ರಲ್ಲಿ ಎರಡು ಮಾತಿಲ್ಲ. ಅಷ್ಟೇ ಅಲ್ಲ ಮಿಚೆಲ್ ಸ್ಟಾರ್ಕ್ ಒಬ್ಬ ಅತ್ಯುತ್ತಮ ಬೌಲರ್. KKR ಕೇವಲ ಒಬ್ಬ ವಿದೇಶಿ ಆಟಗಾರನನ್ನು ಉಳಿಸಿಕೊಳ್ಳುವುದರಿಂದ, ಸ್ಟಾರ್ಕ್ ಅವರನ್ನು ಕೈಬಿಡಬಹುದು. ಇಂತಹ ಪರಿಸ್ಥಿತಿಯಲ್ಲಿ ಆರ್‌ಸಿಬಿಗೆ ಸ್ಟಾರ್ಕ್‌ಗೆ ಅವಕಾಶ ಸಿಗಲಿದೆ. ಜತೆಗೆ ಫಿಲ್ ಸಾಲ್ಟ್ ಒಬ್ಬ ಅದ್ಭುತ ಬ್ಯಾಟ್ಸ್‌ಮನ್. ಆರ್‌ಸಿಬಿ ಡು ಪ್ಲೆಸಿಸ್ ಅವರನ್ನು ಕೈಬಿಟ್ಟರೆ ಅವರ ಸ್ಥಾನದಲ್ಲಿ ಸಾಲ್ಟ್ ಸ್ಫೋಟಕ ಓಪನಿಂಗ್ ನೀಡಬಹುದು.

ಇದನ್ನೂ ಓದಿ: ಬಾಂಗ್ಲಾ ವಿರುದ್ಧ ಟೆಸ್ಟ್​; ಕೊಹ್ಲಿ, ರೋಹಿತ್​​ ಅಲ್ಲವೇ ಅಲ್ಲ; ಭಾರತದ ಬಳಿ ಇದೆ ದೊಡ್ಡ ಮಿಸೈಲ್​​​!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment