ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಭರ್ಜರಿ ತಯಾರಿ
ಮುಂದಿನ ಸೀಸನ್ಗೆ ರೀಟೈನ್ ಲಿಸ್ಟ್ ರೆಡಿ ಮಾಡಿಕೊಳ್ಳುತ್ತಿರೋ ಆರ್ಸಿಬಿ ತಂಡ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ರಜತ್ ಪಾಟಿದಾರ್ ಔಟ್..!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟರ್ ರಜರ್ ಪಾಟೀದಾರ್. ಸ್ಟಾರ್ ಬ್ಯಾಟರ್ ರಜತ್ ಪಾಟಿದಾರ್ಗೆ ಕೊಕ್ ನೀಡಲು ಆರ್ಸಿಬಿ ಫ್ರಾಂಚೈಸಿ ನಿರ್ಧಾರ ಮಾಡಿದೆ ಅನ್ನೋ ಮಾತುಗಳು ಕೇಳಿ ಬಂದಿವೆ. ರಜತ್ ಪಾಟಿದಾರ್ ಜಾಗಕ್ಕೆ ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಆಟಗಾರನನ್ನು ಕೂರಿಸುವ ಸಾಧ್ಯತೆಗಳಿವೆ ಎಂದು ಭಾರೀ ಚರ್ಚೆ ನಡೆಯುತ್ತಿದೆ.
ಈಗಿನಿಂದಲೇ 2025ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಭರ್ಜರಿ ತಯಾರಿ ನಡೆಯುತ್ತಿದೆ. ಈ ವರ್ಷದ ಕೊನೆ ಡಿಸೆಂಬರ್ನಲ್ಲಿ ನಡೆಯಲಿರೋ 2025ರ ಮೆಗಾ ಹರಾಜಿನಲ್ಲಿ ಬಲಿಷ್ಠ ಆಟಗಾರರನ್ನು ಖರೀದಿ ಮಾಡುವ ಪ್ಲಾನ್ ಆರ್ಸಿಬಿಯದ್ದು. ಇದಕ್ಕೂ ಮುನ್ನ ತಮಗೆ ಬೇಕಾದ ಆಟಗಾರರನ್ನು ರೀಟೈನ್ ಮಾಡಿಕೊಳ್ಳಬೇಕಿದೆ. ಈ ರೀಟೈನ್ ಪಟ್ಟಿಯಿಂದ ರಜತ್ ಪಾಟಿದಾರ್ ಹೆಸರಿಲ್ಲ ಅನ್ನೋ ಮಾತುಗಳು ಕೇಳಿ ಬಂದಿವೆ.
ಇಶಾನ್ ಕಿಶನ್ಗೆ ಆರ್ಸಿಬಿ ಮಣೆ
ಇಶಾನ್ ಕಿಶನ್ ಮುಂಬೈ ಇಂಡಿಯನ್ಸ್ ತಂಡದ ಸ್ಫೋಟಕ ಬ್ಯಾಟ್ಸ್ಮನ್. ಮುಂದಿನ ಸೀಸನ್ ವೇಳೆ ಮುಂಬೈ ಇಂಡಿಯನ್ಸ್ ತಂಡವನ್ನು ಇಶಾನ್ ಕಿಶನ್ ತೊರೆಯೋದು ಪಕ್ಕಾ ಆಗಿದೆ. ಇವರು ಆಕ್ಷನ್ಗೆ ಬಂದರೆ ಆರ್ಸಿಬಿ ಬಿಡ್ ಮಾಡಲಿದೆ ಎಂದು ಹೇಳಲಾಗುತ್ತಿದೆ.
ಯಾರು ಈ ರಜತ್ ಪಾಟಿದಾರ್..?
ಅದು 2022ರ ಇಂಡಿಯನ್ ಪ್ರೀಮಿಯರ್ ಲೀಗ್ ಎಲಿಮಿನೇಟರ್ ಪಂದ್ಯ. ಅಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಅಬ್ಬರಿಸಿದ ಆರ್ಸಿಬಿ ಬ್ಯಾಟ್ಸ್ಮನ್ ರಜತ್ ಪಾಟಿದಾರ್ ಆಕರ್ಷಕ ಶತಕ ಸಿಡಿಸಿ ದಾಖಲೆ ಬರೆದಿದ್ದರು. ಲಕ್ನೋ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿತ್ತು. ಈ ಮೂಲಕ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಸಂಕಷ್ಟದಲ್ಲಿದ್ದ ತಂಡಕ್ಕೆ ರಜತ್ ಪಾಟಿದಾರ್ ಆಸರೆಯಾದರು. ಐಪಿಎಲ್ ಪ್ಲೇ ಆಫ್ ಪಂದ್ಯಗಳಲ್ಲಿ ಗರಿಷ್ಠ ರನ್ ಸಿಡಿಸಿದ ಅನ್ಕ್ಯಾಪ್ ಪ್ಲೇಯರ್ ಅನ್ನೋ ಹೆಗ್ಗಳಿಕೆಗೆ ರಜತ್ ಪಾಟಿದಾರ್ ಪಾತ್ರರಾಗಿದ್ದಾರೆ. ಅಂದಿನಿಂದ ಕ್ರೀಡಾ ಲೋಕದಲ್ಲಿ ಭಾರೀ ಸದ್ದು ಮಾಡಿದ್ದ ರಜತ್ ಪಾಟಿದಾರ್ಗೆ ಟೀಮ್ ಇಂಡಿಯಾ ಪರ ಆಡಲು ಅವಕಾಶ ಸಿಕ್ಕಿತ್ತು.
ಇದನ್ನೂ ಓದಿ: ಸೇಫ್ ಹ್ಯಾಂಡ್ ಯಾರದ್ದು.. ಕ್ಯಾಚ್ ಹಿಡಿಯೋದರಲ್ಲಿ ಕೊಹ್ಲಿ, ರೋಹಿತ್, ಗಿಲ್, ಜಡೇಜಾ ಇವರಲ್ಲಿ ಯಾರು ಬೆಸ್ಟ್?
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ