ಲ್ಯಾನಿಂಗ್ ಹಾಕುವ ತಂತ್ರಗಳಿಗೆ ಪ್ರತಿ ತಂತ್ರಗಳನ್ನ ಹಾಕಬೇಕು
ಎಲ್ಲಿಸ್ ಪರ್ರಿಯ ನಿರ್ಣಾಯಕ ಆಟವೇ ಆರ್ಸಿಬಿಗೆ ಮುಖ್ಯನಾ?
ಡೆಲ್ಲಿ ಟೀಮ್ ಅನ್ನು ಅಷ್ಟು ಸುಲಭವಾಗಿ ಕಡೆಗಣಿಸುವಂತಿಲ್ಲ
WPLನಲ್ಲಿ ಫೈನಲ್ನಲ್ಲಿ ಸ್ಮೃತಿ ಮಂದನಾ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪೈನಲ್ ಪಂದ್ಯದಲ್ಲಿಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅಖಾಡಕ್ಕೆ ಇಳಿಯಲಿದೆ. ಗೆಲ್ಲುವ ಪೇವರಿಟ್ ಟೀಮ್ ಆರ್ಸಿಬಿ ಆದರು ತವರಿನಲ್ಲಿ ಮೆಗ್ ಲ್ಯಾನಿಂಗ್ ಪಡೆಯನ್ನು ಬಗ್ಗೆ ಬಡಿಯುವುದು ಅಷ್ಟು ಸುಲಭವಲ್ಲ ಎಂದು ಹೇಳಲಾಗುತ್ತಿದೆ.
ಆಸ್ಟ್ರೇಲಿಯಾದ ಏಕದಿನ ವರ್ಲ್ಡ್ಕಪ್ ಗೆದ್ದಿರುವ ಮೆಗ್ ಲ್ಯಾನಿಂಗ್ ಐಡಿಯಾಗಳನ್ನು ತಲೆ ಕೆಳಗೆ ಮಾಡಿ ಆರ್ಸಿಬಿ ತಂಡ ಕಪ್ ಗೆಲ್ಲಬೇಕು ಎಂದರೆ ಭಾರೀ ತಂತ್ರಗಳನ್ನು ಮಾಡಬೇಕು. ಆರ್ಸಿಬಿ ಪರ ಓಪನಿಂಗ್ ಆಗಿ ಕಣಕ್ಕೆ ಇಳಿಯುವ ಸ್ಮೃತಿ ಮಂದನಾ ಮೊದಲ ಪವರ್ ಪ್ಲೇವರೆಗೆ ವಿಕೆಟ್ ಕಾಯ್ದುಕೊಳ್ಳಬೇಕು. ಅವಾಗ ಮಾತ್ರ ತಂಡದ ಪರ ರನ್ ವೇಗ ಇರುತ್ತದೆ. ಜೊತೆಗೆ ಹಿಂದೆ ಬರುವ ಬ್ಯಾಟ್ಸ್ವುಮೆನ್ಸ್ಗೆ ನಿರಾಳವಾಗಿ ಬ್ಯಾಟ್ ಮಾಡಲು ಅನುಕೂಲವಾಗುತ್ತದೆ.
ಇನ್ನು ಆಲ್ರೌಂಡರ್ ಎಲ್ಲಿಸ್ ಪೆರ್ರಿ ಆಕ್ರಮಣಕಾರಿ ಬೌಲಿಂಗ್ ಜೊತೆಗೆ ಬ್ಯಾಟ್ ಬೀಸಿದರೆ ಎಲ್ಲ ರೀತಿಯಿಂದಲೂ ತಂಡಕ್ಕೆ ನೆರವಾಗುತ್ತದೆ. ರಿಚಾ ಘೋಶ್ ಕೂಡ ಹೊಡಿಬಡಿ ಆಟದೊಂದಿಗೆ ತಂಡಕ್ಕೆ ರನ್ ತೆಗೆದುಕೊಂಡು ಬರಬೇಕಾಗುತ್ತದೆ. ಸೋಫಿ ಮೊಲಿನೆಕ್ಸ್, ಜಾರ್ಜಿಯಾ ವೇರ್ಹ್ಯಾಮ್, ಶ್ರೇಯಾಂಕ ಪಾಟೀಲ್ ಹಾಗೂ ಆಶಾ ಸೋಭಾನಾ ಒಳ್ಳೆಯ ಪ್ರದರ್ಶನ ನೀಡಿದರೆ ಆರ್ಸಿಬಿ WPL ಫೈನಲ್ನಲ್ಲಿ ಗೆಲುವು ಪಡೆಯುವುದು ಪಕ್ಕಾ.
ಅದರಂತೆ ಡೆಲ್ಲಿ ತಂಡವನ್ನು ಕಡೆಗಣಿಸುವಂತಿಲ್ಲ. ಏಕೆಂದರೆ ಮೆಗ್ ಲ್ಯಾನಿಂಗ್, ತಾನಿಯಾ ಭಾಟಿಯಾ, ಶಫಾಲಿ ವರ್ಮಾ, ಆಲಿಸ್ ಕ್ಯಾಪ್ಸೆ, ಜೆಮಿಮಾ ರಾಡ್ರಿಗಸ್, ಮರಿಝನ್ನೆ ಕಪ್, ಜೆಸ್ ಜೊನಾಸೆನ್ರಂಥ ಬಲಿಷ್ಠ ಆಟಗಾರ್ತಿಯರನ್ನ ಹೊಂದಿದೆ. ಹೀಗಾಗಿ ಆರ್ಸಿಬಿ ಫೈನಲ್ ಪಂದ್ಯದಲ್ಲಿ ಸೂಕ್ಷ್ಮವಾಗಿ ಹೆಜ್ಜೆ ಇಡಬೇಕಾಗಿದೆ. ಅಭಿಮಾನಿಗಳ ನಿರೀಕ್ಷೆಯಂತೆ ಆರ್ಸಿಬಿ ಫೈನಲ್ಗೆ ಹೋಗಿದ್ದು ಕಪ್ ಗೆಲ್ಲುವ ನಿರೀಕ್ಷೆ ದುಪ್ಪಟ್ಟು ಮಾಡಿದೆ. ಇದರ ಜೊತೆಗೆ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂ ಬ್ಯಾಟಿಂಗ್ಗೆ ಉತ್ತಮವಾದ ಪಿಚ್ ಆಗಿದೆ. ಟಾಸ್ ಗೆಲ್ಲುವ ತಂಡಕ್ಕೆ ವಿಜಯಲಕ್ಷ್ಮಿ ಒಲಿಯಬಹುದು ಎನ್ನುವುದು ಕ್ರಿಕೆಟ್ ತಜ್ಞರ ಅಭಿಪ್ರಾಯವಾಗಿದೆ.
WPL ಫೈನಲ್ ಪಂದ್ಯ ಇಂದು ಸಂಜೆ 7:30ಕ್ಕೆ ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ